Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪೂರ್ಣ ಚಂದ್ರ ತೇಜಸ್ವಿ ಕಂಪೋಸ್ ಮಾಡಿದ ಮುದ್ದೆ ಮುದ್ದೆ ಸೌಂಡ್ ಮಾಡಲು ಶುರುಮಾಡಿದೆ
Posted date: 15 Tue, Oct 2019 – 09:31:37 AM

ಕನ್ನಡ ಚಲನಚಿತ್ರ ಲೋಕದ  ಟ್ರೆಂಡ್ ಸೆಟ್ಟರ್ ಮ್ಯೂಸಿಕ್ ಡೈರೆಕ್ಟರ್ ಪೂರ್ಣ ಚಂದ್ರ ತೇಜಸ್ವಿ ಹಲವು ಪ್ರಥಮಗಳನ್ನ ಮಾಡಿರುವ ಸಾಧಕ.

ಹಿಟ್ ಚಿತ್ರ  ಲೂಸಿಯಾ ಮೂಲಕ ಚಿತ್ರ ರಂಗ ಪ್ರವೇಶಿದ ತೇಜಸ್ವಿ ತಿನ್ ಬೇಡಕಮ್ಮಿ ಅಂತ ಲಿರಿಕ್ ಬರೆದು ಕಂಪೋಸ್ ಮಾಡಿ ಮಣ್ಣಿನ ವಾಸನೆಯ ಪದ ಬರೆದವರು.
ರೆಗ್ಯೂಲಾರಿಟಿ ಟ್ರಾಕ್ ಬಿಟ್ಟು ಒಂದು ಯುನಿಕ್ ಸೌಂಡ್ ಕೇಳಿಸಿದ ಇವರು ಕನ್ನಡದ ಮಟ್ಟಿಗೆ ಪ್ರಪ್ರಥಮ ಬಾರಿಗೆ ಸಿನೆಮಾ ಸಾಂಗ್ ಮೇಕಿಂಗ್ ಮಾಡಿ ಅವತ್ತೆ ಅತಿ ಹೆಚ್ಚು ಜನರನ್ನ ಸೂಜಿಗಲ್ಲಂತೆ ಸೆಳೆದ ಯುವ ಸಂಗೀತ ನಿರ್ದೇಶಕ. ಫಿಲ್ಮ್‌ಫೇರ್ ಸೌತ್ ಅವಾರ್ಡ್ , ಸ್ಟೇಟ್ ಅವಾರ್ಡ್, ರೇಡಿಯೋ ಮಿರ್ಚಿ ಸೌತ್ ಅವಾರ್ಡ್ ಸೇರಿದಂತೆ ಏಳು ಅವಾರ್ಡ್ ಪಡೆದಿರುವ ಪ್ರತಿಭಾಶಾಲಿ.

ಕುವೆಂಪುರವರು ಬರೆದ ಬಾರಿಸು ಕನ್ನಡ ಡಿಂಢಿಮವ ಕನ್ನಡ ಗೀತೆಗೆ ಟ್ಯೂನ್ ಕಂಫೋಸ್ ಮಾಡಿ ಸಿನಿಮೇತರ ಇಂಡಿಪೆಂಡೆಂಟ್ ವಿಡಿಯೋ ಆಲ್ಬಂನ್ನ ಕೋಟಿಗೂ ಮಿಗಿಲು ಜನರನ್ನ ತಲುಪಿಸಿ ಕನ್ನಡತನವನ್ನ ಮೆರೆದ ಮೊದಲ ಕಂಪೋಸರ್ ವ್ಯಕ್ತಿ ಅಂತಲೇ ಹೇಳಬಹುದು.  ಇಂದಿಗೂ ಪ್ರತಿವರ್ಷ ಬರುವ ಕನ್ನಡ ರಾಜ್ಯೋತ್ಸವದಲ್ಲಿ ತಪ್ಪದೇ ಈ ಹಾಡನ್ನ ಕನ್ನಡಿಗರು ಖಾಯಂ ನೋಡುತ್ತಾರೆ. ಈ ಕ್ರೆಡಿಟ್ಟು ಪೂರ್ಣರಿಗೆ ಸಲ್ಲುತ್ತದೆ.

ಅಲ್ಲದೇ ಯು ಟರ್ನ್ ಕನ್ನಡ ಮತ್ತು ಯು ಟರ್ನ್ ತೆಲುಗು ಸಿನೆಮಾಗಳಿಗೆ ಹಿನ್ನೆಲೆ ಸಂಗೀತ ಮಾಡಿ ಯಶಸ್ವಿಯಾದ  ತೇಜಸ್ವಿ, ಈಗಷ್ಟೇ ಸದ್ದಿಲ್ಲದ್ದೇ ಕೊಟ್ಟ ಹಾಡು "ಏನ್ ಚಂದನೋ ತಕ್ಕೊ" ಹಾಡು ಎಪ್ಪತ್ತು ಲಕ್ಷ ಜನರನ್ನ ಮುಟ್ಟಿದೆ.ಈ ಹಾಡು ಟಿಕ್ ಟಾಕ್ ನಲ್ಲಿ  ನಲ್ವತ್ತು ಮಿಲಿಯಂ ಗೂ ಹೆಚ್ಚು ವೀಕ್ಷಣೆಗೆ ಒಳಗಾಗಿ ತುಂಬಾನೇ ವೈರಲ್ ಆದ ಹಾಡು. ಈಗಲೂ ಪ್ರತಿ ದಿನ ಒಂದೂವರೆ ಲಕ್ಷ ಜನ ವೀಕ್ಷಿಸುತಿದ್ದಾರೆ ಅಂದರೇ ಆ ಹಾಡಿಗೆ ಸ್ವರ ಪ್ರಸ್ತಾನ ಶಕ್ತಿ ಎಂತದ್ದು ಅಂತ ಯೋಚಿಸಲೇಬೇಕು.

ಹೀಗೆ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಪೂರ್ಣ ಅವರು ನಿನ್ನೆಯಷ್ಟೇ ಆನೆಬಲ ಚಿತ್ರ ಮುದ್ದೆ ಮುದ್ದೆ ಹಾಡನ್ನ ಬಿಡುಗಡೆ ಮಾಡಿದ್ದಾರೆ. ಈ ಹಾಡು ದಿನೇ ದಿನೇ ಜನಪ್ರಿಯತೆ ಗಳಿಸುತಿದೆ.ದೊಡ್ಡವರು ಚಿಕ್ಕವರು ಅನ್ನದೇ ಅವರ ಬಾಯಲ್ಲಿ ಮುದ್ದೆ ಮುದ್ದೆ
 ರಾಗಿಮುದ್ದೆ
ನಿದ್ದೆ ನಿದ್ದೆ ತಂಪು ನಿದ್ದೆ ಅಂತ ಗುನುಗುತಿದ್ದಾರೆ.

ಲೂಸಿಯಾ, ಯು ಟರ್ನ್, ಸೇರಿದಂತೆ ಅನೇಕ ಹಿಟ್ ಚಿತ್ರಗಳಿಗೆ ಸಂಗೀತ ನೀಡಿದ ಪೂರ್ಣ ಅವರು ಪ್ರಸ್ತುತ ಅನೇಕ ಹೊಸ ಹೊಸ ಚಿತ್ರಗಳಿಗೆ ಸಂಗೀತ ನೀಡುತಿದ್ದೂ ದೊಡ್ಡ ದೊಡ್ಡ ಸ್ಟಾರ್ ಗಳಿಗೂ ಸಿನೆಮಾ ಮಾಡಲಿ ಅವರ ಒಳಗಿರುವ ಸಂಗೀತದ ಪ್ರತಿಭೆ ಇನ್ನಷ್ಟು ಹೊರ ಬಂದು ಬಹು ದೊಡ್ಡ ಸಂಗೀತ ನಿರ್ದೇಶಕ ಆಗಲಿ.
        
ಇದು ವೈರಲ್ ವಿಡಿಯೋ ಗಳ ಜಮಾನ. ಆಗತಾನೇ ಸೋಶಿಯಲ್ ಮೀಡಿಯಾಗಳು ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲಿ ಕನ್ನಡದ ಮಟ್ಟಿಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಅತಿದೊಡ್ಡ ಸೌಂಡ್ ಮಾಡಿ ವೈರಲ್ ಆದ ಮೊದಲ ಮೇಕಿಂಗ್ ವಿಡಿಯೋ ಲೂಸಿಯಾ ಚಿತ್ರದ ತಿನ್ಬೇಡ ಕಮ್ಮಿ ತಿನ್ಬೇಡ ಹಾಡು. ಇದೊಂದು ಟ್ರೆಂಡ್ಸೆಟ್ಟರ್ ಆಗಿದ್ದು ಈಗ ಇತಿಹಾಸ.

ನಂತರದ ದಿನಗಳಲ್ಲಿ ಇಂಡಿಪೆಂಡೆಂಟ್ ವಿಡಿಯೋ ಸಾಂಗ್ ಗಳಿಗೆ ಅಷ್ಟೇನೂ ಪ್ರಾಮುಖ್ಯತೆ ಇರದ ದಿನಗಳಲ್ಲಿ ಬಾರಿಸು ಕನ್ನಡ ಡಿಂಡಿಮವ ಎನ್ನುವ ವಿಡಿಯೋ ಸಾಂಗ್ ದೊಡ್ಡಮಟ್ಟದಲ್ಲಿ ಹಿಟ್ಟಾಗಿ ಕೋಟ್ಯಂತರ ವ್ಯೂ ಪಡೆದು ಎಲ್ಲಾ ಇಂಡಿಪೆಂಡೆಂಟ್ ವಿಡಿಯೋ ಸಾಂಗ್ ಆರ್ಟಿಸ್ಟ್ ಗಳಿಗೆ ಚೈತನ್ಯ ತುಂಬಿದ ಪ್ರಥಮ ಕನ್ನಡದ ಸಾಂಗ್ ಎನ್ನಬಹುದು.

ನಂತರದ ದಿನಗಳಲ್ಲಿ ಹೆಚ್ಚು ಹೆಚ್ಚು ಇಂಡಿಪೆಂಡೆಂಟ್ ವಿಡಿಯೋ ಸಾಂಗ್ ಗಳು ಕನ್ನಡದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಗೊತ್ತೇ ಇದೆ.
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸೌಂಡ್ ಮಾಡುತ್ತಿರುವ ಏನ್ ಚಂದನ ತಗೋ ಎನ್ನುವ ಹಾಡು ಪ್ರಥಮ ಬಾರಿಗೆ ಮಾಡಿದ ರಿಹರ್ಸಲ್ ಸಾಂಗ್ ಎಂದೇ ಪ್ರಖ್ಯಾತಿ ಪಡೆದಿದೆ ಯೂಟ್ಯೂಬ್ ಫೇಸ್ಬುಕ್ ಗಳಲ್ಲಿ 70 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದರೆ ಇನ್ನು ಟಿಕ್ ಟಾಕ್ ನಲ್ಲಿ 4 ಕೋಟಿಗೂ ಮಿಗಿಲಾದ ವೀಕ್ಷಣೆ ಪಡೆದು ಟಿಕ್ ಟಾಕ್ ನಲ್ಲಿ ದೊಡ್ಡ ಟ್ರೆಂಡ್ ಹುಟ್ಟುಹಾಕಿದ ಹಾಡು.

ಇವೆಲ್ಲಾ ಹಾಡುಗಳ ಕಾಮನ್ ಫ್ಯಾಕ್ಟರ್ ಎಂದರೆ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಪ್ರತಿ ಬಾರಿ ಹೊಸ ಟ್ರೆಂಡ್ ಹಾಡುಗಳಿಗೆ ಒಡ್ಡಿಕೊಳ್ಳುವ ಇವರ ಮುದ್ದೆ ಮುದ್ದೆ ಎನ್ನುವ ಆನೆಬಲ ಚಿತ್ರದ ಒಂದು ಹಾಡು ಎಲ್ಲರ ಮನೆ ಮಾತಾಗಿದೆ ಮೊನ್ನೆಯಷ್ಟೆ ಬಿಡುಗಡೆಯಾದ ಹಾಡು ಇದೀಗ ಸೌಂಡ್ ಮಾಡಲು ಶುರುಮಾಡಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪೂರ್ಣ ಚಂದ್ರ ತೇಜಸ್ವಿ ಕಂಪೋಸ್ ಮಾಡಿದ ಮುದ್ದೆ ಮುದ್ದೆ ಸೌಂಡ್ ಮಾಡಲು ಶುರುಮಾಡಿದೆ - Chitratara.com
Copyright 2009 chitratara.com Reproduction is forbidden unless authorized. All rights reserved.