Chief Editor
Manohar. R (Manu)
Photo Journalist
chitrataramanu@gmail.com
+91 9845549026
ಯುಗಾದಿ ಹಬ್ಬಕ್ಕೆ ಕ್ರಿಟಿಕಲ್ ಕೀರ್ತನೆಗಳು
Posted date: 22 Mon, Feb 2021 02:17:32 PM

ಕೇಸರಿ ಫಿಲಂ ಕ್ಯಾಪ್ಚರ್, ಲಾಂಛನದಲ್ಲಿ ಕುಮಾರ್ ಮತ್ತು ಸ್ನೇಹಿತರು ಸೇರಿ ನಿರ್ಮಿಸಿರುವ ಕ್ರಿಟಿಕಲ್ ಕೀರ್ತನೆಗಳು ಚಿತ್ರಕ್ಕೆ ಯು/ಎ ಸರ್ಟಿಪಿಕೆಟ್ ದೊರೆತಿದ್ದು, ಚಿತ್ರವು ಯುಗಾದಿ ಹಬ್ಬದ ವಾರದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಕುಮಾರ್.ಎಲ್, ಇವರು ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಛಾಯಾಗ್ರಹಣ - ಶಿವಸೇನ ಮತ್ತು ಶಿವಶಂಕರ್, ಸಂಗೀತ-ವೀರ್ ಸಮರ್ಥ್, ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾಂನಲ್ಲಿ ಚಿತ್ರೀಕರಣ ನಡೆದಿರುವ ಈ ಚಿತ್ರದಲ್ಲಿ ಮೂರು ಹಾಡುಗಳಿವೆ, ನೈಜ ಘಟನೆ ಆಧಾರಿತ ಐಪಿಎಲ್ ಬೆಟ್ಟಿಂಗ್‌ನ ವಿಷಯವನ್ನು ಸಂಪೂರ್ಣ ಹಾಸ್ಯಮಯ ಚಿತ್ರ. ತಾರಾಗಣದಲ್ಲಿ - ತಬಲಾ ನಾಣಿ, ಸುಚೀಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್, ಅರುಣ ಬಾಲ್ ರಾಜ್, ಧರ್ಮ ದಿನೇಶ್ ಮಂಗಳೂರು, ರಘು ಪಾಂಡೇಶ್ವರ, ಯಶಸ್ ಅಭಿ, ದೀಪ, ಗುರುರಾಜ ಹೊಸಕೋಟೆ, ಮಾಸ್ಟರ್ ಮಹೇಂದ್ರ, ಮಾಸ್ಟರ್ ಪುಟ್ಟರಾಜು, ಯಶ್ವಂತ್ ಶೆಟ್ಟಿ - ಮುಂತಾದವರಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಯುಗಾದಿ ಹಬ್ಬಕ್ಕೆ ಕ್ರಿಟಿಕಲ್ ಕೀರ್ತನೆಗಳು - Chitratara.com
Copyright 2009 chitratara.com Reproduction is forbidden unless authorized. All rights reserved.