Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಮಾರ್ಜುನ ಚಿತ್ರಕ್ಕೆ ಅಪ್ಪು ಗಾಯನ
Posted date: 17 Tue, Sep 2019 08:50:30 PM

ವಿಂಕ್‌ವಿಷಲ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಸಂಸ್ಥೆಯಡಿಯಲ್ಲಿ ನಿರ್ಮಿಸುತ್ತಿರುವ  ಎರಡನೆಯ ಚಿತ್ರ ರಾಮಾರ್ಜುನ ಚಿತ್ರಕ್ಕೆ ಈಗಾಗಲೇ ಶೇಕಡ 80% ಭಾಗ ಚಿತ್ರೀಕರಣ ಪೂರೈಸಿದೆ. ಈ ಚಿತ್ರಕ್ಕಾಗಿ ಅಪ್ಪು ಪುನೀತ್ ರಾಜ್‌ಕುಮಾರ್‌ರವರು ಗೀತೆಯೊಂದನ್ನು ಹಾಡಿದ್ದಾರೆ. ನವೀನ್ ರೆಡ್ಡಿ ನಿರ್ದೇಶಿಸಿರುವ ಮನಸೆ ಮೂರು ದಾರಿಯನ್ನು ತೋರು ನೀನು, ನಿನ್ನೊಳಗೆ ಮರೆಯಾದ ನನಗೆ...ಪ್ರೀತಿ ಅಂದ ಮೇಲೆ ಈ ಗೀತೆಯನ್ನು ಹಾಡಿದದಾರೆ. ಇದಕ್ಕೂ ಮೊದಲು ಅಪ್ಪು ಅವರು ಅನಿಶ್ ಅವರ ಚಿತ್ರಕ್ಕೆ ಅಖಿರ ಹಾಗೂ ವಾಸು ನಾನು ಪಕ್ಕಾ ಕಮರ್ಷಿಯಲ್ ಕಣೋ ಚಿತ್ರಗಳಲ್ಲಿ ಹಾಡಿದ್ದರು.  ಚಿತ್ರದ ನಿರ್ದೇಶನ - ಅನಿಶ್, ಛಾಯಾಗ್ರಹಣ - ನವೀನ್ ಕುಮಾರ್, ಸಂಗೀತ - ಆನಂದ್ ರಾಜವಿಕ್ರಮ್, ಸಾಹಸ - ವಿಕ್ರಂ ಮೋರ್, ಸಂಭಾಷಣೆ - ಶಂಕರ್ ರಾಮನ್, ಕಿರಣ್ ಚಂದ್, ತಾರಾಗಣದಲ್ಲಿ ಅನಿಶ್, ನಿಶ್ವಿಕಾ, ರಂಗಾಯಣ ರಘು, ಶರತ್ ಲೋಹಿತಾಶ್ವ, ಹರೀಶ್ ರಾಜ್, ಅರುಣ ಬಾಲರಾಜ್, ಸ್ವಾತಿ, ಗಿರೀಶ್ ಶಿವಣ್ಣ, ದೀಪಕ್ ಶೆಟ್ಟಿ, ಹನುಮಂತೇಗೌಡ, ಸೀನಿ ಮಿತ್, ಉಗ್ರಂ ಮಂಜು, ಮಂಜು ಪಾವಗಡ, ಶಿವಾನಂದ ಸಿಂಧಗಿ, ಭರತ್, ಲೋಕಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಮಾರ್ಜುನ ಚಿತ್ರಕ್ಕೆ ಅಪ್ಪು ಗಾಯನ - Chitratara.com
Copyright 2009 chitratara.com Reproduction is forbidden unless authorized. All rights reserved.