Chief Editor
Manohar. R (Manu)
Photo Journalist
chitrataramanu@gmail.com
+91 9845549026
``ದಾರಿ ಯಾವುದಯ್ಯಾ ವೈಕುಂಠಕೆ`` ಚಿತ್ರಕ್ಕೆ ಪ್ರಶಸ್ತಿ
Posted date: 30 Tue, Mar 2021 09:33:35 AM
ಪ್ರತಿವರ್ಷ ರಾಜಸ್ಥಾನದ ಜೋಧಪುರದಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್ ನಲ್ಲಿ ಸ್ಪರ್ಧೆಗೆ ಹಲವಾರು ದೇಶ ವಿದೇಶಗಳಿಂದ ಬಂದಿರುವ ಚಿತ್ರಗಳು  ಸ್ಕ್ರೀನಿಂಗ್ ಆಗುತ್ತವೆ.  ಕನ್ನಡದಿಂದ ``ದಾರಿ ಯಾವುದಯ್ಯಾ ವೈಕುಂಠಕೆ`` ಚಿತ್ರವೂ ಪ್ರದರ್ಶನ ಕಂಡು ಎಲ್ಲರಿಂದ ಉತ್ತಮ ಮೆಚ್ಚುಗೆ ಗಳಿಸಿದೆ. ಅಂತಿಮ ಹಂತದಲ್ಲಿ ಉತ್ತಮ ಕಥೆಗಾಗಿ ನೀಡುವ ಪ್ರಶಸ್ತಿ ಈ ಚಿತ್ರದ ಪಾಲಾಗಿದೆ. ನಿರ್ದೇಶಕ ಸಿದ್ದು ಪೂರ್ಣಚಂದ್ರ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಚಿತ್ರ ಹಲವು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗಳಲ್ಲಿ  ಪ್ರದರ್ಶನ ಕಂಡು 30ಕ್ಕೂ ಹೆಚ್ಚು  ಪ್ರಶಸ್ತಿಗಳನ್ನು ದೋಚಿಕೊಂಡಿದೆ. ಅದರಲ್ಲಿ ನಾಲ್ಕು ಕಡೆ ``ಬೆಸ್ಟ್ ಡೈರೆಕ್ಟರ್``ಅವಾರ್ಡ್ ಬಂದಿದೆ.  ಬಿಡುಗಡೆಗೂ ಮುನ್ನ ಎಲ್ಲಾ ಕಡೆ  ಪ್ರಶಂಸೆ ದೊರಕಿರುವುದಕ್ಕೆ ಚಿತ್ರತಂಡ ಸಂತಸದಲ್ಲಿದೆ.
ಶ್ರೀ ಬಸವೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಶರಣಪ್ಪ ಎಂ ಕೊಟಗಿ ಅವರು ನಿರ್ಮಿಸಿರುವ `ದಾರಿ ಯಾವುದಯ್ಯಾ ವೈಕುಂಠಕೆ` ಚಿತ್ರವನ್ನು ಸಿದ್ದು ಪೂರ್ಣಚಂದ್ರ  ನಿರ್ದೇಶಿಸಿದ್ದಾರೆ.
ವರ್ಧನ್ ನಾಯಕರಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅನುಷ,
`ತಿಥಿ` ಚಿತ್ರದ ಖ್ಯಾತಿ ಪೂಜಾ, ಬಲ ರಾಜವಾಡಿ, ಶೀಬಾ, ಪ್ರಶಾಂತ್ ರಾವ್ ವರ್ಕು, ಅರುಣ್‌ ಮೂರ್ತಿ, ಸಂಗೀತ, ಗೌಡಿ, ಸಿದ್ಧಾರ್ಥ್, ಪ್ರಣಯ್ ಮೂರ್ತಿ, ಸ್ಪಂದನ ಪ್ರಸಾದ್, ದಯಾನಂದ್. ಸುಚಿತ್, ಮೈಸೂರು ಬಸವರಾಜ್
 ಮುಂತಾದವರಿದ್ದಾರೆ.
  ಲೋಕಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಿತಿನ್ ಛಾಯಾಗ್ರಹಣ ಹಾಗೂ ಮುತ್ತುರಾಜ್ ಸಂಕಲನವಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ದಾರಿ ಯಾವುದಯ್ಯಾ ವೈಕುಂಠಕೆ`` ಚಿತ್ರಕ್ಕೆ ಪ್ರಶಸ್ತಿ - Chitratara.com
Copyright 2009 chitratara.com Reproduction is forbidden unless authorized. All rights reserved.