abbs studios ಲಾಂಛನದಲ್ಲಿ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ಅವರು ನಿರ್ಮಿಸುತ್ತಿರುವ, ಸಿ.ಆರ್.ಬಾಬಿ ಅವರ ನಿರ್ದೇಶನದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ "ಜಸ್ಟ್ ಮ್ಯಾರೀಡ್" ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಹಾಗೂ ಎರಡು ಹಾಡುಗಳ ಮೂಲಕ "ಜಸ್ಟ್ ಮ್ಯಾರೀಡ್" ಜನರ ಮನಸ್ಸಿಗೆ ಹತ್ತಿರವಾಗಿದೆ.
ಫೆಬ್ರವರಿ 14 ಪ್ರೇಮಿಗಳ ದಿನದಂದು ಈ ಚಿತ್ರದ ಮೂರನೇ ಹಾಡು ಬಿಡುಗಡೆಯಾಗಲಿದೆ. ಪ್ರೇಮಕವಿ ಕೆ.ಕಲ್ಯಾಣ್ ಬರೆದು "ಸರಿಗಮಪ" ಖ್ಯಾತಿಯ ಜಸ್ಕರಣ್ ಸಿಂಗ್ ಹಾಡಿರುವ ಹಾಗೂ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ "ಇದು ಮೊದಲ ಸ್ವಾಗತಾನಾ" ಎಂಬ ಸುಮಧುರ ಪ್ರೇಮಗೀತೆಯನ್ನು ಪ್ರೇಮಿಗಳದಿನದಂದು ಬೆ.10 ಗಂಟೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅನಾವರಣ ಮಾಡಲಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಈ ಚಿತ್ರದ ಎಲ್ಲಾ ಹಾಡುಗಳು ಬಿಡುಗಡೆಯಾಗಲಿದೆ.
"ಜಸ್ಟ್ ಮ್ಯಾರೀಡ್" ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಕೆ.ಆರ್.ಜಿ ಸ್ಟುಡಿಯೋಸ್ ಈ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ.
ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿ ಜನಮನಸೂರೆಗೊಂಡಿರುವ ಅಜನೀಶ್ ಲೋಕನಾಥ್ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಇಷ್ಟು ದಿವಸ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸಿ.ಆರ್ ಬಾಬಿ ಅವರು ಈ ಚಿತ್ರದ ಮೂಲಕ ನಿರ್ದೇಶಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಬಾಬಿ ಅವರೆ ಕಥೆ ಬರೆದಿದ್ದಾರೆ. ಚಿತ್ರಕಥೆ ಸಿ.ಆರ್ ಬಾಬಿ ಹಾಗೂ ಧನಂಜಯ್ ರಂಜನ್ ಅವರದು. ರಘು ನಿಡುವಳ್ಳಿ ಈ ಚಿತ್ರದ ಸಂಭಾಷಣೆಕಾರರು.
ಪಿ ಜಿ ಛಾಯಾಗ್ರಹಣ, ಶ್ರೀಕಾಂತ್ ಮತ್ತು ಅಶಿಕ್ ಕುಸುಗೊಳ್ಳಿ (ಗಣೇಶ ಸಾಂಗ್) ಸಂಕಲನ, ಅಮರ್ ಕಲಾ ನಿರ್ದೇಶನ, ವಿಕ್ರಮ್ ಮೋರ್, ಸಾಹಸ ನಿರ್ದೇಶನ ಹಾಗೂ ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರ ನೃತ್ಯ ನಿರ್ದೇಶನವಿರುವ "ಜಸ್ಟ್ ಮ್ಯಾರೀಡ್" ಚಿತ್ರದ ಹಾಡುಗಳನ್ನು ಪ್ರಮೋದ್ ಮರವಂತೆ ಮತ್ತು ಧನಂಜಯ್ ಬರೆದಿದ್ದಾರೆ.
ಶೈನ್ ಶೆಟ್ಟಿ, ಅಂಕಿತ ಅಮರ್, ದೇವರಾಜ್, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ ಅನಿಲ್, ಕುಮುದಾ, ಜಯರಾಮ್, ವೇದಿಕಾ ಕಾರ್ಕಳ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.