Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೋಲ್ದನ್ ಸ್ಟಾರ್ ಗಣೇಶ್ ಅಭಿನಯದ `ಗೀತಾ` ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಪೂರ್ಣ
Posted date: 03 Thu, Jan 2019 02:10:46 PM

ಎಸ್.ಎಸ್.ಫ಼ಿಲಂಸ್ ಹಾಗೂ ಗೋಲ್ಡನ್ ಮೂವೀಸ್ ಮೂಲಕ ಸೈಯದ್ ಸಲಾಂ ಹಾಗೂ ಶಿಲ್ಪಾಗಣೇಶ್ ಅವರು ನಿರ್ಮಿಸುತ್ತಿರುವ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗೀತಾ‘ ಚಿತ್ರಕ್ಕೆ ಕೊಲ್ಕತ್ತಾ ಹಾಗೂ ಮನಾಲಿಯಲ್ಲಿ ೧೫ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆದಿದೆ. ಮೊದಲನೇ ಹಂತದಲ್ಲಿ ಮಾತಿನಭಾಗ ಹಾಗೂ ಒಂದು ಹಾಡಿನ ಚಿತ್ರೀಕರಣವಾಗಿದೆ. ಗಣೇಶ್, ಶಾನ್ವಿ ಶ್ರೀವಾಸ್ತವ್, ಪಾರ್ವತಿ, ಸುಧಾರಾಣಿ, ಅಚ್ಯುತರಾವ್ ಹಾಗೂ ಪ್ರಯಾಗ ಮಾರ್ಟಿನ್ ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಜನವರಿ ಕೊನೆ ಅಥವಾ ಫ಼ೆಭ್ರವರಿ ಮೊದಲವಾರದಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮೈಸೂರಿನಲ್ಲಿ ನಡೆಯಲಿದೆ.
‘ಮಿಸ್ತರ್ & ಮಿಸ್ಸಸ್ ರಾಮಾಚಾರಿ ಹಾಗೂ ‘ರಾಜಕುಮಾರ ಚಿತ್ರಗಳಿಗೆ ಸಂತೋಷ್ ಆನಂದರಾಮ್ ಅವರ ಜೊತೆ ಕಾರ್ಯ ನಿರ್ವಹಿಸಿ ಅನುಭವವಿರುವ ವಿಜಯ್ ನಾಗೇಂದ್ರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರ.  ವಿಜಯ್ ನಾಗೇಂದ್ರ ಅವರೆ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ನಾಗೇಂದ್ರ ಸಂಭಾಷಣೆ ಬರೆದಿದ್ದಾರೆ.
 ಗಣೇಶ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಕೇರಳದ ಪಾರ್ವತಿ ಅರುಣ್, ಪ್ರಯಾಗ ಮಾಲ್ಟಿನ್ ಹಾಗೂ ಶಾನ್ವಿ ಶ್ರೀವಾಸ್ತವ್ ಮೂವರು ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ದೇವರಾಜ್, ಅಚ್ಯುತಕುಮಾರ್, ಸುಧಾರಾಣಿ, ರಂಗಾಯಣ ರಘು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.  ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜ಼್ಞಾನೇಶ್ ಮಠದ್ ಅವರ ಸಂಕಲನವಿದೆ.  

      

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೋಲ್ದನ್ ಸ್ಟಾರ್ ಗಣೇಶ್ ಅಭಿನಯದ `ಗೀತಾ` ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.