Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಓಲ್ಡ್‌ ಮಾಂಕ್‌` ಸಿನಿಮಾದ ಕಲಾವಿದರ ಆಡಿಶನ್‌
Posted date: 27 Fri, Dec 2019 11:15:29 AM

ಸಿದ್ಧಿ ಎಂಟರ್‌ಟೈನ್‌ಮೆಂಟ್ಸ್‌ ಪ್ರೊಡಕ್ಷನ್‌ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ `ಓಲ್ಡ್‌ ಮಾಂಕ್` ಸಿನಿಮಾಕ್ಕೆ ನೂತನ ಕಲಾವಿದರ ಆಯ್ಕೆಗಾಗಿ ಬೆಂಗಳೂರಿನ ಎಂ. ಇ. ಎಸ್ ಕಾಲೇಜು, ಮಲ್ಲೇಶ್ವರಂ ನಲ್ಲಿ ದಿನಾಂಕ 29/12/2019 ರ ಭಾನುವಾರ  ಬೆಳಿಗ್ಗೆ 10 ರಿಂದ ಸಂಜೆ 6 ರ ವರೆಗೆ ಕಲಾವಿದರ ಆಡಿಶನ್‌ ಆಯೋಜಿಸಲಾಗಿದ್ದು ಆಸಕ್ತ ಕಲಾವಿದರು ಆಡಿಶನ್‌ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಕಲಾವಿದರ ವಯೋಮಿತಿ 7 ರಿಂದ 15 ವರ್ಷದೊಳಗಿನ ಮಕ್ಕಳು, 15 ರಿಂದ 50 ವರ್ಷದೊಳಗಿನ ಪುರುಷರು ಹಾಗೂ ಮಹಿಳೆಯರು, 50 ವರ್ಷ ಮೇಲ್ಪಟ್ಟ ವಯೋವೃದ್ಧರು ಈ ಆಡಿಶನ್‌ನಲ್ಲಿ ಭಾಗವಹಿಸಲು ಅವಕಾಶವಿದೆ. ಪ್ರದೀಪ್‌ ಶರ್ಮಾರವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು ಶ್ರೀನಿವಾಸ ಕಲ್ಯಾಣ ಹಾಗೂ ಬೀರ್‌ಬಲ್‌ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟರಾದ ಎಮ್.‌ ಜಿ. ಶ್ರೀನಿಯವರು ನಾಯಕನಟನಾಗಿ ಹಾಗೂ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಚಿತ್ರಕ್ಕೆ ಸೌರವ್‌ – ವೈಭವ್ ರವರು ಸಂಗೀತ ನೀಡಿದ್ದು, ಶ್ರೀಶ ಕುಡುವಳ್ಳಿಯವರ ಛಾಯಾಗ್ರಹಣವಿದ್ದು, ದೀಪು ಎಸ್‌ ಕುಮಾರ್‌ ಸಂಕಲನಕಾರರಾಗಿ ಹಾಗೂ ಪ್ರಸನ್ನ ವಿ. ಎಮ್‌ ಸಂಭಾಷಣಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ,  ಸಂತೋಷ್ ನಂದಕುಮಾರ್, ಪ್ರಸನ್ನ ವಿ. ಎಂ ಹಾಗೂ ಶ್ರೀನಿ ಯವರು ಕಥೆಯನ್ನು ರಚಿಸಿದ್ದಾರೆ.
   
*OLDMONK AUDITIONS* DETAILS


#28TH *MYSORE*

#29TH *BLORE*

#4TH *DAVANGERE*

#5TH *HUBLI*

#11TH *SHIMOGA*

#12TH *MANGALORE* 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಓಲ್ಡ್‌ ಮಾಂಕ್‌` ಸಿನಿಮಾದ ಕಲಾವಿದರ ಆಡಿಶನ್‌ - Chitratara.com
Copyright 2009 chitratara.com Reproduction is forbidden unless authorized. All rights reserved.