Chief Editor
Manohar. R (Manu)
Photo Journalist
chitrataramanu@gmail.com
+91 9845549026
ಸಕ್ಸಸ್ ಜೋಡಿ ಸತೀಶ್-ರಚಿತಾ ಮತ್ತೆ ಅಭಿಮಾನಿಗಳ ಮುಂದೆ `ಅಯೋಗ್ಯ 2`ಗೆ ಅದ್ದೂರಿ ಮುಹೂರ್ತ
Posted date: 11 Wed, Dec 2024 10:31:50 PM
ಸ್ಯಾಂಡಲ್ ವುಡ್ ನ‌ ಸೂಪರ್ ಸಕ್ಸಸ್ ಜೋಡಿಗಳಲ್ಲಿ ಒಂದಾಗಿರುವ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಮತ್ತೆ ಅಭಿಮಾನಿಗಳ ಮುಂದೆ ಸಜ್ಜಾಗಿದ್ದಾರೆ. ಹೌದು `ಅಯೋಗ್ಯ 2` ಸಿನಿಮಾಗಿ ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಒಂದಾಗಿದ್ದಾರೆ. ಸೂಪರ್ ಹಿಟ್ ಅಯೋಗ್ಯ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಇದೀಗ 6 ವರ್ಷಗಳ ಬಳಿಕ ಮತ್ತೆ ಅಭಿಮಾನಿಗಳನ್ನು ರಂಜಿಸಲು ರೆಡಿಯಾಗಿದ್ದಾರೆ. `ಅಯೋಗ್ಯ-2 `ಸಿನಿಮಾ ಅದ್ದೂರಿಯಾಗಿ ಸೆಟ್ಟೇರಿದೆ. ಇಂದು ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಅಯೋಗ್ಯ-2 ಚೀತ್ರೀಕರಣಕ್ಕೆ ಚಾಲನೆ ಸಿಕ್ಕಿತು. ಮಹೇಶ್ ಕುಮಾರ್ ಸಾರಥ್ಯದಲ್ಲಿ ಅಯೋಗ್ಯ-2 ಮೂಡಿ ಬರುತ್ತಿದ್ದು ಮುನೇಗೌಡ ಅವರು ತಮ್ಮ ಎಸ್ ವಿ ಸಿ ಪ್ರೊಡಕ್ಷನ್ ನಲ್ಲಿ ಬಂಡವಾಳ ಹೂಡಿದ್ದಾರೆ.  
 
ಅಂದಹಾಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅಯೋಗ್ಯ-2 ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದರು. ಮುಹೂರ್ತ ಸಮಾರಂಭದಲ್ಲಿ ಇಡೀ ಸಿನಿಮಾತಂಡದ ಜೊತೆಗೆ ನೆನಪಿರಲಿ ಪ್ರೇಮ್, ನಟ ಶ್ರೇಯರ್ ಮಂಜು, ಪ್ರಮೋದ್ ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದು ಸಿನಿಮಾತಂಡಕ್ಕೆ ಶುಭಹಾರೈಸಿದರು. 
 
ಪೂಜೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಮಹೇಶ್, ಅಯೋಗ್ಯ -2 ಕನ್ನಡದ ಜೊತೆಗೆ ತಮಿಳು, ತೆಲುಗಿನಲ್ಲೂ ಮಾಡುತ್ತಿದ್ದೇವೆ. ರಚಿತಾ ಮತ್ತು ಸತೀಶ್ ಅವರನ್ನು ತೆರೆಮೇಲೆ ನೋಡೋಕೆ ತುಂಬಾ ಖುಷಿ ಆಗುತ್ತೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಫ್ಯಾನ್ ಇಂಡಿಯಾ ಸಿನಿಮಾ. ಮೊದಲ ಭಾಗ ಹಿಟ್ ಆದಮೇಲೆ ಬೇರೆ ಭಾಷೆಗೆ ಡಬ್ ಮಾಡಿದ್ವಿ. ಆದರೀಗ ತಮಿಳು ಹಾಗೂ ತೆಲುಗಿನಲ್ಲಿ ಮಾಡುತ್ತಿದ್ದೇವೆ  ಎಂದು ಹೇಳಿದರು. 
 
ನಾಯಕ ನೀನಾಸಂ ಸತೀಶ್ ಮಾತನಾಡಿ, ಅಯೋಗ್ಯ -2 ಸಿನಿಮಾಗೆ ನಿರ್ಮಾಪಕರ ದೊಡ್ಡ ಲಿಸ್ಟ್ ಇತ್ತು. ಅದರೆ ಕೊನೆಯದಾಗಿ ಮುನೇಗೌಡ ಅವರು ಫೈನಲ್ ಆಗಿದ್ದಾರೆ ಅವರು ಉತ್ತಮ ನಿರ್ಮಾಪಕರು. ಅಯೋಗ್ಯ -2 ಸಿನಿಮಾ ಕನ್ನಡ ಸಿನಿಮಾರಂಗಕ್ಕೆ ದೊಡ್ಡ ಸಿನಿಮಾವಾಗಲಿದೆ  ಎಂದು ಹೇಳಿದರು. 
 
ಇನ್ನೂ ನಟಿ ರಚಿತಾ ರಾಮ್ ಮಾತನಾಡಿ,  ಕಳೆದ 6 ವರ್ಷದ ಹಿಂದೆ ಅಯೋಗ್ಯ ಸಿನಿಮಾ ಇದೇ ಜಾಗದಲ್ಲಿ ಮುಹೂರ್ತ ಆಗಿತ್ತು. ತುಂಬಾ ಖುಷಿ ಆಗುತ್ತಿದೆ. ಅಶ್ವಿನಿ ಮೇಡಮ್ ಅವರ ಆಶೀರ್ವಾದವಿದೆ. ಮೊದಲ ಭಾಗಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅಯೋಗ್ಯ-2 ಮಾಡಬೇಕು ಅಂದಾಗ ಮೊದಲು ತಲೆಗೆ ಬಂದಿದ್ದು ಏನಮ್ಮಿ ಏನಮ್ಮಿ...ಹಾಡಿಗೆ ರಿಪ್ಲೇಸ್ ಯಾವುದು ಅಂತ ಆದರೆ ಆ ಹಾಡಿಗೆ ಯಾವುದೇ ರಿಪ್ಲೇಸ್ ಇಲ್ಲ. ನಾನು ಸತೀಶ್ ಟಾಮ್ ಅಂಡ್ ಜೆರ್ರಿ ಹಾಗೆ. ಕಿತ್ತಾಡುತ್ತಿರುತ್ತೇವೆ  ಎಂದು ಹೇಳಿದರು. ಇನ್ನೂ ಈ ಸಿನಿಮಾದಲ್ಲಿ ರಚಿತಾ ಅವರಿಗೆ ಲೇಡಿ ಸೂಪರ್ ಸ್ಟಾರ್ ಎನ್ನುವ ಬಿರುದನ್ನು ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ರಚಿತಾ  ನಾನು ಯಾವಾಗಲು ಅಭಿಮಾನಿಗಳ ಪ್ರಿತೀಯ ಬುಲ್ ಬುಲ್ ಆಗಿಯೇ ಇರುತ್ತೇನೆ  ಎಂದರು. 
 
ನಿರ್ಮಾಪಕ ಎಂ ಮುನೇಗೌಡ ಮಾತನಾಡಿ,  ಕನ್ನಡ ಸಿನಿಮಾರಂಗಕ್ಕೆ ಉತ್ತಮ ಸಿನಿಮಾವಾಗಲಿದೆ. ಮಹೇಶ್ ಬಂದು ಅಯೋಗ್ಯ-2 ಮಾಡಬೇಕು ಅಂದಾಗೆ ಹಿಂದೆ ಮುಂದೆ ನೋಡದೇ ಒಪ್ಪಿಕೊಂಡೆ. ಅಯೋಗ್ಯ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು. ರಚಿತಾ ಮೇಡಮ್ ಕೂಡ ಸಿನಿಮಾ ಮಾಡಿ ಎಂದರು. ಎಲ್ಲಾ ಉತ್ತಮ ಕಲಾವಿದರಿದ್ದಾರೆ  ಎಂದು ಹೇಳಿದರು. 
 
6  ವರ್ಷದ ಹಿಂದೆ ಬಂದಿದ್ದ ಸಿದ್ದೇಗೌಡ ಹಾಗೂ ನಂದಿನಿ ಲವ್ ಸ್ಟೋರಿಗೆ ಕನ್ನಡ‌ ಸಿನಿಮಾ  ಪ್ರೇಮಿಗಳು ಫಿದಾ ಆಗಿದ್ದರು.  ಈಗ ಮತ್ತದೇ ತಂಡ `ಅಯೋಗ್ಯ 2` ಸಿನಿಮಾ ಮೂಲಕ‌ ಒಂದಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. 

ಅಯೋಗ್ಯ-2ನಲ್ಲಿ ಬಹುತೇಕ ಕಲಾವಿದರು ಹಾಗೂ ತಂತ್ರಜ್ಞರು ಮೊದಲ ಭಾಗದಲ್ಲಿ ಇದ್ದವರೇ ಮುಂದುವರೆಯುತ್ತಿರುವುದು ವಿಶೇಷ. ಹಿರಿಯ ನಟ ಸುಂದರ್ ರಾಜ್, ತಬಲ ನಾಣಿ, ಶಿವರಾಜ್ ಕೆ ಆರ್ ಪೇಟೆ ಪಾರ್ಟ್-2ನಲ್ಲೂ ಇದ್ದಾರೆ. ಈ ಬಾರಿ ಮಂಜು ಪಾವಗಡ ಕೂಡ ಅಯೋಗ್ಯ ಸಿನಿಮಾತಂಡ ಸೇರಿಕೊಂಡಿದ್ದಾರೆ. ಇನ್ನೂ ಮಾಸ್ತಿ ಅವರ ಸಂಭಾಷಣೆ, ವಿಶ್ವಜಿತ್ ರಾವ್ ಕ್ಯಾಮರಾ, ಅರ್ಜುನ್ ಜನ್ಯ ಅವರ ಸಂಗೀತ ಸಿನಿಮಾಗಿರಲಿದೆ. 

ಅಯೋಗ್ಯ ಸಿನಿಮಾದ ಹಾಡುಗಳು ಕನ್ನಡ ಸಿನಿಮಾರಂಗದಲ್ಲಿಯೇ ಹೊಸ ಇತಿಹಾಸ ಬರೆದಿತ್ತು. ಈಗ ಮತ್ತಷ್ಟು ಕುತೂಹಲ ಹಾಗೂ ನಿರೀಕ್ಷೆಗಳೊಂದಿಗೆ ಅಯೋಗ್ಯ-2 ಸೆಟ್ಟೇರಿದೆ. ಮಂಡ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಸಕ್ಸಸ್ ಜೋಡಿ ಸತೀಶ್-ರಚಿತಾ ಮತ್ತೆ ಅಭಿಮಾನಿಗಳ ಮುಂದೆ `ಅಯೋಗ್ಯ 2`ಗೆ ಅದ್ದೂರಿ ಮುಹೂರ್ತ - Chitratara.com
Copyright 2009 chitratara.com Reproduction is forbidden unless authorized. All rights reserved.