ಸಾಯಿರಾಂ ಸಿನಿಟಾಕೀಸ್ ಲಾಂಛನದಲ್ಲಿ ಜಿ ಶಿವಕುಮಾರ್ ನಿರ್ಮಾಣದ ಹಾಫ್ ಮೆಂಟಲ್ ಚಿತ್ರಕ್ಕೆ ನಗರದ ನಂದಿನಿ ಬಡಾವಣೆಯಲ್ಲಿ ನಾಯಕ ನಾಯಕಿ ಪ್ರೀತಿಯ ಆರಂಭ ಉಳಿದಂತೆ ಪ್ರತೀ ದಿನ ಬೆಳಿಗ್ಗೆ ಸಂಜೆ ಭೇಟಿಯಾಗಿ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ದೃಶ್ಯಗಳು ಚಿತ್ರೀಕರಣವಾಯಿತು. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಲಕ್ಷ್ಮೀ ದಿನೇಶ್, ಛಾಯಾಗ್ರಹಣ - ಪಿ.ಎಲ್.ರವಿ, ಸಂಗೀತ - ಬಿ.ಜೆ ಭರತ್, ಸಂಕಲನ - ಸಚಿನ್, ಸಾಹಸ - ಮಾಸ್ ಮಾದ, ನೃತ್ಯ- ಹೈಟ್ ಮಂಜ, ಮುರುಳಿ, ಸಹನಿರ್ದೇಶನ - ಕುಮಾರ್ ತಾವರೆಕೆರೆ, ಕಲೆ-ಪ್ರಭು, ನಿರ್ವಹಣೆ-ಸೋಮಶೇಖರ್ - ಸುಧೀಂದ್ರ ಹೊಸಹಳ್ಳಿ, ತಾರಾಗಣದಲ್ಲಿ ಸಂದೀಪ್, ಸೋನು, ಮೈಕೋ ನಾಗರಾಜ್, ಲಕ್ಷ್ಮೀದೇವಮ್ಮ, ತಬಲ ನಾಣಿ, ಶ್ರೀನಿವಾಸ್ ಗೌಡ, ಮೋಹನ್ ಜುನೇಜಾ, ಉಂಡಾಡಿ ಗುಂಡ ಹರಿ, ಮುಂತಾದವರಿದ್ದಾರೆ.