ಆರೋನ್ ಕಾರ್ತಿಕ್ ನಿರ್ದೇಶನದ 5 ನೇ ಚಿತ್ರ ಮಾನ್ ಸ್ಟರ್ ಅತಿ ಶೀಘ್ರದಲ್ಲಿಯೇ ಬಿಡುಗಡೆಗೆ ಸಜ್ಜಾಗಿದೆ ದರ್ಪ, ಆಗೋದೆಲ್ಲಾ ಒಳ್ಳೆಯದಕ್ಕೆ, ಪಂಚೇಂದ್ರಿಯಂ, ಪರಿಶುದ್ದಂ ಸಿನಿಮಾ ನಂತರ ಆರೂನ್ ಕಾರ್ತಿಕ್ ನಿರ್ದೇಶನದ ಚಿತ್ರ ಇದು. ಸೆನ್ಸಾರ್ ಮಂಡಳಿಯಿಂದ ಚಿತ್ರ ಎ ಪ್ರಮಾಣ ಪತ್ರ ಪಡೆದಿದೆ.
ಮಾನ್‌ಸ್ಟರ್ ಚಿತ್ರದಲ್ಲಿ ನಿರ್ದೇಶಕ ಆರೂನ್ ಕಾರ್ತಿಕ್ 11 ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಅದುವೇ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ,ಸಾಹಿತ್ಯ, ಛಾಯಾಗ್ರಹಣ, ಡಬ್ಬಿಂಗ್ ಇಂಜಿನಿಯರ್, ಹಿನ್ನೆಲೆ ಸಂಗೀತ ಎಸ್ ಎಫ್ ಎಕ್ಸ್ , ವಿಎಫ್ ಎಕ್ಸ್ ಜೊತೆಗೆ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ
ಆರೂನ್ ಕಾರ್ತಿಕ್ ಮಾನ್ ಸ್ಟರ್ ಮೂಲಕ ಹೊಸತನದ ಮೂಲಕ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ನ್ಯಾಯ. ಒದಗಿಸುವ ಕೆಲಸ ಮಾಡಿದ್ದಾರೆ
ಸೂಪರ್ ಸ್ಟಾರ್ ರಜನಿಕಾಂತ್ ಸ್ನೇಹಿತ ರಾಜ್ ಬಹದ್ದೂರ್ ನಟನೆಯ ಚಿತ್ರ ಇದು. ಧರ್ಮಕೀರ್ತಿರಾಜ್, ಥ್ರಿಲ್ಲರ್ ಮಂಜು, ಸಂಗೀತಾ,ಯೆತಿರಾಜ್, ಬಾಲ ರಾಜವಾಡಿ,ಗಣೇಶ್ ರಾವ್, ತುಕಲಿ ಸಂತೋಷ , ಕುರಿಬೊಂಡ್ಸುನಿಲ್,ಎಸ್.ನಾರಾಯಣ್ ಎರಡನೇ ಪುತ್ರ ಪವನ್ ಎಸ್ ನಾರಾಯಣ್, ಮೊದಲ ಬಾರಿಗೆ ಕಾಣಿಸಿಕೊಂಡಿದ್ದು 35 ಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ.