Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೀತಾ ಅಭಿನಯಿಸಿದ ಹಳ್ಳಿ ಪಂಚಾಯ್ತಿ ನಾಳೆಯಿಂದ ತೆರೆಗೆ
Posted date: 13 Thu, Jul 2017 09:15:30 AM
 ಬಹಳ ದಿನಗಳ ನಂತರ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿರುವ ನಟಿ ಶ್ರೀಮತಿ ಗೀತಾ ಅವರು ಮೊನ್ನೆ ಮಾಧ್ಯಮಗಳ ಮುಂದೆ ಹಾಜರಾಗಿ ಹಳ್ಳಿ ಪಂಚಾಯ್ತಿ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.   ಈ ಹಿಂದೆ ನವರಂಗಿ, ವಿನಾಶಿನಿಯಂಥ ವಿನೂತನ ಕಥಾಹಂದರ ಹೊಂದಿದ ಚಿತ್ರಗಳನ್ನು ನಿರ್ದೇಶಿಸಿದ್ದ ಜಿ.ಉಮೇಶ್  ಅವರ ನಿರ್ದೇಶನದಲ್ಲಿ ಮೂಡಿಬಂದಿರುವ  ಚಿತ್ರ ಹಳ್ಳಿ ಪಂಚಾಯ್ತಿ ನಾಳೆಯಿಂದ ರಾಜ್ಯಾದ್ಯಂತ ತೆರೆಕಾಣುತ್ತಿದೆ.  ಹಳ್ಳಿಯ ಪರಿಸರದಲ್ಲಿ ನಡೆಯುವ ಕಥಾನಕವೊಂದನ್ನು ಈ ಚಿತ್ರದಲ್ಲಿ ಹೇಳಲಾಗಿದ್ದು, ಈ ಚಲನಚಿತ್ರದ ಮೂಲಕ  ಈ ಹಿಂದೆ ಕೆಲ ಚಿತ್ರಗಳಲ್ಲಿ ಸಹ ಕಲಾವಿದೆಯಾಗಿ ಕಾಣಿಸಿಕೊಂಡಿದ್ದ  ನಟಿ ಪ್ರೇಮ ಯುವರಾಜ ಅವರು ನಿರ್ಮಾಪಕಿಯಾಗಿದ್ದಾರೆ. ವೈಷ್ಣವಿ ಎಂಟರ್‌ಟೈನ್‌ಮೆಂಟ್ ಮೂಲಕ ಪ್ರೇಮ ಯುವರಾಜ್ ನಿರ್ಮಿಸಿರುವ  ಮೊದಲ ಚಿತ್ರ ಇದಾಗಿದೆ. 
 ಎರಡು ರೇಖೆಗಳು, ಶೃತಿ ಸೇರಿದಾಗ, ಹೆಣ್ಣಿನ ಸೇಡು ಸೇರಿದಂತೆ ಹಲವಾರು ಚಿತ್ರಗಳಲ್ಲಿ  ಅಭಿನಯಿಸಿರುವ  ಹಿರಿಯ ನಟಿ ಗೀತಾ ಅವರು ನಾಯಕನ ತಾಯಿಯಾಗಿ ಪ್ರಮುಖ ಪಾತ್ರದಲ್ಲಿ  ಕಾಣಿಸಿಕೊಂಡಿರುವ  ಈ ಚಿತ್ರದಲ್ಲಿ ತಿಥಿ ಖ್ಯಾತಿಯ ಸೆಂಚುರಿಗೌಡ, ಗಡ್ಡಪ್ಪ ಹಾಗೂ ಅಭಿಷೇಕ್ ಕೂಡ ಅಭಿನಯಿಸಿದ್ದಾರೆ. ಹರಿಕಾವ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಚಿತ್ರದ ಹಾಡುಗಳಿಗೆ ಸಾಹಿತಿ ದೊಡ್ಡರಂಗೇಗೌಡ ಸಾಹಿತ್ಯ ರಚಿಸಿದ್ದಾರೆ.
 ಚಿತ್ರದಲ್ಲಿ ನಾಯಕ ಅಭಿ ತಾಯಿಯಾಗಿ ಕಾಣಿಸಿಕೊಂಡಿರುವ ಗೀತಾ ಮಾತನಾಡಿ ನಾನು ಈವರೆಗೆ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಗ್ರಾಮೀಣ ಮಹಿಳೆಯಾಗಿ ಪಾತ್ರ ನಿರ್ವಹಿಸಿದ್ದಿಲ್ಲ, ಹೊಲ ಊಳುವುದು, ಗದ್ದೆಯಲ್ಲಿ ಕೆಲಸ ಮಾಡುವುದು ನನಗೆ ಹೊಸ ಅನಭವ. ಛಾಯಾಗ್ರಾಹಕ ಮಹೇಂದರ್ ಅವರು ನನಗೆ ಇಂಥಾ ಒಂದು ಪಾತ್ರವಿದೆ ಎಂದು ಹೇಳಿದರು. ಹಾಗಾಗಿ ನಾನೀ ಪಾತ್ರವನ್ನು ನಿರ್ವಹಿಸಿದ್ದೇನೆ. ಕನ್ನಡ ಚಿತ್ರರಂಗ ನನಗೆ ಒಳ್ಳೇ ಹೆಸರನ್ನು ತಂದು ಕೊಟ್ಟಿದೆ. ಹಾಗಾಗಿ ಅದನ್ನು ನಾನೆಂದೂ ಮರೆಯಲಾರೆ. ಈಗಲೂ ಒಳ್ಳೇ ಪಾತ್ರಗಳು ಬಂದರೆ ನಾನು ಖಂಡಿತ ಅಭಿನಯಿಸುತ್ತೇನೆ ಎಂದು ಹೇಳಿದರು. ಚಿತ್ರದ ನಾಯಕಿ ಹಾಗೂ     ನಿರ್ಮಾಪಕಿ ಪ್ರೇಮ ಯುವರಾಜ ಮಾತನಾಡುತ್ತ  ಹಿಂದಿನಿಂದಲೂ ಚಿಕ್ಕಪುಟ್ಟ ಪಾತ್ರಗಳನ್ನು ಮಾಡುತ್ತಾ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದೆ. ಸುಮಾರು ಸಿನಿಮಾಗಳಲ್ಲಿ  ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿzನೆ. ನಾನು ಚಿಕ್ಕವಳಿದ್ದಾಗಿನಿಂದಲೂ  ಹಳ್ಳಿಗಾಡಿನಲ್ಲಿ  ವಾಸಿಸುವ ಜನರ ಸಮಸ್ಯೆಗಳು  ಏನು ಎಂಬುದನ್ನು   ಅರಿತುಕೊಂಡಿzನೆ. ನಾನು ಕೂಡ ಹಳ್ಳಿಗಾಡಿನಲ್ಲೇ  ಹುಟ್ಟಿ ಬೆಳೆದವಳು, ಗ್ರಾಮೀಣ ಭಾಷೆಯ ಸೊಗಡು,  ಸಂಸ್ಕೃತಿಯನ್ನು  ಉಳಿಸಿ ಬೆಳೆಸಬೇಕೆಂದು ಈ ಚಿತ್ರವನ್ನು ನಿರ್ಮಿಸಿದ್ದೇನೆ. ಈ ಚಿತ್ರದಲ್ಲಿ  ಹಳ್ಳಿಯ  ಟೀಚರ್  ಪಾತ್ರದಲ್ಲಿ ಕಾಣಿಸಿಕೊಂಡಿzನೆ ಎಂದು ಹೇಳಿದರು. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ  ಉಮೇಶ್ ಮಾತನಾಡಿ ಈ ಚಿತ್ರದಲ್ಲಿ ಗ್ರಾಮೀಣ ಪರಿಸರವನ್ನು ನೈಜವಾಗಿ ತೋರಿಸುವ ಪ್ರಯತ್ನ ಮಾಡಿದ್ದೇವೆ.  ನಮ್ಮ ರಾಜ್ಯದ  ಹಳ್ಳಿ ಪಂಚಾಯ್ತಿಯಲ್ಲಿ  ಈಗಲೂ ನ್ಯಾಯ ಎಂಬುದು ಜೀವಂತವಾಗಿದೆ.  ಮನೆಯಲ್ಲಿ ಅಡುಗೆ  ಮಾಡುವ ಮಹಿಳೆ ಕೂಡ ಸಂಸಾರದ ಭಾರವನ್ನು ಹೊತ್ತು, ಹೊಲದಲ್ಲಿ  ಉಳುಮೆ  ಮಾಡಬಲ್ಲಳು  ಎಂಬುದನ್ನು ಹೊರೊಯ ನಟಿ ಗೀತಾ ಅವರ ಪಾತ್ರದ ಮೂಲಕ ತೋರಿಸಿದ್ದೇವೆ.   ಮಂಡ್ಯದ ಸುತ್ತಮುತ್ತಲ ಗ್ರಾಮಗಳಲ್ಲಿ  ಸುಮಾರು  ೪೫ಕ್ಕೂ  ಹೆಚ್ಚು  ದಿನಗಳ ಕಾಲ  ಈ ಚಿತ್ರದ ಮಾತಿನಭಾಗ  ಹಾಗೂ ಹಾಡುಗಳನ್ನು  ಚಿತ್ರೀಕರಣ ಮಾಡಿzವೆ ಎಂದು ಹೇಳಿದರು.  

 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೀತಾ ಅಭಿನಯಿಸಿದ ಹಳ್ಳಿ ಪಂಚಾಯ್ತಿ ನಾಳೆಯಿಂದ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.