Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೆಹಬೂಬ್ ಸಾಬ್ ಹಾಡಿರುವ ‘ಕೃಷ್ಣ ಗಾರ್ಮೆಂಟ್ಸ್‘ ಚಿತ್ರದ ಹಾಡಿಗೆ ಅಪಾರ ಮೆಚ್ಚುಗೆ
Posted date: 13 Mon, May 2019 – 09:59:16 PM

ಆದಿತ್ಯ ಸಿನಿ ಕಂಬೈನ್ಸ್ ಲಾಂಛನದಲ್ಲಿ ಷಣ್ಮುಖ ಜಿ ಬೆಂಡಿಗೇರಿ ಅವರು ನಿರ್ಮಿಸಿರುವ ‘ಕೃಷ್ಣ ಗಾರ್ಮೆಂಟ್ಸ್‘ ಚಿತ್ರಕ್ಕಾಗಿ ಸಿದ್ದು ಪೂರ್ಣಚಂದ್ರ ಅವರು ಬರೆದಿರುವ ‘ಹಾಯಾದ ಹಾದಿಯಲಿ‘ ಹಾಡನ್ನು ಖ್ಯಾತ ಗಾಯಕ ಮೆಹಬೂಬ್ ಸಾಬ್ ಹಾಡಿದ್ದಾರೆ ಈ ಹಾಡಿನ ಲಿರಿಕಲ್ ವೀಡಿಯೋ ಆನಂದ್ ಆಡಿಯೋ ಮೂಲಕ ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ಬಿಡಿಗಡೆಯಾಗಿದ್ದು, ಕೇಳುಗರ ಮನ ಗೆದ್ದಿದೆ. ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ.  

ಪ್ರಶಾಂತ್ ರಾವ್ ವರ್ಕು ಅವರು ನಿರ್ಮಾಣದ ನಿರ್ವಹಣೆಯ(ಎಕ್ಸಿಕ್ಯೂಟಿವ್ ಪ್ರೊಡ್ಯುಸರ್) ಜವಾಬ್ದಾರಿ ಹೊತ್ತಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ಹಾಸನ, ದೊಡ್ದಬಳ್ಳಾಪುರ, ಬೆಂಗಳೂರು, ಶ್ರವಣ ಬೆಳಗೊಳ, ಚನ್ನಪಟ್ಟಣದಲ್ಲಿ ೩೫ದಿನಗಳ ಕಾಲ ಚಿತ್ರೀಕರಣ ನಡೆದಿದೆ.

‘ಶ್ರೀಮಾನ್ ಶ್ರೀಮತಿ‘ ಧಾರಾವಾಹಿ ಖ್ಯಾತಿಯ ಭಾಸ್ಕರ್ ನೀನಾಸಂ ಚಿತ್ರದ ನಾಯಕರಾಗಿ ನಟಿಸಿದ್ದು, ‘ಬ್ರಹ್ಮಾಸ್ತ್ರ‘ ಧಾರಾವಾಹಿಯ ರಶ್ಮಿತ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಂದು(ಲಕ್ಷ್ಮೀ ಬಾರಮ್ಮ), ರಾಜೇಶ್ ನಟರಂಗ, ಪ್ರಮಿಳಾ ಸುಬ್ರಮಣ್ಯಂ, ಲಕ್ಷ್ಮೀನರಸಿಂಹ, ರಜನಿಕಾಂತ್, ವರ್ಧನ್ ತೀರ್ಥಹಳ್ಲಿ, ಹೆಚ್.ಎಂ.ಟಿ.ವಿಜಯ್, ಕಿರಣ್ ಹೊನ್ನಾವರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿದಾನಂದ್ ಹಾಗೂ ಚಂದ್ರಶೇಖರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಅವರ ಸಂಕಲನವಿದೆ.


GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೆಹಬೂಬ್ ಸಾಬ್ ಹಾಡಿರುವ ‘ಕೃಷ್ಣ ಗಾರ್ಮೆಂಟ್ಸ್‘ ಚಿತ್ರದ ಹಾಡಿಗೆ ಅಪಾರ ಮೆಚ್ಚುಗೆ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95