Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪೂಜಾ ಗಾಂಧಿ ನಟನೆಯ ಸಂಹಾರಿಣಿ ಚಿತ್ರೀಕರಣ ಪೂರ್ಣ
Posted date: 14 Tue, May 2019 08:30:56 AM

ಅಂದು ‘ದಂಡು ಪಾಳ್ಯ’ ಸಿನಿಮಾದಲ್ಲಿ ನಿರ್ಭಯವಾಗಿ ಅಭಿನಯಿಸಿದ್ದವರು ಪೂಜಾ ಗಾಂಧಿ. ಈಗ ಪೂಜಾ ಗಾಂಧಿ ‘ಸಂಹಾರಿಣಿ’ ಎಂಬ ಸಾಹಸ ಪ್ರಧಾನ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಚಿತ್ರದ ಚಿತ್ರೀಕರಣವೀಗ ಸಂಪೂರ್ಣಗೊಂಡಿದೆ.

2 ಎಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ, ಕೆ ವಿ ಶಭರೀಶ್ ನಿರ್ಮಾಣ ಮಾಡಿರುವ, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವನ್ನು  ಕೆ ಜವಾಹರ್ ನಿರ್ದೇಶನ ಮಾಡಿದ್ದಾರೆ.

ಬಾಲಿವುಡ್ ಸಿನಿಮಾಗಳ ಪ್ರಸಿದ್ದ ಖಳ ನಟ ರಾಹುಲ್ ದೇವ್, ರವಿ ಕಾಳೆ, ಹ್ಯಾರಿ ಜೋಶ್ ಈ ಚಿತ್ರದಲ್ಲಿ ಖಳನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ನಟ ಕಿಶೋರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಚಿನ್ ಹಾಗೂ ಅರುಣ್ ಪೋಷಕ ಕಲಾವಿದರುಗಳಾಗಿ ಅಭಿನಯಿಸಿದ್ದಾರೆ.

ಮಾಸ್ ಮಾದ ಸಾಹಸ, ಡಾ ವಿ ನಾಗೇಂದ್ರ ಪ್ರಸಾದ್ ಗೀತ ಸಾಹಿತ್ಯ, ಅಖಿಲ್ ಸಂಕಲನ, ವಿ 2 ಸಂಗೀತ ನಿರ್ದೇಶನ, ರಾಜೇಶ್ ಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಗಂಗಾಧರ್ ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ಪ್ರಚಾರ ಕಲೆ ಲಕ್ಕಿ, ಸ್ಥಿರ ಛಾಯಾಗ್ರಹಣ ಸುರೇಶ್ ಮೆರ್ಲಿನ್ ಅವರು ಮಾಡಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪೂಜಾ ಗಾಂಧಿ ನಟನೆಯ ಸಂಹಾರಿಣಿ ಚಿತ್ರೀಕರಣ ಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.