Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮುಂದಿನ ವಾರ ದಾದಾ ಈಸ್ ಬ್ಯಾಕ್
Posted date: 13 Thu, Jul 2017 09:01:39 AM
ಈ ಹಿಂದೆ ‘ಗೊಂಬೆಗಳ ಲವ್ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಸಂತೋಷ್ ನಿರ್ದೇಶನದ ಎರಡನೇ ಚಿತ್ರ ‘ದಾದಾ ಈಸ್ ಬ್ಯಾಕ್. ಈ ಚಿತ್ರ ಜುಲೈ ೨೧ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 
ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಜನಮನಸೂರೆಗೊಂಡಿದೆ. ಹನುಮಂತ ದೇವರ ಮೂಲಕ ಟ್ರೈಲರ್ ಡೇಟ್ ಅನೌನ್ಸ್ ಮಾಡಿಸಿದ್ದು  ಈ ಚಿತ್ರದ ವಿಶೇಷ! 
ಈ ಚಿತ್ರದಲ್ಲಿಯೂ ಗೊಂಬೆಗಳ ಲವ್ ಚಿತ್ರದಲ್ಲಿ ನಾಯಕರಾಗಿದ್ದ ಅರುಣ್ ನಾಯಕರಾಗಿದ್ದಾರೆ. ಶ್ರಾವ್ಯ ನಾಯಕಿ. ಖ್ಯಾತ ತಮಿಳು ನಟ ಪಾರ್ಥಿಬನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಧಾರಾಣಿ, ಶರತ್ ಲೋಹಿತಾಶ್ವ, ಅಜಯ್ ರಾಜ್ ಅರಸ್ ಮುಂತಾದವರ ಅದ್ದೂರಿ ತಾರಾಗಣ ಈ ಚಿತ್ರಕ್ಕಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮುಂದಿನ ವಾರ ದಾದಾ ಈಸ್ ಬ್ಯಾಕ್ - Chitratara.com
Copyright 2009 chitratara.com Reproduction is forbidden unless authorized. All rights reserved.