Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮತ್ತೆ ಬರುತ್ತಿದ್ದಾರೆ ಪ್ರಚಂಡ ಪುಟಾಣಿಗಳು
Posted date: 19 Thu, Mar 2020 09:39:49 AM

1981 ರಲ್ಲಿ ಗೀತಪ್ರಿಯಾ ರವರ ನಿರ್ದೇಶನದಲ್ಲಿ ಪ್ರಚಂಡ ಪುಟಾಣಿಗಳು ಎಂಬ ಚಲನಚಿತ್ರವೊಂದು ತೆರೆಕಂಡಿತ್ತು.. ಸುಂದರಕೃಷ್ಣ ಅರಸ್ ,ಟೈಗರ್ ಪ್ರಭಾಕರ್ ಸದಾಶಿವ ಬ್ರಹ್ಮಾವರ ಅವರೊದಿಂಗೆ ಮಾಸ್ಟರ್ ರಾಮಕೃಷ್ಣ.. ಮಾಸ್ಟರ್ ಭಾನುಪ್ರಕಾಶ್ ಮತ್ತಿತರರು ನಟಿಸಿದ್ದ ಚಿತ್ರ ಅಮೋಘ ಯಶಸ್ಸನ್ನು ಕಂಡಿತ್ತು.. ಈಗ ಅದೇ ಟೈಟಿಲ್ ನಲ್ಲಿ ಪ್ರಚಂಡ ಪುಟಾಣಿಗಳು ಚಿತ್ರ ತಿಂಗಳಾಂತ್ಯದಲ್ಲಿ ಸೆಟ್ಟೇರಲಿದೆ. ಬನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಟ ಶಾಲೆಯ ಸುಮಾರು ನಲವತ್ತು ಮಕ್ಕಳು ತಮ್ಮ ಟೀಚರ್ಸ್ ರೊಡಗೂಡಿ ಸವದತ್ತಿ, ಗೋಕಾಕ್, ಕಡೆಗೆ ಪ್ರವಾಸಕ್ಕೆಂದು ಹೊರಡುತ್ತಾರೆ. ಆಕಸ್ಮಿಕ ನಿಧಿಕಳ್ಳರ ಗುಂಪಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ನಿಧಿಗಾಗಿ ಬಲಿಕೊಡಲೆತ್ನಿಸುವ ನಿಧಿಗಳ್ಳರ ಗುಂಪಿನಿಂದ ಮಕ್ಕಳು ಹೇಗೆ ಪಾರಾಗಿ ಬರುತ್ತಾರೆಂಬ ಕುತೂಹಲಕಾರಿ ಕಥೆ ಒಳಗೊಂಡೊದೆ.

ಚಿತ್ರದಲ್ಲಿ ಅವಿನಾಶ್ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದು ಮಾಸ್ಟರ್ ಭರಮೇಶ್, ಮಾಸ್ಟರ್ ಮನೀಶ್, ಬೇಬಿ ನೇಹ.ಬ್ಯಾಂಕ್ ಜನಾರ್ದನ್ , ಭಲರಾಂ ಪಾಂಚಾಲ್.ಕಾವ್ಯ ಪ್ರಕಾಶ್ ಮೊದಲಾದವರು ನಟಿಸುತ್ತಿದ್ದಾರೆ. ಶ್ರೀಮತಿ ವಿ ಸುನಿತ ಹಾಗು ಶ್ರೀ ಎನ್ ರಘ ಸಹಕಾರದಲ್ಲಿ ಡಿ ಅಂಡ್ ಡಿ ಫಿಲಂ ಪ್ರೊಡಕ್ಷನ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ರಾಜೀವ್ ಕೃಷ್ಣ ಕಥೆ- ಚಿತ್ರಕಥೆ -ಸಂಭಾಷಣೆ -ನಿರ್ದೇಶನವಿದ್ದು ಆರ್ ಪ್ರಮೋದ್ ಛಾಯಾಗ್ರಹಣ, ಸುರೇಶ್ ಕಂಬಳಿ ಸಾಹಿತ್ಯ, ವಿನುಮನಸು ಸಂಗೀತ, ವಿನಯ್ ಆಲೂರು ಸಂಕಲನ, ಶಂಕರ್ ಸಾಹಸ, ಅನಂತು ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ ಚಿತ್ರವನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ, ಹರಿಹರ ಹಾಗು ಸವದತ್ತಿಯಲ್ಲಿ ಸುಮಾರು 25 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ಚಿತ್ರದ ಇನ್ನುಳಿದ ಕಲಾವಿದ ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದುಮಕ್ಕಳ ಬೇಸಿಗೆ ರಜಾದಿನಗಳಲ್ಲಿ ಥಿಯೇಟರ್ ಗೆ ತರಲು ಸರ್ವ ಸಿದ್ದತೆ ನಡೆಯುತ್ತಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮತ್ತೆ ಬರುತ್ತಿದ್ದಾರೆ ಪ್ರಚಂಡ ಪುಟಾಣಿಗಳು - Chitratara.com
Copyright 2009 chitratara.com Reproduction is forbidden unless authorized. All rights reserved.