ಕಾಟೇರ ಚಿತ್ರದ ಭರ್ಜರಿ ಯಶಸ್ಸಿನ ನಂತರ ನಿರ್ದೇಶಕ ತರುಣ್ ಕಿಶೋರ್ ಸುದೀರ್ , ಮತ್ತೊಂದು ಎದೆ ನುಡುಗಿಸಿದ ಪ್ರೇಮಕಥೆಯನ್ನು ಚಿತ್ರದ ರೂಪದಲ್ಲಿ ತೆರೆಗೆ ತರಲು ಮುಂದಾಗಿದ್ದಾರೆ.
ಈ ಬಾರಿ ನಿರ್ದೇಶನ ಮಾಡುತ್ತಿಲ್ಲ ಬದಲಾಗಿ ನಿರ್ಮಾಣ ಮಾಡುವ ಮೂಲಕ ಹೊಸ ಪ್ರತಿಭೆಗಳ ಪ್ರೋತ್ಸಾಹ ನೀಡಲು ತರುಣ್ ಸುದೀರ್ ಮುಂದಾಗಿದ್ದಾರೆ. ಅವರ ಜೊತೆ ಅಟ್ಲಾಂಟ ನಾಗೇಂದ್ರ ಕೈ ಜೋಡಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಮನ ಮಿಡಿಯುವ ಪ್ರೇಮಕಥೆಯ ಚಿತ್ರವನ್ನು ಪುನೀತ್ ರಂಗಸ್ವಾಮಿ ಆಕ್ಷನ್ ಕಟ್ ಹೇಳುತ್ತಿದ್ಸಾದೆ.
ಕೈಗೆ ಹಾಕಿದ ಬೇಡಿ, ಮತ್ತೊಂದು ಕೈನಲ್ಲಿ ಗತಕಾಲದ ಮೊಬೈಲ್ ಹಿಡಿದ ವ್ಯಕ್ತಿ ಬೆಂಕಿ ಹತ್ತಿಕೊಂಡ ಜೀಪಿನಿಂದ ಹೊರ ಬರುವ ಪ್ರಯತ್ನ ಮಾಡುತ್ತಿರುವ ಪೋಸ್ಡರ್ ಮೊದಲ ಲುಕ್ ನಲ್ಲಿ ಗಮನ ಸೆಳೆದಿದೆ.
ಚಿತ್ರಕ್ಕೆ ಪ್ರೊಡಕ್ಷನ್ ನಂಬರ್ -2 ಎಂದು ಹೆಸರಿಡಲಾಗಿದೆ. " ಏಳುಮಲೆಯ ಮಡಿಲಿನಲ್ಲಿ ಎದೆ ನಡುಗುಸಿದ ಪ್ರೇಮಕಥೆಯನ್ನು ಚಿತ್ರ ಪ್ರೇಕ್ಷಕರ ಮನಮುಟ್ಟಲು ಸಿದ್ದವಾಗುತ್ತಿದೆ.
ಚಿತ್ರ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಮೂಡಿರುತ್ತಿದೆ. ಚಿತ್ರಕ್ಕೆ ಸುಧಾಕರ್ ಎಸ್ ರಾಜ್ ಕ್ಯಾಮರಾ, ಕೆ ಎಂ ಪ್ರಕಾಶ್ ಸಂಕಲನವಿದೆ. ಚಿತ್ರವನ್ನು ನರಸಿಂಹ ನಾಯಕ ( ರಾಜು ಗೌಡ) ಅರ್ಪಿಸುತ್ತಿದ್ದಾರೆ.