Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೇ ತಿಂಗಳಲ್ಲಿ `ಐ ಲವ್ ಯು` ಚಿತ್ರ ತೆರೆಗೆ
Posted date: 16 Tue, Apr 2019 02:15:46 PM

ಆರ್.ಚಂದ್ರು ಅವರ ನಿರ್ದೇಶನದಲ್ಲಿ ಸೂಪರ್‌ಸ್ಟಾರ್ ಉಪೇಂದ್ರ ಅವರು ನಾಯಕರಾಗಿ ನಟಿಸಿರುವ ‘ಐ ಲವ್ ಯು‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರೀಕರಣ ನಂತರದ ಚಟುವಟಿಕೆಗಳು ಕೊನೆಯ ಹಂತದಲ್ಲಿದೆ. ಚಿತ್ರ ಮೇ ತಿಂಗಳಲ್ಲಿ ತೆರೆಗೆ ಬರಲಿದೆ. ಲೋಕಸಭಾ ಚುನಾವಣೆ ಸಮಯವಾಗಿರುವುದರಿಂದ ಉಪೇಂದ್ರ ಅವರು ಪ್ರಜಾಕೀಯ ಪಕ್ಷದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹಾಗಾಗಿ ಚಿತ್ರದ ಬಿಡುಗಡೆ ಸ್ವಲ್ಪ ವಿಳಂಬವಾಗಿದೆ ಎಂದು ತಿಳಿಸಿರುವ ನಿರ್ದೇಶಕರು ಈಗಾಗಲ್ಲೇ ಬಿಡುಗಡೆಯಾಗಿರುವ ಚಿತ್ರದ ಟ್ರೆಲರ್ ಹಾಗೂ ಹಾಡುಗಳು ಜನಮನಸೂರೆಗೊಂಡಿದೆ.

ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಚನದಲ್ಲಿ ಆರ್.ಚಂದ್ರು ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಡಾ||ಕಿರಣ್ ಸಂಗೀತ ನೀಡಿದ್ದಾರೆ. ಸುಜ಼್ಞಾನ್ ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ವಿನೋದ್, ಗಣೇಶ್ ಸಾಹಸ ನಿರ್ದೇಶನ, ಚಿನ್ನಿಪ್ರಕಾಶ್, ಶಂಕರ್, ಧನುಕುಮಾರ್ ನೃತ್ಯ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ರಚಿತಾರಾಂ, ಸೋನು ಗೌಡ, ಬ್ರಹ್ಮಾನಂದಂ, ಜೈಜಗದೀಶ್, ಹೊನ್ನವಳ್ಳಿ ಕೃಷ್ಣ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೇ ತಿಂಗಳಲ್ಲಿ `ಐ ಲವ್ ಯು` ಚಿತ್ರ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.