Chief Editor
Manohar. R (Manu)
Photo Journalist
chitrataramanu@gmail.com
+91 9845549026
ನವರಸ ನಟನ ಅಕಾಡೆಮಿ ಫೆಬ್ರವರಿಯಲ್ಲಿ ಹೊಸ ಬ್ಯಾಚ್
Posted date: 08 Wed, Jan 2020 03:31:03 PM

ಎಸ್.ನಾರಾಯಣ್‌ರಂಥ ಹಿರಿಯ ನಿರ್ದೇಶಕರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ನವರಸ ನಟನ ಅಕಾಡೆಮಿ ಈಗ ಮೂರನೇ ವರ್ಷಕ್ಕೆ ಕಾಲಿಟ್ಟಿದೆ.
2 ವರ್ಷದಲ್ಲಿ ಹತ್ತಾರು ಬ್ಯಾಚ್‌ಗಳಿಗೆ ನಟನೆ, ನಿರ್ದೇಶನ ಹಾಗೂ ಬಣ್ಣದ ಲೋಕದ ಇತರೆ ಚಟುವಟಿಕೆಗಳ ಕುರಿತು ತರಬೇತಿ ನೀಡಿದೆ. ಫೆ.10 ರಿಂದ ಹೊಸ ಬ್ಯಾಚ್‌ನ್ನು ಆರಂಭಿಸುತ್ತಿದ್ದು, ಈಸಲ ಮತ್ತಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಹೊಸ ವಿದ್ಯಾರ್ಥಿಗಳಿಗೆ ಅವೆಲ್ಲವೂ ಲಭ್ಯವಾಗಲಿದೆ.
ಸದ್ಯ ನಾಲ್ಕು ಮತ್ತು ಆರು ತಿಂಗಳ ನಟನೆ, ನಿರ್ದೇಶನದ ಕೋರ್ಸ್ ಹಾಗೂ ವಾರಾಂತ್ಯದ ತರಗತಿಗಳು ನಡೆಯುತ್ತಿದ್ದು, ಈ ವರ್ಷದಿಂದ ಸಂಜೆ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಉದ್ಯೋಗಸ್ಥರಿಗೆ ಇದು ತುಂಬಾ ಅನುಕೂಲವಾಗಲಿದೆ.

ಇದು ಕೂಡ ಫೆ.10 ರಿಂದ ಶುರುವಾಗಲಿದ್ದು, ಸಂಜೆ ೬ರಿಂದ ರಾತ್ರಿ ೯ರವರೆಗೆ ನಟನೆ ಹಾಗೂ ನಿರ್ದೇಶನದ ವಿಶೇಷ ತರಗತಿಗಳು ನಡೆಯಲಿದೆ. ಎರಡು ದಶಕಗಳಿಂದ ನೃತ್ಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ನವರಸ ನಟನ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಮಾಲೂರು ಶ್ರೀನಿವಾಸ್ ಸಹ ವಿದ್ಯಾರ್ಥಿಗಳಿಗೆ ನೃತ್ಯ ಹಾಗೂ ಇನ್ನಿತರೆ ಪಟ್ಟುಗಳನ್ನು ಕಲಿಸಿಕೊಡಲಿದ್ದಾರೆ.

ಈ ಸಂಸ್ಥೆಯಲ್ಲಿ ಕಲಿತ ಅನೇಕರು ಸಿನಿಮಾ, ಧಾರಾವಾಹಿಗಳಲ್ಲಿ ನಟನೆ ಹಾಗೂ ನಿರ್ದೇಶನದಲ್ಲಿ ತೊಡಗಿಕೊಂಡಿದ್ದಾರೆ.ಪ್ರಾಂಶುಪಾಲರಾದ ಎಸ್.ನಾರಾಯಣ್ ಹಾಗೂ ಎಸ್.ಮಹೇಂದರ್ರವರು ಪ್ರಾರಂಭದಿಂದ ವಿದ್ಯಾರ್ಥಿಗಳಿಗೆ ತಮ್ಮ ಅನುಭವಗಳನ್ನು ಧಾರೆ ಎರೆದಿದ್ದಾರೆ. ಹಾಗೆಯೇ ನಿರ್ದೇಶಕ ಲಕ್ಕಿ ಶಂಕರ್ ಹಾಗೂ ನೀನಾಸಂ ಬಳಗದ ನುರಿತವರು ನಟನೆ, ನಿರ್ದೇಶನ, ಡೈಲಾಗ್ ಡೆಲಿವರಿ ಹಾಗೂ ಕ್ಯಾಮೆರಾ ಎದುರಿಸುವ ಪರಿ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ. ಸಂಸ್ಥೆ ೩ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಮಯದಲ್ಲಿ ಜಗ್ಗೇಶ್ ಅವರ ಸಹಕಾರ ಮರೆಯಲಾಗದು ಎಂದು ಸಂಸ್ಥೆಯ ಎಂಡಿ ಮಾಲೂರು ಶ್ರೀನಿವಾಸ್ ಹೇಳುತ್ತಾರೆ. ಮಹಿಳೆಯರಿಗೆ ವಿಶೇಷ ರಿಯಾಯಿತಿ ಸಹ ಇಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ನವರಸ ನಟನ ಅಕಾಡೆಮಿ, ನಂ.9880219666/9880419666 ಗೆ ಸಂಪರ್ಕಿಸಬಹುದು.

ಸಂಸ್ಥೆ ಈವರೆಗೆ ಸಾಗಿದ ಹಾದಿಯ ಬಗ್ಗೆ ಮಾತನಾಡುವ ಪ್ರಾಂಶುಪಾಲ ಎಸ್.ನಾರಾಯಣ್ ಆಕ್ಟಿಂಗ್‌ಸ್ಕೂಲ್ ಎಂದಾಕ್ಷಣ ಬೋಧನೆಯೇ ಹೆಚ್ಚಿರುತ್ತದೆ ಅಂತ ಕೆಲವರು ಭಾವಿಸುತ್ತಾರೆ. ಆದರೆ, ನಮ್ಮ ನವರಸ ಅಕಾಡೆಮಿಯಲ್ಲಿ ಬೋಧನೆಗಿಂತ ಪ್ರಾಕ್ಟಿಕಲ್‌ಗೆ ಹೆಚ್ಚು ಮಹತ್ವ ಕೊಡುತ್ತೇವೆ. ನೂರಾರು ಕನಸು ಹೊತ್ತು ಬಂದವರಿಗೆ ಸಂಸ್ಥೆ ಯಿಂದ ಜ್ಞಾನ ಸಂಪಾದಿಸಿಕೊಂಡು ಹೋಗಿದ್ದಾರೆ ಎಂದು ಹೇಳುತ್ತಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ನವರಸ ನಟನ ಅಕಾಡೆಮಿ ಫೆಬ್ರವರಿಯಲ್ಲಿ ಹೊಸ ಬ್ಯಾಚ್ - Chitratara.com
Copyright 2009 chitratara.com Reproduction is forbidden unless authorized. All rights reserved.