Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸದ್ಯದಲ್ಲೇ ಜಗ್ಗಿ ಜಗನ್ನಾಥ್
Posted date: 20 Thu, Feb 2020 06:58:15 AM

ಶ್ರೀ ಮೈಲಾರ ಲಿಂಗೇಶ್ವರ ಮೂವಿ ಲಾಂಛನದಲ್ಲಿ ಹೆಚ್. ಜಯರಾಜು, ಜಿ ಶಾರದಾ ನಿರ್ಮಿಸುತ್ತಿರುವ ಜಗ್ಗಿ ಜಗನ್ನಾಥ್ ಚಿತ್ರಕ್ಕೆ ಈಗಾಗಲೇ ಯು/ಎ ಸರ್ಟಿಫಿಕೇಟ್ ದೊರೆತಿದೆ. ವಿಶೇಷವಾಗಿ ಈ ಚಿತ್ರದ ಮೂರು ಹಾಡುಗಳನ್ನು ರಾಜಸ್ಥಾನದ ಸುಂದರ ಲೊಕೇಷನ್ನುಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಚಿತ್ರ ಲವ್ ಆಕ್ಷನ್ ಮತ್ತು ಅಂಡ್‌ವರ್ಲ್ಡ್ ಕತೆಯನ್ನು ಹೊಂದಿದೆ. ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ  ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.
ಓಂ ಸಾಯಿ ಪ್ರಕಾಶ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಎ.ಎಂ. ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ಯೋಗರಾಜ ಭಟ್, ಜಯಂತ್ ಕಾಯ್ಕಿಣಿ, ವಿಜಯ್ ವಿ ಸಾಹಿತ್ಯ, ಶ್ರೀನಿವಾಸ್ ಬಿ ಬಾಬು ಸಂಕಲನ, ಅರವಿಂದ್ ಡಿಸ್ಕೋ ಸಿಲ್ವ ನೃತ್ಯ ನಿರ್ದೇಶನ, ಜಗ್ಗಿ ಮಾಸ್ಟರ್ ಹಾಗೂ ಕೌರವ ವೆಂಕಟೇಶ್ ಸಾಹಸವಿದೆ. ಲಿಖಿತ್ ರಾಜ್, ದುನಿಯಾ ರಶ್ಮಿ, ಸಾಯಿಕುಮಾರ್, ತಬಲಾ ನಾಣಿ, ಪದ್ಮಜಾ ರಾವ್, ಲಯೇಂದ್ರ ಕೋಕಿಲ, ಮೈಕೋ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ ದಂಡುಪಾಳ್ಯ, ಪವನ್, ಮೋಹನ್ ಜುನೇಜ, ವಾಣಿಶ್ರೀ, ಗುರುರಾಜ ಹೊಸಕೋಟೆ ಮುಂತಾದವರ ತಾರಾಬಳಗವಿದೆ.



Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸದ್ಯದಲ್ಲೇ ಜಗ್ಗಿ ಜಗನ್ನಾಥ್ - Chitratara.com
Copyright 2009 chitratara.com Reproduction is forbidden unless authorized. All rights reserved.