Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಮೋಕ್ಷ``ಚಿತ್ರದ ಟ್ರೇಲರ್ ಪುನೀತ್ ರಾಜ್‍ಕುಮಾರ್ ಮೆಚ್ಚುಗೆ
Posted date: 30 Tue, Mar 2021 09:43:04 AM
ವಿಭಿನ್ನ ಟ್ರೇಲರ್ ಗೆ  ಕಿಚ್ಚ ಸುದೀಪ್ ಹಾಗೂಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸೇರಿದಂತೆ  ಸ್ಯಾಂಡಲ್ ವುಡ್ ಗಣ್ಯರ ಮೆಚ್ಚುಗೆ.

ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಆದರೆ ವಿಭಿನ್ನ ಕಥೆ ಒಳಗೊಂಡಿರುವ "ಮೋಕ್ಷ" ಚಿತ್ರದ ಟ್ರೇಲರ್ ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ.
ಕಿಚ್ಚ ಸುದೀಪ ತಮ್ಮ ಟ್ವಿಟರ್ ಖಾತೆಯಲ್ಲಿ  ``ಮೋಕ್ಷ`` ಚಿತ್ರದ  ಟ್ರೇಲರ್  ಗೆ ಶುಭಾಶಯ ಕೋರಿ,   ಪ್ರೋತ್ಸಾಹ ನೀಡಿದ್ದಾರೆ. 
ಪವರ್ ಸ್ಟಾರ್ ಪುನೀತ್ ರಾಜಕುಮಾರ್, ನಿರ್ದೇಶಕರಾದ ಯೋಗರಾಜ್ ಭಟ್, ಸಿಂಪಲ್ ಸುನಿ ನಟ ರಿಶಿ‌ ಮುಂತಾದ ಗಣ್ಯರು ಈ ಚಿತ್ರದ ಟ್ರೇಲರ್ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ.
ಎಸ್ ಆರ್ ವಿ ಸಭಾಂಗಣದಲ್ಲಿ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಸಮರ್ಥ್  ನಾಯಕ್, ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ನಮ್ಮ ಚಿತ್ರ ತಾಂತ್ರಿಕವಾಗಿ ಅದ್ದೂರಿತನದಿಂದ ಮೂಡಿಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ತಂತ್ರಜ್ಞರು.  ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಚಿತ್ರರಂಗದ ಗಣ್ಯರು ಹಾಗೂ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏಪ್ರಿಲ್ 16 ಮೋಕ್ಷ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.‌ ಕನ್ನಡ ಸಿನಿರಸಿಕರು ನಮ್ಮ ಚಿತ್ರ ವೀಕ್ಷಿಸಿ, ಪ್ರೋತ್ಸಾಹಿಸಿ ಎಂದರು. ಸಮರ್ಥ್ ನಾಯಕ್ ಈ ಚಿತ್ರದ ನಿರ್ಮಾಪಕರೂ ಹೌದು.
ಬಾಲಿವುಡ್ ನಲ್ಲಿ ಗುರುತಿಸಿಕೊಂಡಿರುವ ನಾಯಕ ಮೋಹನ್ ಧನರಾಜ್ ಅವರಿಗೆ ಇದು ಕನ್ನಡದಲ್ಲಿ ಚೊಚ್ಚಲ ಚಿತ್ರ. ಸಸ್ಪೆನ್ಸ್  ಚಿತ್ರವಾಗಿರುವುದರಿಂದ ಚಿತ್ರ ನೋಡಿದಮೇಲೆ ಕಥೆ ಏನು? ಎಂದು ತಿಳಿಯುವುದು. ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ಮೋಹನ್ ಧನರಾಜ್. 
ನಾಯಕಿಯಾಗಿ ಕಾಣಿಸಿಕೊಂಡಿರುವ ಆರಾಧ್ಯ ಲಕ್ಷ್ಮಣ್ ಅವರು ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆ ಮಾತುಗಳಾಡಿದರು.
ಈಗಾಗಲೇ ಕೆಲವು ಚಿತ್ರಗಳಲ್ಲಿ ಅಭಿನಯಿಸಿರುವ, ಮೋಕ್ಷ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ತಾರಕ್ ಪೊನ್ನಪ್ಪ,  ಚಿತ್ರವನ್ನು ಕರುನಾಡ ಹಾಗೂ ಗೋವಾದ  ಸುಂದರಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ‌ ಎಂದು ಹೇಳುತ್ತಾ, ಈ ಚಿತ್ರದಲ್ಲಿ ಮಾಸ್ಕ್ ಮ್ಯಾನ್ ಎಂಬ ಪಾತ್ರವೊಂದಿದೆ.  ಮಾಸ್ಕ್ ಮ್ಯಾನ್ ನಿಂದ ನಾಯಕ, ನಾಯಕಿ ಬಹಳ ತೊಂದರೆ ಅನುಭವಿಸುತ್ತಿರುತ್ತಾರೆ.
ಈ ವಿಷಯ ತಿಳಿದು ಪೊಲೀಸ್ ಅಧಿಕಾರಿ ಪಾತ್ರಧಾರಿಯಾದ  ನಾನು 
ಏನು ಮಾಡುತ್ತೇನೆ ಎಂಬುದನ್ನು ಚಿತ್ರದಲ್ಲಿ ವೀಕ್ಷಿಸಿ ಎಂದರು.
ಛಾಯಾಗ್ರಾಹಕರ ಪರವಾಗಿ ಜೋಮ್ ಜೋಸಫ್ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಜಯಂತ್ ಕಾಯ್ಕಿಣಿ, ಕುಮಾರ್ ದತ್ ಅವರು ಬರೆದಿರುವ ಎರಡು ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಕಿಶನ್ ಮೋಹನ್ ಅವರದು.
ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಹಾಗೂ ವರುಣ್ ಕುಮಾರ್ ಅವರ ಸಂಕಲನ ಈ ಚಿತ್ರಕ್ಕಿದೆ.
ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಮುಂತಾದ ವರು ಚಿತ್ರದ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಮೋಕ್ಷ``ಚಿತ್ರದ ಟ್ರೇಲರ್ ಪುನೀತ್ ರಾಜ್‍ಕುಮಾರ್ ಮೆಚ್ಚುಗೆ - Chitratara.com
Copyright 2009 chitratara.com Reproduction is forbidden unless authorized. All rights reserved.