Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಿನರ್ವಮಿಲ್‌ನಲ್ಲಿ ಜಲ್ಲಿಕಟ್ಟು
Posted date: 14 Tue, May 2019 08:20:27 AM

ಬೀರೇಶ್ವರ ಫ಼ಿಲಂ ಕಂಬೈನ್ಸ್ ಲಾಂಛನದಲ್ಲಿ ಭುವನ್ ಸುರೇಶ್ ಅವರು ನಿರ್ಮಿಸುತ್ತಿರುವ ‘ಜಲ್ಲಿಕಟ್ಟು‘ ಚಿತ್ರಕ್ಕಾಗಿ ಆಲ್ವಿನ್ ಅವರು ಬರೆದಿರುವ ‘ಸೂಪರ್ ಮಗಾ ನಮ್ಮ ಅಣ್ಣಾ ಸೂಪರೂ‘ ಎಂಬ ಹಾಡಿನ ಚಿತ್ರೀಕರಣ ಮಿನರ್ವಮಿಲ್‌ನಲ್ಲಿ ನಡೆದಿದೆ. ಕಿರಿಕ್ ಕೀರ್ತಿ, ಶೋಭ್‌ರಾಜ್, ಪ್ರಭುಸೂರ್ಯ, ಭರತ್, ನಿತೀಶ್ ಅಭಿನಯಿಸಿದ ಈ ಹಾಡಿಗೆ ನಾಗೇಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದರೊಂದಿಗೆ ‘ಜಲ್ಲಿಕಟ್ಟು‘ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಕನಕಪುರ, ಮಂಡ್ಯ, ಮಂಗಳೂರು, ಆಲ್ವಿನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೀರೇಶ್ ಅವರ ಛಾಯಾಗ್ರಹಣವಿದೆ. ವಿಶ್ವ ಸಂಕಲನ, ನಾಗೇಶ್ ನೃತ್ಯ ನಿರ್ದೇಶನ ಹಾಗೂ ವೈಲೆಂಟ್ ವೇಲು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಭುಸೂರ್ಯ, ನಿತೇಶ್, ಶ್ವೇತ, ನಿಖಿತ, ಕಿರಿಕ್ ಕೀರ್ತಿ, ಶೋಭ್‌ರಾಜ್, ಕರಾಟೆ ರಾಜ, ಮಜಾಟಾಕೀಸ್ ಪವನ್, ಉಗ್ರಂ ರವಿ, ಭರತ್, ಶುಚೀಂದ್ರ ಪ್ರಸಾದ್, ಸಂಗೀತ ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಿನರ್ವಮಿಲ್‌ನಲ್ಲಿ ಜಲ್ಲಿಕಟ್ಟು - Chitratara.com
Copyright 2009 chitratara.com Reproduction is forbidden unless authorized. All rights reserved.