ಜ಼ೀ ಕನ್ನಡ ವಾಹಿನಿಯ ದಿನ ನಿತ್ಯದ ಶುಭಾರಂಭದಕಾರ್ಯಕ್ರಮ ಮಹರ್ಷಿವಾಣೀ. ಸತತ ಐದು ವರ್ಷ ಗಳಿಂದ
ಬೆಳಗ್ಗೆ ೮ ರಿಂದ ೯.೩೦ ರ ವರೆಗೆ ಮೂಡಿಬರುತ್ತಿದ್ದು, ಆಧ್ಯಾತ್ಮಿಕತೆ, ಧಾರ್ಮಿಕತೆಯ ವಿಚಾರಗಳ ಜೊತೆಗೆ
ಜನರ ವ್ಯಯುಕ್ತಿಕ ಸಮಸ್ಯೆಗಳಿಗೆ ಪರಿಹಾರ, ಸಾಂತ್ವನ ನೀಡಿಜನರಲ್ಲಿ ಬದುಕಿನ ಬಗ್ಗೆ ಆಶಾ ಭಾವನೆಯನ್ನಯ ಮೂಡಿಸುತ್ತಿದೆ.
ಡಾ. ಮಹರ್ಷಿ ಆನಂದ್ ಗುರೂಜಿ ಯವರು ಧಾರ್ಮಿಕತೆಯ ಕಾಂii ಕ್ರಮಕ್ಕೆ ಮಾತ್ರ ಸೀಮಿತವಾಗದೆ ಜೀ ಕನ್ನಡ
ವಾಹಿನಿ ಮತ್ತು ಬ್ರಹ್ಮರ್ಷಿ ಆನಂದ ಸಿದ್ಧಿ ಪೀಠಂ ಸಂಸ್ಥಾನದ ಮೂಲಕ ಸಾಮಾಜಿಕ ಸಮಸ್ಯೆಗಳಿಗೂ ಕೂಡ ಸ್ಪಂದಿಸುತ್ತದ್ದಾರೆ.
ರೈತರ ಸಮಸ್ಯೆಗಳು, ಯೋಧರು ಹುತಾತ್ಮರಾದ ಘಟನೆಗಳು ಸಂಭವಿಸಿದಾಗ ಸಮಸ್ಯೆ ನಡೆದ ಸ್ಥಳಕ್ಕೆ ಸ್ವತಃ ತೆರಳಿ
ಆರ್ಥಿಕ ನೆರವನ್ನು ನೀಡಿದ್ದಾರೆ. ಇದೇರೀತಿ ಇತ್ತಿಚೆಗಷ್ಟೆ ಉತ್ತರ ಕರ್ನಾಟಕದ , ಮಲೆನಾಡಿನ ಮತ್ತು ಕರಾವಳಿ
ಭಾಗಗಳಲ್ಲಿ ಅತಿವೃಷ್ಟಿಯಿಂದಾಗಿ ಅಪಾರ ನಷ್ಟ ಉಂಟಾಗಿದೆ, ಜನಜೀವನ ಅಸ್ತವ್ಯಸ್ತವಾಗಿದೆ.
ಪಕೃತಿಯ ಮುನಿಸಿಗೆ ಮಾನವ ಕುಲ ಪ್ರಾಣಿ ಸಂಕುಲ ಕಂಗೆಟ್ಟಿದೆ. ಪ್ರಕೃತಿಯ ಮುನಿಸು ಶಮನವಾಗಲಿ
ಅನ್ನ ನೀಡುವರೈತ ಕುಲ ,ದೇಶಕಾಯುವ ಯೋಧರ ಶ್ರೇಯಸ್ಸಿಗಾಗಿ, ಪ್ರಕೃತಿಯ ವಿಕೋಪದಿಂದ ಜನರಿಗೆ ಉಂಟಾಗಿರುವ ಸಕಲ ಸಮಸ್ಯೆಗಳು ನಿವಾರಣೆ ಯಾಗಲಿ ಎಂದು ಗುರೂಜಿಯವರು ಜೀ ಕನ್ನಡ ವಾಹಿನಿ ಮತ್ತು ಬ್ರಹ್ಮರ್ಷಿ ಆನಂದ ಸಿದ್ಧಿಪೀಠಂ ವತಿಯಿಂದ ಮುಖ್ಯಮಂತ್ರಿ ಯವರ ಮನೆಗೆ ತೆರಳಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳನ್ನು ಸಮರ್ಪಿಸಿದ್ದಾರೆ