ಛಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾರಿನರ್‌ನಲ್ಲೆ ಅದ್ಬುತ ನಟನೆ ಮಾಡಿರುವ ನಮ್ಮ ಪ್ರೀತಿಯ ರಾಮು ಚಿತ್ರವು 2002ರಲ್ಲಿ ಬಿಡುಗಡೆಗೊಂಡು ಪ್ರಶಂಸೆಗಳಿಸಿತ್ತು. ಅಲ್ಲದೆ ಮಾಧ್ಯಮದವರು ಉತ್ತಮ ವಿಮರ್ಶೆ ಬರೆದುದರಿಂದ ಸಿನಿಮಾದ ಯಶಸ್ಸಿಗೆ ಗರಿ ಸಿಕ್ಕಂತೆ ಆಗಿತ್ತು. ಅಂದು ಚಿತ್ರದಲ್ಲಿ ಕೆಲಸ ಮಾಡಿದವರೆಲ್ಲರಿಗೂ ಅವಕಾಶಗಳು ಹರಸಿ ಬಂದಿದ್ದವು. ಅಮೇರಿಕಾ ಅಮೇರಿಕಾ ನಿರ್ಮಾಣ ಮಾಡಿದ್ದ ಜಿ.ನಂದಕುಮಾರ್ ಬಂಡವಾಳ ಹೂಡಿದ್ದು, ಸಂಜಯ್-ವಿಜಯ್ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಇಷ್ಟೆಲ್ಲಾ ಹೇಳಲು ಕಾರಣವಿದೆ. ದರ್ಶನ್ ಹುಟ್ಟುಹಬ್ಬ ಫೆಬ್ರವರಿ ೧೬. ಈ ಹಿನ್ನಲೆಯಲ್ಲಿ ಫೆಬ್ರವರಿ ೧೪ರಂದು ೧೫೦ ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಏಕಕಾಲಕ್ಕೆ ವಿತರಕ ದಿಲೀಪ್‌ಕುಮಾರ್ ಸಾರಥ್ಯದಲ್ಲಿ ಮರು ಬಿಡುಗಡೆಯಾಗುತ್ತಿದೆ. ಅಲ್ಲದೆ ನಟನ ಬರ್ತ್‌ಡೇ ದಿನದಂದು ಮಾಲ್‌ಗಳಲ್ಲಿ ವಿಶೇಷ ಪ್ರದರ್ಶನವನ್ನು ಏರ್ಪಾಟು ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ.
ಸಿನಿಮಾವು ಹೊಸ ತಂತ್ರಜ್ಘಾನದೊಂದಿಗೆ ಡಿಜಿಟೆಲ್ ಫಾರ್ಮೆಟ್‌ದಲ್ಲಿ 5.1 ಸೌಂಡ್‌ನೊಂದಿಗೆ ಸಿದ್ದಗೊಂಡಿರುವುದು ವಿಶೇಷ. ನೋಡುಗರಿಗೆ ಅದರಲ್ಲೂ ಅಭಿಮಾನಿಗಳಿಗೆ ಹೊಸ ರೀತಿಯ ಅನುಭವ ನೀಡುತ್ತದೆ. ನವ್ಯನಟರಾಜನ್ ನಾಯಕಿ. ಉಳಿದಂತೆ ದೊಡ್ಡಣ್ಣ, ಉಮಾಶ್ರೀ, ಕರಿಬಸವಯ್ಯ, ಪವಿತ್ರಾಲೋಕೇಶ್, ರಮೇಶ್‌ಪಂಡಿತ್, ಕಲಾಕೇಸರಿ ಉದಯಕುಮಾರ್ ಮೊಮ್ಮಗಳು ಹಂಸವಿಜೇತ, ಮಾಸ್ಟರ್ ಆದರ್ಶ್‌ರಾಮೆಗೌಡ, ಶ್ಯಾಂಯಾದವ್, ನಂದಿನಿ ಮುಂತಾದವರು ನಟಿಸಿದ್ದಾರೆ.
ಆರು ಹಾಡುಗಳ ಪೈಕಿ ಐದಕ್ಕೆ ಕೆ.ಕಲ್ಯಾಣ್ ಮತ್ತು ಒಂದು ಗೀತೆಗೆ ಕೃಷ್ಣಪ್ರಿಯ ಸಾಹಿತ್ಯ, ಗ್ರೇಟ್ ಲೆಜೆಂಡ್ ಇಳಯರಾಜ ಮನಮಿಡಿಯುವ ಸಂಗೀತ ಸಂಯೋಜಿಸಿರುವುದು ಸಿನಿಮಾಕ್ಕೆ ಕಳಸ ಇಟ್ಟಂತೆ ಆಗಿತ್ತು. ಛಾಯಾಗ್ರಹಣ ರಮೇಶ್‌ಬಾಬು, ಸಂಕಲನ ಗಿರೀಶ್‌ಕುಮಾರ್.ಕೆ ಅವರದಾಗಿದೆ. ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ, ಕರಿಘಟ್ಟ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿತ್ತು.