Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬ್ಯಾಕ್ ಬೆಂಚ್ ಹುಡುಗರ ಒಳ್ಳೆಯ ಕೆಲಸಗಳು... ರೇಟಿಂಗ್: 3.5/5 ****
Posted date: 20 Sat, Jul 2024 09:07:46 AM
ಕಾಲೇಜು ಹುಡುಗರ ತುಂಟಾಟ, ತರಲೆ ಕೀಟಲೆ ಇಂಥ ಕಥೆ ಹೊತ್ತ ಸಾಕಷ್ಟು ಚಿತ್ರಗಳು ಈಗಾಗಲೇ ಬೆಳ್ಳಿತೆರೆಯ ಮೇಲೆ ರಾರಾಜಿಸಿವೆ. ಇದೀಗ ಅಂಥದ್ದೇ ಕಥೆ ಇಟ್ಟುಕೊಂಡು  ಪೆರೋಲ್ , ತ್ರಿಕೋನ ಖ್ಯಾತಿಯ ನಿರ್ಮಾಪಕ, ನಿರ್ದೇಶಕ ರಾಜಶೇಖರ್ ಅವರು ಬ್ಯಾಕ್ ಬೆಂಚರ್ಸ್ ಕಥೆಯನ್ನು ನಿರೂಪಿಸಿದ್ದಾರೆ. 
 
ಚಿತ್ರದ  ಶೀರ್ಷಿಕೆಯೇ ಸೂಚಿಸುವಂತೆ `ಬ್ಯಾಕ್ ಬೆಂಚರ್ಜ್`  ಹೆಸರಾಂತ ಕಾಲೇಜ್ ಒಂದರ  ಕೊನೇ ವರ್ಷದ ತರಗತಿಯ ಸ್ನೇಹಿತರ ಬಳಗದ ಆರ್ಯ, ಕುಶ್, ವಿಕ್ಕಿ ಮತ್ತು ನವೀನ್ ಸೇರಿದಂತೆ ನಾಲ್ಕು ಜನರ  ಸುತ್ತ ಬ್ಯಾಕ್ ಬೆಂಚರ್ಸ್ ಕಥಾನಕ ಸುತ್ತುತ್ತದೆ, ಇವರೆಲ್ಲರೂ ತುಂಬಾ ಡೀಪಾಗಿ ಸ್ಟಡಿ ಮಾಡುವಂಥವರು ಮತ್ತು ಬೇರೆ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಲ್ಲ.  
 
ಅದೇ ತರಗತಿಯಲ್ಲಿ ಕೆಲವು ಬ್ಯಾಕ್‌ ಬೆಂಚರ್ಸ್ ಎಂದೇ ಖ್ಯಾತರಾದ ವಿದ್ಯಾರ್ಥಿಗಳಿದ್ದು  ಅವರು ಉಳಿದೆಲ್ಲರಿಗೂ ಕೀಟಲೆ, ತೊಂದರೆ ಮಾಡಿಕೊಂಡಿದ್ದವರು, ಕಾಲೇಜಿನಲ್ಲಿ ಸಾಕಷ್ಟು ಕಿಡಿಗೇಡಿ  ಕೃತ್ಯಗಳನ್ನು ಮಾಡೋದರಲ್ಲಿ ಎತ್ತಿದ ಕೈ.   ಒಂದು ಘಟನೆಯಲ್ಲಿ  ಅವರು  ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ, ಪ್ರಾಂಶುಪಾಲರು ಅವರ ಹಿಂದಿನ  ಬೆಂಚ್ ಸಂಪ್ರದಾಯವನ್ನು ಬದಲಾಯಿಸಿ  ಅವರನ್ನು ಮುಂದಿನ ಬೆಂಚ್‌ನಲ್ಲಿ ಕುಳಿತುಕೊಳ್ಳುವಂತೆ ಮಾಡುತ್ತಾರೆ, ಆದರೆ ಬುದ್ದಿವಂತ ಹುಡುಗರನ್ನು  ಹಿಂದಿನ ಬೆಂಚ್‌ಗೆ ಸ್ಥಳಾಂತರಿಸುತ್ತಾರೆ.  ಅಂದಿನಿಂದ, ಅವರ ಜೀವನ ಬದಲಾಗುತ್ತದೆ.  ಮುಂದೆ ಏನಾಗುತ್ತದೆ ಎಂಬುದೇ ಬ್ಯಾಕ್ ಬೆಂಚರ್ಸ್  ಚಿತ್ರದ ತಿರುಳು.
 
`ಬ್ಯಾಕ್ ಬೆಂಚರ್ಜ್` ಒಂದು ವಿಶಿಷ್ಟವಾದ, ವೀಕ್ಷಕರಿಗೆ ತಮ್ಮ ಕಾಲೇಜು ದಿನಗಳನ್ನು ನೆನಪಿಸುವಂಥ ಚಿತ್ರವಾಗಿದೆ.  ನಿರ್ದೇಶಕ ರಾಜಶೇಖರ್ ಇಲ್ಲಿ ನಿರ್ದಿಷ್ಟವಾಗಿ ಯಾವ ವಿಷಯವನ್ನೂ ಹೇಳಲು ಪ್ರಯತ್ನಿಸಿಲ್ಲ, ಆದರೆ ಪ್ರೇಕ್ಷಕರಿಗೆ ಜೀವನದಲ್ಲಿ ಯಾವುದು ಮುಖ್ಯ ಎಂಬುದನ್ನು ಅರ್ಥಮಾಡಿಸಲು  ಪ್ರಯತ್ನಿಸಿದ್ದಾರೆ.  ಚಿತ್ರದಲ್ಲಿ  ನಡೆಯೋ ಕೆಲವು ಘಟನೆಗಳು ‌ಉತ್ತಮವಾಗಿದ್ದು, ಖುಷಿ ಕೊಡುತ್ತವೆ. 

ಥೇಟರಿನಲ್ಲಿ  ಎರಡು ಗಂಟೆ, 10 ನಿಮಿಷಗಳು ಕಾಲ ಪ್ರೇಕ್ಷಕರ ಮನ ರಂಜಿಸಬೇಕು ಎಂಬುದು ಚಿತ್ರತಂಡದ ಮೂಲ ಉದ್ದೇಶ. ತಮ್ಮ ಕಾಲೇಜಿನ ಗೋಲ್ಡನ್ ಡೇಸ್ ನೆನಪಿಸಿಕೊಳ್ಳಲು  ಸ್ನೇಹಿತರೆಲ್ಲ. ಒಟ್ಟಾಗಿ  ಈ ಚಿತ್ರವನ್ನು ವೀಕ್ಷಿಸಿ ಬರಬಹುದು.  ಮನರಂಜನೆ ಬಯಸಿ ಥೇಟರಿಗೆ ಬರುವ ಪ್ರೇಕ್ಷಕರಿಗೆ ಚಿತ್ರ ಖಂಡಿತ  ನಿರಾಸೆ ಮೂಡಿಸಲ್ಲ.
 
ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತದೆ.  ಅವರೆಲ್ಲ ತಮ್ಮ ಎಫರ್ಟ್ ಹಾಕಿ ಅಭಿನಯಿಸಿದ್ದಾರೆ. ಹಿರಿಯನಟ   ಸುಚೇಂದ್ರ ಪ್ರಸಾದ್ ಅವರು ಒಂದು  ವಿಭಿನ್ನ  ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅರವಿಂದ ಕುಪ್ಲಿಕರ್ ಕೂಡ ತಮಗೆ ಕೊಟ್ಟ ಪಾತ್ರವನ್ನು  ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 
 ನಕುಲ್ ಅಭಯಂಕರ್ ಅವರ ಸಂಗೀತ ಮತ್ತು ಮನೋಹರ್ ಜೋಷಿ ಅವರ ಛಾಯಾಗ್ರಹಣ ಚಿತ್ರದ ಹೈಲೈಟ್‌ಗಳಲ್ಲಿ ಒಂದಾಗಿದೆ.  ಸಿನಿಮಾದ ಎಡಿಟಿಂಗ್ ಕೂಡ ಚೆನ್ನಾಗಿದೆ.  ಒಂದೆರಡು ಹಾಡುಗಳು ವೀಕ್ಷಕರನ್ನು ಕಾಲೇಜ್ ಮೂಡ್ ಗೆ ಕರೆದೊಯ್ಯುತ್ತವೆ. 
 ಈ ಚಿತ್ರ ಬ್ಯಾಕ್  ಬೆಂಚ್ ನವರಿಗೆ ಮಾತ್ರವಲ್ಲ, ತಮ್ಮ ಕಾಲೇಜು ದಿನಗಳ ಸವಿ ನೆನಪುಗಳನ್ನು ನೆನಪಿಸಿಕೊಳ್ಳುವ  ಪ್ರತಿಯೊಬ್ಬರಿಗೂ  ಅಪ್ಯಾಯಮಾನವಾಗುತ್ತದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬ್ಯಾಕ್ ಬೆಂಚ್ ಹುಡುಗರ ಒಳ್ಳೆಯ ಕೆಲಸಗಳು... ರೇಟಿಂಗ್: 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.