Chief Editor
Manohar. R (Manu)
Photo Journalist
chitrataramanu@gmail.com
+91 9845549026
`ಡಾಟರ್ ಆಫ್ ಪಾರ್ವತಮ್ಮ` ನಾಳೆಯಿಂದ ಬಿಡುಗಡೆ
Posted date: 23 Thu, May 2019 04:43:48 PM

ಯಾವುದೇ ನಾಯಕ ನಟಿಯ ವೃತ್ತಿಜೀವನದಲ್ಲಿ ಇಪ್ಪತ್ತೈದನೇ ಚಿತ್ರವೆನ್ನುವುದು ಅನೇಕ ವಿಶೇಷತೆಗಳಿಗೆ ಕಾರಣವಾಗಿರುತ್ತದೆ. ಮೊದಲ ಸಿನಿಮಾದಲ್ಲಿ ಅವಕಾಶ ಪಡೆದು, ಹಂತಹಂತವಾಗಿ ಬೆಳೆಯುತ್ತಾ ಬರೋಬ್ಬರಿ ಇಪ್ಪತ್ತೈದು ಚಿತ್ರಗಳನ್ನು ಪೂರೈಸುವುದೆಂದರೆ ಸುಮ್ಮನೇ ಮಾತಲ್ಲ. ಆದರೆ ನಟಿ ಹರಿಪ್ರಿಯಾ ಹನ್ನೆರಡು ವರ್ಷಗಳ ಸುದೀರ್ಘ ಅವಧಿಯಲ್ಲಿ 25ನೇ ಸಿನಿಮಾವನ್ನು ಕ್ರಮಿಸಿದ್ದಾರೆ. ಕನ್ನಡ ಚಿತ್ರರಂಗದ ಮಟ್ಟಿಗಂತೂ ಇದು ಸಾಧನೆಯೇ ಸರಿ `ಡಾಟರ್ ಆಫ್ ಪಾರ್ವತಮ್ಮ` ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಹಾಗೆ ಹರಿಪ್ರಿಯಾ ನಟನೆಯಲ್ಲಿ ಮೂಡಿಬಂದಿರುವ ಇಪ್ಪತ್ತೈದನೇ ಸಿನಿಮಾ ‘ಡಾಟರ್ ಆಫ್ ಪಾರ್ವತಮ್ಮ. ಒಂದು ಬಗೆಯ ಕೌತುಕದ ಕಥೆ ಈ ಸಿನಿಮಾದಲ್ಲಿದೆ. ಸುಮಲತಾ ಅಂಬರೀಶ್ ಅವರು ಪಾರ್ವತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡರೆ, ಅವರ ಮಗಳು ವೈದೇಹಿ ಪಾತ್ರವನ್ನು ಹರಿಪ್ರಿಯಾ ನಿಭಾಯಿಸಿದ್ದಾರೆ.

ಪತ್ತೇದಾರಿ ಪೊಲೀಸ್ ಅಧಿಕಾರಿ ಪಾತ್ರ ಅಂದರೆ ಅದು ಸಾಮಾನ್ಯವಾಗಿ ನಟರುಗಳಿಗೆ ಸೀಮಿತ. ಆದರೆ ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಆ ಜವಾಬ್ದಾರಿಯನ್ನು  ಹರಿಪ್ರಿಯಾ ಸ್ವೀಕರಿಸಿದ್ದಾರೆ. ಈ ಚಿತ್ರದಲ್ಲಿ ಹರಿಪ್ರಿಯಾ ಅವರ ಉಡುಗೆಯ ವಿನ್ಯಾಸವನ್ನು ನಟ ನಿರ್ದೇಶಕ ರಿಷಬ್‌ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಬಹಳ ಕ್ರಿಯಾಶೀಲವಾಗಿ ರೂಪಿಸಿದ್ದಾರೆ. ಸೂರಜ್ ಗೌಡ ಹಾಗೂ ಪ್ರಭು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಹಾಸ್ಯ ಕಲಾವಿದ ತರಂಗ ವಿಶ್ವ ಕೂಡಾ ನಕ್ಕುನಲಿಸುವ ಪಾತ್ರದಲ್ಲಿದ್ದಾರೆ .

ಕುತೂಹಲ ಭರಿತ ಕತೆಯೊಂದಿಗೆ ತಾಯಿ-ಮಗಳ ಭಾವನಾತ್ಮಕ ವಿಚಾರಗಳನ್ನಿಟ್ಟುಕೊಂಡು ಜೆ ಶಂಕರ್ ಭಿನ್ನ ಬಗೆಯ ಸಿನಿಮಾವನ್ನಾಗಿ ‘ಡಾಟರ್ ಆಫ್ ಪಾರ್ವತಮ್ಮ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಈ ಚಿತ್ರಕ್ಕೆ ಡಾಲಿ ಧನಂಜಯ್ ‘ಜೀವಕ್ಕಿಂತ ಜೀವ ಎನ್ನುವ ಸಾಲಿನ ಗೀತೆಯನ್ನು ರಚಿಸಿದ್ದಾರೆ ಹಾಗೂ ಕಿರಣ್ ಕಾವೇರಪ್ಪ ‘ನೀಲಿ ಬಾನಲಿ ಎಂಬ ಹಾಡನ್ನು ಬರೆದಿದ್ದಾರೆ. ಮಿದುನ್ ಮುಕುಂದನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ದಿಶಾ ಎಂಟರ್ಟೈನ್ಮೇಂಟ್ ಅಡಿಯಲ್ಲಿ ಈ ಚಿತ್ರಕ್ಕೆ ಹಣ ಹೂಡಿರುವವರು ಕೆ ಎಂ ಶಶಿಧರ್, ಎಂ ವಿಜಯಲಕ್ಷ್ಮಿ, ಸಂದೀಪ್ ಶಿವಮೊಗ್ಗ, ಶ್ವೇತ ಮಧುಸೂದನ್ ಹಾಗೂ ಕೃಷ್ಣೇಗೌಡ. ಕೆ ಅರುಳ್ ಸೋಮಸುಂದರನ್ ಛಾಯಾಗ್ರಹಣ, ಸುರೇಶ್ ಅರ್ಮುಗಮ್ ಸಂಕಲನ ಈ ಚಿತ್ರಕ್ಕಿದೆ.

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ಡಾಟರ್ ಆಫ್ ಪಾರ್ವತಮ್ಮ` ನಾಳೆಯಿಂದ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.