ಫಸ್ಟ್ ರ‍್ಯಾಂಕ್ ರಾಜು ಈಗ `ಜೇಮ್ಸ್ ಬಾಂಡ್ ರಾಜು` ಆಗಿ ಪ್ರೊಮೋಷನ್ ಪಡೆದಿದ್ದಾನೆ, ಗುರುನಂದನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ರಾಜು ಜೇಮ್ಸ್ ಬಾಂಡ್ ಚಿತ್ರ ಶುಕ್ರವಾರ ತೆರೆಕಂಡಿದೆ. ತನ್ನ ತಾಯಿಯ ನೆನಪಾಗಿ ಉಳಿದಿದ್ದ ಮನೆಯನ್ನು ಬ್ಯಾಂಕ್ ನಿಂದ ಉಳಿಸಿಕೊಳ್ಳಲು ಹೋಗಿ ಏನೇನೆಲ್ಲ ಅವಾಂತರ ಮಾಡಿಕೊಳ್ಳುತ್ತಾನೆ, ಇತ್ತ ಮನೆನೂ ಉಳಿಸಿಕೊಳ್ಳಲಾಗದೆ, ಪ್ರೀತಿಸಿದ ಹುಡುಗಿ ಯನ್ನೂ ಪಡೆದುಕೊಳ್ಳಲಾಗದೆ ರಾಜು ಹೇಗೆಲ್ಲಾ ಪರಿತಪಿಸುತ್ತಾನೆ ಎಂಬುದನ್ನು ಕುತೂಹಲಕಾರಿಯಾಗಿ ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರು ಈ ಚಿತ್ರದಲ್ಲಿ ನಿರೂಪಿಸಿದ್ದಾರೆ. ರಾಜು(ಗುರುನಂದನ್), ಕರೆಂಟ್ ಕೃಷ್ಣ(ಅಚ್ಯುತ್‌ಕುಮಾರ್)ನ ಜತೆ ಕರೆಂಟ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾನೆ, ದಿವ್ಯ(ಮೃದುಲಾ) ಆತನ ಮನಸನ್ನು ಕದ್ದ ಪ್ರೇಯಸಿ. ಟಿವಿ ಚಾನೆಲ್ ಒಂದನ್ನು ನಡೆಸುತ್ತಿರುವ ಟಿಆರ್‌ಪಿ ಪರಮೇಶ್(ಚಿಕ್ಕಣ್ಣ) ಕೂಡ ರಾಜುಗೆ ಪ್ರೀತಿಯ ಗೆಳೆಯ, ಈ ಮೂವರ ಕೆಲಸ, ಕರ್ತವ್ಯ ಬೇರೆಯೇ ಆದರೂ ಸಂಜೆ ಆಯಿತೆಂದರೆ ಒಟ್ಟಿಗೇ ಸೇರುತ್ತಾರೆ, ಎಣ್ಣೆ ಹಾಕುತ್ತಾರೆ, ಮೂವರಿಗೂ ಹಣದ ಅವಶ್ಯಕತೆಯಿರುತ್ತದೆ, ಅದರಲ್ಲೂ ರಾಜುಗೆ ಅದು ತೀವೃವಾಗಿರುತ್ತದೆ, ಏಕೆಂದರೆ ರಾಜು ತನ್ನ ಮನೆ ಮೇಲೆ ಮಾಡಿಕೊಂಡಿದ್ದ 25 ಲಕ್ಷ ರೂ. ಸಾಲದ ಅವಧಿ ಮೀರಿ, ಮನೆ ಹರಾಜಿಗೆ ಬಂದಿರುತ್ತದೆ. ಹೇಗಾದರೂ ಮಾಡಿ ಹಿರಿಯರು ಕಷ್ಟಪಟ್ಟು ಕಟ್ಟಿಸಿದ್ದ ಮನೆಯನ್ನು ಉಳಿಸಿಕೊಳ್ಳಬೇಕೆಂದು ರಾಜು ಶತಾಯ ಗತಾಯ ಪ್ರಯತ್ನ ಪಡುತ್ತಾನೆ, ಆಗದೇ ಇದ್ದಾಗ ಅದೇ ಊರಲ್ಲಿದ್ದ ಬ್ಯಾಂಕನ್ನೇ ದರೋಡೆ ಮಾಡುವ ಖತರ್ನಾಕ್ ಐಡಿಯಾ ರಾಜುಗೆ ಹೊಳೆಯುತ್ತದೆ, ಆರಂಭದಲ್ಲಿ ಇಷ್ಟು ದೊಡ್ಡ ರಿಸ್ಕ್ ಬೇಡ ಎಂದು ಗೆಳೆಯರಾದ ಪರಮೇಶ್, ಕೃಷ್ಣ ಸಲಹೆ ನೀಡಿದರೂ, ಹೇಗಾದರೂ ಮಾಡಿ ಹಣ ಹೊಂದಿಸಲೇಬೇಕು, ಮನೆಯನ್ನು ಉಳಿಸಿಕೊಳ್ಳಲೇಬೇಕು ಎಂದು ಭಂಡ ಧೈರ್ಯ ಮಾಡಿದ, ಸ್ನೇಹಿತನಿಗೆ ಉಳಿದಿಬ್ಬರು ಗೆಳೆಯರು ಅನಿವಾರ್ಯವಾಗಿ ಸಾಥ್ ಕೊಡಲು ಒಪ್ಪುತ್ತಾರೆ,
ಬ್ಯಾಂಕ್‌ನಲ್ಲಿ ಏನೇ ಕರೆಂಟ್ ಪ್ರಾಬ್ಲಂ ಬಂದರೂ ಸರಿ ಮಾಡಲು ಆಗಾಗ ಬ್ಯಾಂಕ್‌ಗೆ ಹೋಗಿ ಸರಿಮಾಡುವ ಕೃಷ್ಣನಿಗೆ ಎಲ್ಲೆಲ್ಲಿ ಸಿಸಿ ಟಿವಿ ಇದೆ, ಕರೆಂಟ್ ವ್ಯವಸ್ಥೆ ಹೇಗಿದೆ, ಸ್ಟಾçಂಗ್ ರೂಮ್ ಎಲ್ಲಿದೆ ಎಂಬುದರ ಬಗ್ಗೆ ಪೂರ್ತಿ ಮಾಹಿತಿ ಗೊತ್ತಿರುತ್ತದೆ, ಅದರಂತೆ ಒಂದು ರಾತ್ರಿ ವಿದ್ಯುತ್ ಕಂಭದಲ್ಲಿ ಕರೆಂಟ್ ತೆಗೆದು, ಸಿಸಿ ಟಿವಿ ಆಫ್ ಮಾಡಿ, ಬ್ಯಾಂಕ್ ಒಳಗೆ ಹೋದ ರಾಜು, ಬ್ಯಾಂಕ್ ಲಾಕರ್ ನಲ್ಲಿದ್ದ ೫೦ ಲಕ್ಷ ಹಣ ಹಾಗೂ ಮತ್ತೊಂದು ಪೆಟ್ಟಿಗೆಯಲ್ಲಿದ್ದ 25 ಕೋಟಿ ಹಣವನ್ನು ಕೂಡ ಹೊತ್ತು ಹೊರಬರುರುತ್ತಾನೆ, ಅದರಲ್ಲಿ 25 ಕೋಟಿ ಹಣ ಸ್ಥಳೀಯ ರಾಜಕಾರಣಿ ಭೂತಯ್ಯನ(ರವಿಶಂಕರ್) ಬ್ಲಾಕ್ ಮನಿ, ಭೂತಯ್ಯನಿಗೆ ರಾತ್ರಿಯೇ ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ತನ್ನ ಹಣವನ್ನು ಯಾರೋ ಟಚ್ ಮಾಡ್ತಿರುವ ವಿಷಯ ಸೈರನ್ ಮೂಲಕ ಗೊತ್ತಾಗಿ ಬ್ಯಾಂಕ್ ಮ್ಯಾನೇಜರ್‌ಗೆ ಕಾಲ್ ಮಾಡಿ ಹೇಳುತ್ತಾನೆ, ಆದರೆ ಅಷ್ಟೊತ್ತಿಗಾಗಲೇ ಈ ಮೂವರೂ ಎಸ್ಕೇಪ್ ಆಗಿರುತ್ತಾರೆ, ಬ್ಯಾಂಕ್ ರಾಬರಿ ಆದ ವಿಷಯ ಊರಲ್ಲೆಲ್ಲ ಸುದ್ದಿಯಾಗುತ್ತದೆ, ೨೫ ಕೋಟಿ ಹಣ ಕಳೆದುಕೊಂಡ ಶಾಸಕ ಭೂತಯ್ಯ ಬ್ಯಾಂಕ್ ಮ್ಯಾನೇಜರ್ ಮೇಲೆ ಹರಿಹಾಯುತ್ತಾನೆ, ಅದು ಕಪ್ಪು ಹಣವಾದ್ದರಿಂದ ಅಧಿಕೃತವಾಗಿ ಅದರ ಲೆಕ್ಕ ಪ್ರಚಾರ ಮಾಡುವಂತಿಲ್ಲ, ಹಣ ಕದ್ದವರನ್ನು ಪತ್ತೆ ಹಚ್ಚೋ ಜವಾಬ್ದಾರಿಯನ್ನು ಇನ್ಸ್ ಪೆಕ್ಟರ್ ಗೋಡ್ಸೆ(ಜೈಜಗದೀಶ್)ಗೆ ವಹಿಸುತ್ತಾನೆ, ಕೊನೆಗೆ ರಾಜು ಮತ್ತವನ ಗೆಳೆಯರೇ 25ಕೋಟಿ ಹಣವನ್ನು ಲಪಟಾಯಿಸಿರುವುದು ಭೂತಯ್ಯನಿಗೆ ಗೊತ್ತಾಗುತ್ತದೆ, ಅಷ್ಟೊತ್ತಿಗಾಗಲೇ ರಾಜು ಮತ್ತೊಂದು ಖತರ್ನಾಕ್ ಐಡಿಯಾ ಮಾಡಿರುತ್ತಾನೆ, ಹೀಗೆ ಸಾಗುವ ಕಥೆ ಕೊನೆಯವರೆಗೂ ಲೈವಿಯಾಗಿ ಮೂಡಿಬಂದಿದೆ. ಜತೆಗೆ ಆಗಾಗ ಬರುವ ಪಂಚಿಂಗ್ ಡೈಲಾಗ್‌ಗಳು ನೋಡುಗರಿಗೆ ಮಜಾ ಕೊಡುತ್ತವೆ. ಕೊನಗೂ ಆ ಹಣ ಎಲ್ಲಿ ಹೋಯಿತು, ರಾಜು ಹೇಗೆ ಜೇಮ್ಸ್ ಬಾಂಡ್ ಆದ, ನಾಯಕಿಯ ಕಥೆ ಏನಾಯಿತು, ಈ ಎಲ್ಲ ಪ್ರಶ್ನೆಗಳಿಗೆ
ನಿಮಗೆ ಉತ್ತರ ಬೇಕೆಂದರೆ ನೀವು ಇಂದೇ ಹತ್ತಿರದ ಥೇಟರಿಗೆ ಹೋಗಿ ಚಿತ್ರವನ್ನು ವೀಕ್ಷಿಸಲೇಬೇಕು. ಇಡೀ ಚಿತ್ರ ಎಂಟರ್‌ಟೈನಿಂಗ್ ಆಗಿದ್ದು ಒಳ್ಳೇ ಮಜಾ ಕೊಡುತ್ತದೆ, ಮೆಚ್ಯರ‍್ಡ್ ರಾಜುನ ಕಣ್ಣಾ ಮುಚ್ಚಾಲೆ ಆಟಗಳು ಮನರಂಜನೆ ನೀಡುತ್ತವೆ, ಎರಡು ಹಾಡುಗಳು ಕೇಳಲು ಖುಷಿ ಕೊಡುತ್ತವೆ. ಬೇಕಿತ್ತ ಬೇಕಿತ್ತಾ ಎಂಬ ಲವ್‌ಬ್ರೇಕಪ್ ಗೀತೆ ಎಣ್ಣೆ ಹಾಡು ಸದಾ ಗುನುಗುವಂತಿದೆ, ಮನೋಹರ ಜೋಷಿ ಅವರ ಕ್ಯಾಮೆರಾ ವರ್ಕ್ ಚೆನ್ನಾಗಿದೆ,