ಉತ್ತರ ಕರ್ನಾಟಕದ ಮಲ್ಲು ಜಮಖಂಡಿ ನಾಯಕನಾಗಿ ಅಭಿನಯಿಸಿರುವ ವಿದ್ಯಾಗಣೇಶ ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಲವ್, ಫ್ಯಾಮಿಲಿ ಡ್ರಾಮಾ, ಆ್ಯಕ್ಷನ್ ಕಥಾಹಂದರ ಒಳಗೊಂಡ ಈ ಚಿತ್ರ ಫೆಬ್ರವರಿ 21ರಂದು ತೆರೆಗೆ ಬರುತ್ತಿದೆ. ಉತ್ತರ ಕರ್ನಾಟಕದ ಭಾಷೆ ಹಾಗೂ ಸಂಸ್ಕೃತಿಯ ಛಾಯೆ ಒಳಗೊಂಡ. ಈ ಚಿತ್ರದಲ್ಲಿ ಲವ್ ಸ್ಟೋರಿ ಮಧ್ಯೆ ರಾಜಕೀಯ ಎಂಟ್ರಿಯಸದಾಗ ಏನೇನೆಲ್ಲ. ಆಗುತ್ತದೆ ಎಂಬುದನ್ನು ಹೇಳಲಾಗಿದೆ, ಉಮೇಶ್ ಚಂದ್ರ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಹಿರಿಯನಟ ತಬಲಾನಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈಚೆಗೆ ನಡೆದ ಪತ್ರಿಕಾಗೋಷ್ಟಿಯಲ್ಲಿ ತಬಲಾನಾಣಿ ಮಾತನಾಡುತ್ತ ಈ ಚಿತ್ರದಲ್ಲಿ ನನ್ನದು ಅತಿಥಿ ಪಾತ್ರ. ನನ್ನ ಸ್ನೇಹಿತ ನಾಗೇಶ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು ನಾನು ಕರೆಕ್ಷನ್ ಮಾಡಿದ್ದೇನೆ ಎಂದರು.
ನಂತರ ಮಾತನಾಡಿದ ನಿರ್ದೇಶಕ ಉಮೇಶ್‌ಚಂದ್ರ ನಾನು ಉಪೇಂದ್ರ ಅವರ ಅಭಿಮಾನಿ. ಅವರ ಸೂಪರ್ ಸಿನಿಮಾದಿಂದ ಇಂಡಸ್ಟ್ರಿಗೆ ಬಂದೆ. ಸಿನಿಮಾ ರಂಗಕ್ಕೆ ಬರುವುದು ನಮ್ಮ ಮನೆಯಲ್ಲಿ ಯಾರಿಗೂ ಇಷ್ಟವಿರಲಿಲ್ಲ. ಆದರೆ ನನ್ನ ತಾಯಿ ತುಂಬಾ ಸಪೋರ್ಟ್ ಮಾಡಿದರು. ಕಳೆದ ತಿಂಗಳು ಅವರು ನಮ್ಮಿಂದ ಅಗಲಿದರು. ವಿದ್ಯಾ ಗಣೇಶ ಹಳ್ಳಿ ಹುಡುಗನ ಸುತ್ತ ನಡೆಯುವ ಕಥೆ ಇರುವ ಸಿನಿಮಾ. ಬೀದರ್, ಜಮಖಂಡಿ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ. ಲವ್ ಸ್ಟೋರಿಯಲ್ಲಿ ರಾಜಕೀಯ ಎಂಟ್ರಿ ಆಗಿ ಏನೆಲ್ಲಾ ಆಗುತ್ತೆ ಎಂಬುದು ಈ ಚಿತ್ರದ ಎಳೆ, ಉತ್ತರ ಕರ್ನಾಟಕದ ಹೆಚ್ಚು ಥಿಯೇಟರುಗಳಲ್ಲಿ ನಮ್ಮ ಚಿತ್ರವನ್ನು ರಿಲೀಸ್ ಮಾಡಲಿದ್ದೇವೆ ಎಂದರು. ಚಿತ್ರದ ನಾಯಕ ಮಲ್ಲು ಜಮಖಂಡಿ ಮಾತನಾಡಿ, ಇದು ನನ್ನ ಎರಡನೇ ಸಿನಿಮಾ. ನಾನು ಮಿಡ್ಲ ಕ್ಲಾಸ್ ಹುಡುಗನ ಪಾತ್ರ ನಿರ್ವಹಿಸಿದ್ದು ಮಿಡಲ್‌ಕ್ಲಾಸ್ ಹುಡುಗಿನ ಲವ್ ಮಾಡಿದಾಗ, ಏನೇನೆಲ್ಲ ಆಗುತ್ತದೆ ಅಂತ ಚಿತ್ರದಲ್ಲಿ ಹೇಳಿದ್ದೇವೆ ಎಂದರು.
ಚಿತ್ರದ ನಾಯಕಿ ಸುಲಕ್ಷಾ ಕೈರಾ ಮಾತನಾಡುತ್ತ ನಾನು ಓದಿಕೊಂಡಿರುವ ಹಳ್ಳಿಯ ಹುಡುಗಿಯಾಗಿ ಅಭಿನಯಿಸಿದ್ದೇನೆ. ರಮೇಶ್ ಭಟ್ ಅವರ ನನ್ನ ತಂದೆಯ ಪಾತ್ರ ಮಾಡಿದ್ದಾರೆ ಎಂದು ಹೇಳಿದರು. ನಂತರ ಚಿತ್ರದ ನಿರ್ಮಾಪಕ ಚೇತನ ಮಾತನಾಡುತ್ತ ನಾವೆಲ್ಲ ಹೊಸ ತಂಡ, ಆದರೂ ಇಂಡಸ್ಟಿಗೆ ಹೊಸಬರಲ್ಲ. ನಾವೆಲ್ಲ. ಕಷ್ಟಪಟ್ಟು ಇಷ್ಟಪಟ್ಟು ಮಾಡಿದ ಸಿನಿಮಾ ಎಂದು ಹೇಳಿದರು. ವೇದಿಕೆಯಲ್ಲಿ ವಿಲನ್ ಪಾತ್ರ ಮಾಡಿರುವ ಕಾಕ್ರೋಜ್ ಸುಧಿ, ನಾಯಕಿಯ ತಂದೆ ಪಾತ್ರ ಮಾಡಿರುವ ರಮೇಶ್ ಭಟ್ ತಮ್ಮ ಅನುಭವ ಹಂಚಿಕೊಅಡರು. ಶೇಖರ್ ಚಂದ್ರ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಅನಿಲ್ ಸಿ.ಜೆ ಅವರ ಸಂಗೀತ, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಅವರ ಸಾಹಿತ್ಯವಿದೆ.