ಜ಼ೀಕನ್ನಡ ಕಳೆದ ಹತ್ತು ವರ್ಷಗಳಿಂದ ಅತ್ಯುತ್ತಮ ಕಾರ್ಯಕ್ರಮಗಳನ್ನ ನೀಡುತ್ತಾ ಬಂದಿದ್ದು, ಗುಣ ಮಟ್ಟz ಮನರಂಜನೆಗೆ ಮನೆಮಾತಾಗಿದೆ. ಜೀಕನ್ನಡ ವಾಹಿನಿಯಲ್ಲಿಇತ್ತೀಚೆಗೆಆರಂಭವಾದಧಾರವಾಹಿ ಯಾರೆ ನೀ ಮೋಹಿನಿ ದಿನದಿಂದ ದಿನಕ್ಕೆ ತನ್ನಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.ಹಳ್ಳಿ ಸೊಗಡಿನ ವಿಭಿನ್ನಕಥಾ ಹಂದರವುಳ್ಳ ಮೋಹಿನಿಯಲ್ಲಿಇದೇ ಸೋಮವಾರದಿಂದ (೦೯/೦೪/೧೮) ಮೋಹಿನಿಯ ನಿಜ ಬದುಕಿನ ವಿಶೇಷ ಕಥೆಆರಂಭವಾಗುತ್ತಿದೆ.
ಕಥೆಯ ನಾಯಕ ಮುತ್ತುರಾಜರೈಸ್ ಮಿಲ್‌ನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಊರಿಗೆ ಮಾದರಿಯಾದಆದರ್ಶಉದ್ಯಮಿ. ಕಥೆಯ ನಾಯಕಿ ಬೆಳ್ಳಿ, ಚಿಕ್ಕಂದಿನಿಂದತನ್ನ ಮಾವ ಮುತ್ತು ಮೇಲೆ ಜೀವವನ್ನೇ ಇಟ್ಟಕೊಂಡಿದ್ದಾಳೆ.ಪ್ರತಿಕ್ಷಣ, ಪ್ರತಿ ನಿಮಿಷ ಮುತ್ತುವನ್ನ ಮದುವೆಯಾಗುವ ಕನಸು ಈಕೆಯದ್ದು.
ಮುತ್ತುವಿನ ಮೊದಲನೆ ಹೆಂಡತಿ ಚಿತ್ರಾಳ ಸಾವನ್ನಪ್ಪಿದ್ದು, ಅವಳ ಇಚ್ಛೆಗೆ ತದ್ವಿರುದ್ಧವಾಗಿ
ಈಗ ಮಾಯಾ-ಮುತ್ತು ಮದುವೆಯ ಹಂತಕ್ಕೆಕಥೆ ಬಂದು ನಿಂತಿದೆ.ಹೀಗಾಗಿ ಇದಕ್ಕೆಅಡ್ಡಗಾಲಾಗಿ ನಿಂತಿದ್ದಾಳೆ ಮೋಹಿನಿ.ಅಕಾಲಿಕ ಮರಣಕ್ಕೆತುತ್ತಾದ ಚಿತ್ರಾಳ ಆತ್ಮವೇ ಮೋಹಿನಿ.
ಮುತ್ತುವಿನ ಮಲತಾಯಿ ನೀಲಾಂಬರಿಜೊತೆ ಸೇರಿಕೊಂಡು ಮುತ್ತು ಆಸ್ತಿ ಕಬಳಿಸೋದು ಮಾಯಾ ಆಲೋಚನೆ. ಆದರೆ ಮೋಹಿನಿ ಇಲ್ಲಿವರೆಗೆಅದಕ್ಕೆಆಸ್ಪದ ನೀಡಿಲ್ಲ. ಬೆಳ್ಳಿಗೆ ಬೆಂಗಾವಲಾಗಿ ನಿಂತುದುಷ್ಟರಎಲ್ಲ ಪ್ರಯತ್ನಗಳಿಂದ ಆಕೆಯನ್ನು ಕಾಪಾಡುತ್ತಿದ್ದಾಳೆ ಮೋಹಿನಿ.
ಇದುವರೆಗೆದೇವರಂತೆಕಂಡಿದ್ದ ಮೋಹಿನಿಯ ಬದುಕಿನ ಹಿಂದೊಂದು ನೋವಿನ ಕಥೆಯಿದೆ.ಒಂದಷ್ಟು ರಹಸ್ಯಗಳು ಅಡಗಿವೆ. ಅವೆಲ್ಲನ್ನೂ ಎಳೆಎಳೆಯಾಗಿ ಬಿಡಿಸಿ ಮೋಹಿನಿ ಸಾವಿನ ಮರ್ಮರಕಥೆ ಹೇಳುವ ವಿಶೇಷ ಸಂಚಿಕೆಇದೇ ಸೋಮವಾರದಿಂದಆರಂಭವಾಗುತ್ತಿದೆ.
ಕಿರುತೆರೆಜಗತ್ತಿನಜನಪ್ರಿಯ ನಿರ್ದೇಶಕರಾದ ಶ್ರುತಿ ನಾಯ್ಡು ಮತ್ತುರಮೇಶ್‌ಇಂದಿರಾ ಈ ಧಾರವಾಹಿಯನ್ನು ನಿರ್ದೇಶಿಸಿ ನಿರ್ಮಾಣ ಮಾಡುತ್ತಿದ್ದಾರೆ.ಸೋಮವಾರದಿಂದ ಶುಕ್ರವಾರದವರೆಗೆರಾತ್ರಿ ೭.೩೦ರಿಂದ ೮ರವರೆಗೆ ಜೀಕನ್ನಡ ವಾಹಿನಿಯಲ್ಲಿಯಾರೇ ನೀ ಮೋಹಿನಿ ಪ್ರಸಾರವಾಗುತ್ತಿದೆ.