Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉದಯ ಟಿವಿ ಯಲ್ಲಿ ಹೊಸ ಧಾರಾವಾಹಿ `ಕಸ್ತೂರಿ ನಿವಾಸ`
Posted date: 04 Wed, Sep 2019 – 10:51:53 AM

ಹಳೆ ಬೇರು ಹೊಸ ಚಿಗುರುಕೂಡಿರಲು ಮರ ಸೊಬಗು  ಎಂಬ ಗಾದೆಯಂತೆ ಹಳೆ ತತ್ವಗಳಿಗೆ ಹೊಸ ಯುಕ್ತಿ ಸೇರಬೇಕು ಹಾಗೆ ಹೊಸದಾಗಿಚಿಗುರು ಬರುವುದು ಹಳೆ ಬೇರಿನಿಂದಲೇಎನ್ನುವುದು ಎಲ್ಲರಿಗೂ ಮನನವಾಗಬೇಕು. ಪ್ರಾಚೀನಕತೆಗೆಧಕ್ಕೆ ಬಾರದಂತೆಆಧುನಿಕತಗೆ ಪರಿವರ್ತಿಸುವ ವಿಷಯವನ್ನುಇಟ್ಟುಕೊಂಡುಜನಜೀವನಕ್ಕೆಉಪಯುಕ್ತವಾಗುವಂತಹಒಂದು ವಿನೂತನ ವಿಚಾರದಕುರಿತುಕಸ್ತೂರಿ ನಿವಾಸ ಎಂಬ ಹೊಸ ಧಾರಾವಾಹಿಯನ್ನುಉದಯ ಟಿವಿಇದೇ ಸೆಪ್ಟೆಂಬರ್ 9 ರಿಂದ ಸೊಮವಾರದಿಂದಶನಿವಾರದವರೆಗೆ ಸಂಜೆ 6.30 ಕ್ಕೆ ಪ್ರಾರಂಬಿಸುತ್ತಿದೆ.

ಈಗಾಗಲೇ ನಂದಿನಿ, ಕಾವೇರಿ, ನಾಯಕಿ, ಕ್ಷಮಾ, ನಾನು ನನ್ನ ಕನಸು ಎಂಬ ವಿಭಿನ್ನ ಕಥೆಗಳ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವಉದಯ ಟಿವಿ ಈಗ ಮತ್ತೊಂದು ವಿನೂತನಕಥೆಯ  ಕಸ್ತೂರಿ ನಿವಾಸ ಎಂಬ ಧಾರಾವಾಹಿಯನ್ನು ಪ್ರಾರಂಬಿಸುತ್ತಿದೆ.  ಮನೆತನ , ಸಂಪ್ರಾದಾಯ , ಸಂಸ್ಕೃತಿಅಂತ ನಂಬಿರೋ ಪಾರ್ವತಿಒಂದ್ಕಡೆಆದ್ರೆ , ಕಟ್ಟು ಪಾಡುಗಳಲ್ಲಿ ನಂಬಿಕೆ ಇಲ್ಲದೆ, ಹಕ್ಕಿಯಂತೆ ಹಾರಾಡಬೇಕುಅನ್ನೋ ಮೃದುಲಾಇನ್ನೋಂದ್ಕಡೆ. ಈ ಬೇರೆ ಬೇರೆ ಆಲೋಚನೆಗಳಿರೋ ಈ ಇಬ್ಬರನ್ನ ವಿಧಿ ಒಂದೆದಾರಿಯಲ್ಲಿ ನೆಡೆಯೋ ಹಾಗೆ ಮಾಡಿದರೆ ಹೇಗಿರುತ್ತದೆಎಂಬುದೆ ಈ ಧಾರಾವಾಹಿಯಕಥಾ ಹಂದರ.
ಹಿಂದಿನ ಕಾಲದ ಆಲೋಚನೆಗಲಿಗೆ ಆಧುನಿಕತೆಯನ್ನು ಅಳವಡಿಸಿಕೊಂಡು ನಡೆಯುವದರಲ್ಲಿತಪ್ಪೇನಿದೆ ಎಂಬ ವಾದಧಾರಾವಾಹಿಯ ನಾಯಕಿ ಮೃದಲಾಳವಾದವಾದರೆ, ಹೆಣ್ಣುಅಡುಗೆ ಮಾಡಬೇಕು , ತಗ್ಗಿ ಬಗ್ಗಿ ನಡೆಯಲೇಬೇಕು, ಮೈ ಮುಚ್ಚುವಹಾಗೆ ಉಡುಗೆತೊದುಗೆಗಲನ್ನಧರಿಸ ಬೆಕು ಎಂಬುದು ಪಾರ್ವತಿಯವಾದ. ಇವರುಗಳ ಮದ್ಧ್ಯೆತನ್ನಅಮ್ಮನ ಮಾತನ್ನು ಮೀರೋಕಾಗ್ದೆ, ಫ್ಯಾಶನ್‌ಡಿಸೈನರ್ ಆಗೋ ಕನಸು ಕಾಣ್ತಿರೋ ನಾಯಕತನ್ನ ಮನಸ್ಸಿನ ಮಾತನ್ನು ಧಿಕ್ಕರಿಸೊಕೆ ಆಗ್ದೆ ಒದ್ದಾಡ್ತಿರೋಕಥೆ ಕಸ್ತೂರಿ ನಿವಾಸ ಧಾರಾವಾಹಿಯನ್ನುಅದ್ಭುತವಾಗಿ ನಿರ್ದೇಶಿಸುತ್ತಿದ್ದಾರೆ ಮುಸ್ಸಂಜೆ ಮಹೆಶ್.

ನಾಯಕಿ ಮೃದಲಾ ಪಾತ್ರವನ್ನು ನಟಿ ವರ್ಷಾ ಮಾಡುತ್ತಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯ ಹೆಸರಾಂತ ನಟಿ ಆಶಾ ರಾಣಿ ಪಾರ್ವತಿಯ ಪಾತ್ರವನ್ನು ನೀರ್ವಹಿಸುತ್ತಿದ್ದಾರೆ. ನಾಯಕ ನಟನಾಗಿ ದೀಲಿಪ್ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಹಾಗೆ ರಾಜಗೋಪಾಲ ಜೋಶಿ , ರುತು , ಶಿಲಶ್ರೀ , ಸಿತಾರಾ ಹೀಗೆ ಹಲವಾರು ಪ್ರತಿಭಾವಂತಕಲಾವಿದರತಂಡು ಈ ಧಾರಾವಾಹಿಯಲ್ಲಿದೆ. ದೇವಿ ಸ್ಟುಡಿಯೋಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಕಿರುತೆರೆಯಜನಪ್ರಿಯ ನಟಿ ಜಯಶ್ರೀ ಈ ಧಾರಾವಾಹಿಯನ್ನಉದಯಟಿವಿಯ ವೀಕ್ಷಕರಿಗೆಅರ್ಪಿಸುತ್ತಿದ್ದಾರೆ. ಮಾಣಿಛಾಯಾಗ್ರಹಣ ಮಾಡುತ್ತಿದ್ದಾರೆ.
ವಿನೂತನ ಪ್ರಯತ್ನದ ಕಸ್ತೂರಿ ನಿವಾಸ ಉದಯಟಿವಿಯಲ್ಲಿಇದೇ ಸೆಪ್ಟಂಬರ್ 9  ರಿಂದ ಸಂಜೆ6.30
ಕ್ಕೆ ಪ್ರಸಾರವಾಗಲಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉದಯ ಟಿವಿ ಯಲ್ಲಿ ಹೊಸ ಧಾರಾವಾಹಿ `ಕಸ್ತೂರಿ ನಿವಾಸ` - Chitratara.com
Copyright 2009 chitratara.com Reproduction is forbidden unless authorized. All rights reserved.