“ಆರ್.ಚಂದ್ರು, ಹೃದಯವಂತ, ಸಹೋದರ, ಗೆಳೆಯ, ಆತ ಎಷ್ಟೇ ಒಳ್ಳೆಯ ಚಿತ್ರ ಮಾಡಲಿ, ಕೆಟ್ಟ ಚಿತ್ರ ಮಾಡಲಿ ಸಹೋದರನ ಪ್ರಯತ್ನಕ್ಕೆ ಸದಾ ಬೆಂಬಲ ಇರುತ್ತದೆ. 5 ಅಲ್ಲ 50 ಚಿತ್ರ ಮಾಡು ಕನ್ನಡಕ್ಕೆ ತಾನೆ ಮಾಡ್ತಾ ಇರೋದು ಚೆನ್ನಾಗಿ ಮಾಡು…..”
ಹೀಗಂತ ನಟ, ನಿರ್ದೆಶಕ ಕಿಚ್ಚ ಸುದೀಪ್ ಅವರು ಆರ್.ಚಂದ್ರು ಅವರ ಪ್ರಯತ್ನ ಮತ್ತು ಹೊಸತನಗಳನ್ನು ಬೆಂಬಲಿಸಿ ಆಡಿದ ಪ್ರೊತ್ಸಾಹದ ಮಾತುಗಳಿವು. ಕಿಚ್ಚ ಸುದೀಪ್ ಅವರಂತh ನಟರಿಂದ ಹೃದಯದಿಂದ ಈ ರೀತಿ ಮಾತು ಹೇಳಿಸಿಕೊಳ್ಳಲು ಆರ್.ಚಂದ್ರು ನಿಜಕ್ಕೂ ಅದೃಷ್ಠವಂತರು ಜೊತೆಗೆ ಹೃದಯವಂತರೂ ಕೂಡ.
ಆರ್.ಸಿ ಸ್ಟುಡಿಯೋ ಸಂಸ್ಥೆಯಡಿ ಆರ್. ಚಂದ್ರು ನಿರ್ಮಾಣದ “ಪಾಧರ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಕಿಚ್ಚ ಸುದೀಪ್, ಆರ್.ಸಿಸಂಸ್ಥೆ ಆರಂಭಿಸಿ ಅದರ ಮೂಲಕ 5 ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಿಸಿದಾಗ ಎಲ್ಲರೂ ಆರ್.ಚಂದ್ರು ಅಲ್ಲ ಐದು ಚಂದ್ರು ಅಂದ್ರು,. ಕಾಲೆಳೆಯವರು ಇದ್ದಾಗಲೇ ಬೆಳೆಯಲು ಸಾಧ್ಯ. ಹಿಂಜರಿಯಬೇಡ ಮುನ್ನುಗ್ಗು ಚಂದ್ರು ಎಂದರು.
ಪ್ಯಾನ್ ಇಂಡಿಯಾ ಮಟ್ಟದಲ್ಲಿ “ಕಬ್ಜ” ಚಿತ್ರದಂತಹ ಪ್ರಯತ್ನವನ್ನು ಆರ್.ಚಂದ್ರ ಮಾಡಿದರು, ಅದಕ್ಕೆ ಕೆಲವರಿಂದ ಕಾಮೆಂಟ್ ಕೂಡ ಬಂದಿರಬಹುದು. ಯಾವುದೇ ಚಿತ್ರ ಎಕ್ಸಾಡಿರಿಯಾಗಿ ಓಡಿದ್ದಕ್ಕೆ ಇದುವರೆಗೂ ಕಾರಣ ಗೊತ್ತಿಲ್ಲ. ಕೆಲ ಚಿತ್ರಗಳಲ್ಲಿ ಹಾಡು ಚೆನ್ನಾಗಿರಬಹುದು, ಬಿಡುಗಡೆ ಮಾಡಿದ ಸಮಯದ ಚೆನ್ನಾಗಿ ಇರಬಹುದು, ಬೇರೆ ಬೇರೆ ಕಾರಣಗಳೂ ಇರಬಹುದು ಆದರೆ ಚಿತ್ರ ಅಂದುಕೊಂಡಷ್ಟು ಹೋಗದೆ ಇದ್ದಾಗ ಕುಗ್ಗುವುದು ಬೇಡ ಎಂದರು
ಕಾಮೆಂಟ್ ಮಾಡುವರು,ಇಲ್ಲ ಸಲ್ಲದ ಹೇಳಿಕೆ ನೀಡುವರು ಕಾಮೆಂಟ್ ಮಾಡುವುದನ್ನು ಬಿಟ್ಟು ಪ್ರೋತ್ಸಾಹ ನೀಡಿದರೆ ಅದರಿಂದ ಚಿತ್ರರಂಗ ಮತ್ತಷ್ಟು ಬೆಳವಣಿಗೆ ಕಾಣಲಿದೆ. 5 ಅಲ್ಲ 50 ಚಿತ್ರ ಮಾಡಿ ಚಂದ್ರು, ಕನ್ನಡಕ್ಕೆ ತಾನೇ ಮಾಡ್ತಾ ಇರೋದು ಚೆನ್ನಾಗಿ ಮಾಡಿ. ಕಾಮೆಂಟ್ ಮಾಡುವರನ್ನು ಪಕ್ಕಕ್ಕಿಡಿ, ನಿಮ್ಮನ್ನು ಪ್ರೀತಿಸುವ ಒಳ್ಳೆಯ ಸ್ನೇಹಿತರು, ಮಾಧ್ಯಮದವರು ಇದ್ದಾರೆ. ಹೀಗಾಗಿ ಫಲಾಫಲಗಳನ್ನು ದೇವರಿಗೆ ಬಿಡಿ ಎಂದು ಕಿವಿಮಾತು ಹೇಳಿದರು ಕಿಚ್ಚ ಸುದೀಪ್
ಆರ್ ಚಂದ್ರು, ಗೆಳೆಯ, ಸಹೋದರ ಆತ ಎಷ್ಟೇ ಚೆನ್ನಾಗಿರುವ ಸಿನಿಮಾ ಕೊಡಲಿ ಅಥವಾ ಕೆಟ್ಟ ಚಿತ್ರ ಕೊಡಲಿ. ಸಹೋದರನಿಗೆ ಸದಾ ಬೆಂಬಲ ಇರುತ್ತದೆ. ಅವರು ಕರೆದಾಗಲೆಲ್ಲ ಬರುತ್ತೇನೆ. ಅದಕ್ಕೆ ಕಾರಣ ಅವರೊಬ್ಬ ಮಾನವೀಯ ವ್ಯಕ್ತಿ. ಜೊತೆಗೆ ಹೃದಯವಂತ, ನಮ್ಮ ಮನೆಗೆ ಸಾಕಷ್ಟು ಬಾರಿ ಬಂದಿದ್ದಾರೆ. ಆದರ ಒಬ್ಬರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ಇದೇ ಕಾರಣಕ್ಕೆ ಚಂದ್ರು ಇಷ್ಟ ಆಗೋದು ಎಂದರು.
ಆರ್.ಚಂದ್ರು ಎಷ್ಟು ಖರ್ಚು ಮಾಡ್ತಾರೆ ಅನ್ನುವುದಕ್ಕಿಂತ ಅವರೊಳಗೊಬ್ಬ ಉತ್ತಮ ವ್ಯಕ್ತಿ ಇದ್ದಾರೆ, ಇದು ನನ್ನನ್ನು ತುಂಬಾನೇ ಇಂಪ್ರಸ್ ಮಾಡಿದೆ ಎಂದು ಆರ್.ಚಂದ್ರು ಅವರನ್ನು ಹಾಡಿಹೊಗಳಿದರು ಕಿಚ್ಚ ಸುದೀಪ್
ಬೇಡಿಕೆಯಲ್ಲಿರುವ ಡಾರ್ಲಿಂಗ್ ಕೃಷ್ಣ ಅವರನ್ನು ಹಾಕಿಕೊಂಡು ಚಂದ್ರು ಕಮರ್ಷಿಯಲ್ ಚಿತ್ರ ಮಾಡಬಹುದಿತ್ತು. ಫಾದರ್ ಅಂತಹ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡ ಚಿತ್ರ ಮಾಡುತ್ತಿದ್ದಾರೆ.ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಬಿಡುಗಡೆ ಮಾಡ್ತಾ ಇದ್ದಾರೆ. ಇಡೀ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸಿದರು.
ಫಾದರ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತೇನೆ ಎಂದಾಗ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಮಾಡುವಂತೆ ಸಲಹೆ ನೀಡಿದ್ದೇ ನಾನು, ಆದರೆ ಚಂದ್ರು ಆ ಕ್ರೆಡಿಟ್ ನನಗೆ ಕೊಡಬೇಕು. ಚಂದ್ರು ಮತ್ತವರ ತಂಡಕ್ಕೆ ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸಿದರು