Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೀ ಸರಿಗಮಪದಲ್ಲಿ ಮರುಕಳಿಸುವ ಶಾಲಾನೆನಪು
Posted date: 09 Tue, Apr 2019 02:19:08 PM

 ಜೀ ಕನ್ನಡ ವಾಹಿನಿ ಕನ್ನಡಿಗರ ಪ್ರತಿ ಮನೆಯ ಕಿರುತೆರೆಯಲ್ಲಿ ತನ್ನ ವಿಭಿನ್ನ ಹಾಗೂ ವಿಶೇಷ ಕಾರ್ಯಕ್ರಮಗಳ ಮೂಲಕ ಅಗ್ರಸ್ಥಾನ ಗಳಿಸಿದೆ. ಅದೇರೀತಿ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾದ  ಸರಿಗಮಪ ಕಾರ್ಯಕ್ರಮ ಈಗ ಹೊಸ ರೂಪದೊಂದಿಗೆ ಬರುತ್ತಿದೆ. ಇಡೀ ಕರ್ನಾಟಕವೇ ಮೆಚ್ಚಿಕೊಂಡಿರುವ   ಸರಿಗಮಪ ಲಿಟಲ್‌ಚಾಂಪ್ಸ್ ಸೀಸನ್ 16 ಈಗ ಸಂಗೀತದ ಹೊಸ ಅಲೆಗಳೊಂದಿಗೆ ಮತ್ತೊಮ್ಮೆ ಇಡೀ ಕರ್ನಾಟಕದ ಪ್ರೇPಕರನ್ನು ತಮ್ಮ ಬಾಲ್ಯಕ್ಕೆ, ಸರ್ಕಾರಿ ಶಾಲೆಗೆ ಕರೆದುಕೊಂಡು ಹೋಗುತ್ತಿದೆ.

ಈ ಹಿಂದಿನ ಸಂಚಿಕೆಗಳಲ್ಲಿ ಸ್ಪರ್ಧಿ ರುಬಿನಾ ಅಚಾನಕ್ಕಾಗಿ ಹಾಡಿದ ಸರ್ಕಾರಿ ಶಾಲೆಯ ಹಾಡು ಎಲ್ಲಾ ಕಡೆ  ಪ್ರಚಲಿತವಾಗಿತ್ತು. ನಟ ಪುನೀತ್ ರಾಜಕುಮಾರ್ ಕೂಡ ರುಬೀನಾಳನ್ನು ಮನೆಗೆ ಕರೆದು, ಅವಳ ಜೊತೆಯಲ್ಲಿ ವೀಡಿಯೋ ನೋಡಿ ಖುಷಿಪಟ್ಟಿದ್ದರು. ಆಗ ಸರಿಗಮಪ ತೀರ್ಪುಗಾರರು ಆಸೆಪಟ್ಟಂತೆ ಈ ವಾರ ಸರಿಗಮಪ ವೇದಿಕೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ದಿನಾಚರಣೆ ಆಚರಿಸಲಿzರೆ. ಈ ಶಾಲಾ ದಿನಾಚರಣೆಯ ಬಹುದೊಡ್ಡ ವಿಶೇಷತೆ ಎಂದರೆ ಮಕ್ಕಳ ಜೊತೆಗೆ ಅನುಶ್ರೀ, ವಿಜಯ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ಮತ್ತೆ ತಮ್ಮ ಸ್ಕೂಲ್ ಯುನಿಫಾರ್ಮ್ ಧರಿಸಿ ಮಕ್ಕಳಾಗಿ ವೇದಿಕೆಯನ್ನು ಅಲಂಕರಿಸಲಿzರೆ. ಇವರೆಲ್ಲರ ಮುಖ್ಯೋಪಾಧ್ಯಾಯರಾಗಿರುವವರು ನಾದಬ್ರಹ್ಮ ಹಂಸಲೇಖ.

ಈ ಶಾಲಾ ದಿನಾಚರಣೆಯ ವಿಶೇಷ ಸಂಚಿಕೆಯಲ್ಲಿ ಸರಿಗಮಪ ತಂಡ ರಾಜ್ಯದ ವಿವಿಧ ಭಾಗಗಳಿಂದ ಏಳು ಮಾದರಿ ಶಾಲೆಯ ಶಿPಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸರಿಗಮಪ ವೇದಿಕೆಗೆ ಕರೆತಂದಿzರೆ. ತುಮಕೂರು ಜಿಯ ಕಾಡಶೆಟ್ಟಿಹಳ್ಳಿ, ಶಿವಮೊಗ್ಗ ಜಿಯ ನಾಲೂರು, ದಾವಣಗೆರೆ ಜಿಲ್ಲೆಯ ಆನಗೋಡು, ಚಾಮರಾಜನಗರ ಜಿಯ ಹೊಂಗಹಳ್ಳಿ, ಬೆಳಗಾವಿ ಜಿಯ ಭೂತರಾಮನಹಟ್ಟಿ ಅಲ್ಲದೆ  ರುಬೀನಾಳ ಶಾಲೆಯಾದ ಹಾವೇರಿ ಜಿ ಮೇವುಂಡಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮೋನಮ್ಮ ಓದಿದ ರಾಯಚೂರು ಜಿ ಸೋಮನಮರಡಿಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು  ಸರಿಗಮಪ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.

ಯುನಿಫಾರ್ಮ್‌ನಲ್ಲಿ ಪುಟಾಣಿಗಳು ಕನ್ನಡ ಚಂದನವನದ ಮಕ್ಕಳ ಗೀತೆಗಳನ್ನು ಹಾಡಿದರೆ, ಅನುಶ್ರೀ ಹಾಗೂ  ತೀರ್ಪುಗಾರರು ಅವರ ಯುನಿಫಾರ್ಮ್‌ನಲ್ಲಿ ವಿಶೇಷ ಮನರಂಜನೆ ನೀಡುತ್ತಾರೆ.  ಮನಸಿಗೆ ಮುದ, ಮನರಂಜನೆ ನೀಡುವ ಈ ವಿಶೇಷ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೀ ಸರಿಗಮಪದಲ್ಲಿ ಮರುಕಳಿಸುವ ಶಾಲಾನೆನಪು - Chitratara.com
Copyright 2009 chitratara.com Reproduction is forbidden unless authorized. All rights reserved.