Chief Editor
Manohar. R (Manu)
Photo Journalist
chitrataramanu@gmail.com
+91 9845549026
ವಿಠಲ್ ಭಟ್ ಹ್ಯಾಂಗೋವರ್
Posted date: 06 Fri, Apr 2018 06:48:11 PM
ನಿರ್ದೇಶಕ ವಿಠಲ್ ಭಟ್ ತನ್ನ ನಟನಾ ತರಬೇತಿ ಶಾಲೆಯಾದ ಫಿಲಂ ಫ್ಯಾಕ್ಟರಿಯಲ್ಲಿ ಹ್ಯಾಂಗೋವರ್ ಚಿತ್ರದ ನಾಯಕರಾದ ಭರತ್, ರಾಜ್ ಭನಾವತ್, ಚಿರಾಗ್ ಮತ್ತು ನಾಯಕಿಯರಾದ ನಂದಿನಿ ನಟರಾಜ್, ಸಹನ್ ಪೊನ್ನಮ್ಮ ಅಷ್ಟೇ ಅಲ್ಲದೇ ಪೋಷಕ ನಟರಾದ ಶಶಾಂಕ್, ರಂಜನ್, ದ್ರುಪದ್, ಸೋಹನ್ ಮತ್ತು ಪ್ರಿಯಾಂಕ ಎಲ್ಲರೂ ವಿಠಲ್ ಭಟ್ ಹತ್ತಿರ ನಟನಾ ತರಬೇತಿಯನ್ನು ಪಡೆದ ವಿಧ್ಯಾರ್ಥಿಗಳು.
ಮೈಸೂರಿನಲ್ಲಿರುವ ವಿಠಲ್ ಭಟ್‌ರವರ ಫಿಲಂ ಫ್ಯಾಕ್ಟರಿಯಲ್ಲಿ ನಟನಾ ತರಬೇತಿಯನ್ನು ಹೊಂದಿದ ವಿಧ್ಯಾರ್ಥಿಗಳನ್ನೇ ಆಯ್ಕೆ ಮಾಡಿಕೊಂಡು ಚಿತ್ರದ ಪಾತ್ರಕ್ಕೆ ಬೇಕಾದ ನಟನಾ ವರ್ಕ್‌ಶಾಪ್ ಮಾಡಿ, ನಿರ್ಮಾಪಕರಾದ ರಾಕೇಶ್ ಡಿ ಅವರಿಗೆ ಕಥೆಯನ್ನು ಒಪ್ಪಿಸಿ, ಇಡೀ ಹ್ಯಾಂಗೋವರನ್ನು ಮೈಸೂರು, ಬೆಂಗಳೂರು ಮತ್ತು ಊಟಿಯಲ್ಲಿ ಚಿತ್ರೀಕರಿಸಿದ್ದಾರಂತೆ. 
ಸುಮಾರು ೩೬ದಿನಗಳಲ್ಲಿ ತಯಾರಾದ ಹ್ಯಾಂಗೋವರ್ ಚಿತ್ರಕ್ಕೆ ಅಚ್ಚುಕಟ್ಟಾದ ಸಂಭಾಷಣೆಯನ್ನು ಒದಗಿಸಿದ್ದಾರೆ ಗಣೇಶ್ ರಾಣಿಬೆನ್ನೂರು, ಕಥೆಯ ಸನ್ನಿವೇಷಕ್ಕೆ ತಕ್ಕಂತೆ ಎರಡು ಸುಮಧುರವಾದ ಸಂಗೀತವನ್ನು ಒದಗಿಸಿಕೊಟ್ಟಿದ್ದಾರೆ ಸಂಗೀತ ನಿರ್ದೇಶಕ ವೀರ್ ಸಮರ್ಥ್ ಮತ್ತು ಅಷ್ಟೇ ಸುಂದರವಾಗಿ ಛಾಯಾಗ್ರಹಣವನ್ನು ಮಾಡಿದ್ದಾರೆ ಯೋಗಿ. ಕಿರಣ್ ಕುಮಾರ್ ಚಿತ್ರದ ಸಂಕಲನಗಾರ.
ಹ್ಯಾಂಗೋವರ್ ಮೂವರು ಯುವಕರ ಕಥೆ.. ಜಾಲಿ, ಮೋಜು-ಮಸ್ತಿ ಮಾಡುತ್ತಾ ಸಂತೋಷದಿಂದ ಇರುವ ಇವರ ಜೀವನದಲ್ಲಿ ನಡೆಯುವ ಒಂದು ಸನ್ನಿವೇಷ ಇವರ ಜೀವನ ಶೈಲಿಯನ್ನೇ ಬದಲಾಯಿಸುವಷ್ಟು ದೊಡ್ಡ ಸಮಸ್ಯೆಯಾಗಿ ಬಲಾಗುತ್ತದೆ. ಇದರಿಂದ ಪಾರಾಗುವ ಪ್ರತಿಯೊಂದು ಸನ್ನಿವೇಷವೂ ಚಿತ್ರ ನೋಡುವ ವಿಕ್ಷಕರಿಗೆ ವಿಶೇಷ ಅನುಭೂತಿಯನ್ನು ನೀಡುತ್ತದೆ. ಹ್ಯಾಂಗೋವರ್ ಒಂದು ಸಸ್ಪೆನ್ಸ್-ಥ್ರಿಲ್ಲರ್ ಕಥೆ..
ವಿಶೇಷವಾದ ಹಾಡೊಂದಕ್ಕೆ ನೀತು ಅವರ ಹೆಜ್ಜೆ, ಕಲೈರವರ ನೃತ್ಯ ಸಂಯೋಜನೆ ಚಿತ್ರದ ಹೈಲೆಟ್ಟಾಗಿ ನಿಲ್ಲುತ್ತದೆ ಮತ್ತು ಚಿತ್ರದ ರಿವರ‍್ಸ್ ಸ್ಕ್ರೀನ್ ಪ್ಲೇ ಮತ್ತೊಂದು ಹೈಲೆಟ್.
ಸಧ್ಯದಲ್ಲೇ ಹಾಡುಗಳನ್ನು ಪ್ರೇಕ್ಷಕರಿಗೆ ಕೇಳಿಸಲು ಎಲ್ಲಾ ತಯಾರಿಯನ್ನು ನಡೆಸುತ್ತಿದೆ ಚಿತ್ರತಂಡ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ವಿಠಲ್ ಭಟ್ ಹ್ಯಾಂಗೋವರ್ - Chitratara.com
Copyright 2009 chitratara.com Reproduction is forbidden unless authorized. All rights reserved.