Chief Editor
Manohar. R (Manu)
Photo Journalist
chitrataramanu@gmail.com
+91 9845549026
`ನಿಗರ್ವ` ಆರಂಭ
Posted date: 20 Sat, Apr 2019 09:17:51 AM

ಮುಸುರಿ ಕೃಷ್ಣಮೂರ್ತಿ ಫ಼ಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ನಿಗರ್ವ‘ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಆರ್.ಎಸ್.ಗೌಡ ಸ್ಟೂಡಿಯೋದಲ್ಲಿ ನೆರವೇರಿತು. ಚಿತ್ರದ ಪ್ರಥಮ ಸನ್ನಿವೇಶಕ್ಕೆ ನಂದಿಹಾಳ್ ಅವರು ಆರಂಭ ಫಲಕ ತೋರಿದರು. ಡ್ಯಾನ್ಸ್ ಕಿಟ್ಟಿ ಕ್ಯಾಮೆರಾ ಚಾಲನೆ ಮಾಡಿದರು. ಅಲ್ಲದೇ ನಿರ್ಮಾಪಕ ರಾಜೇಶ್, ದಿಲ್ ಸತ್ಯ, ಆರ್.ಎಸ್.ಗೌಡ, ಕೃಷ್ಣೇಗೌಡ, ನಾಗೇಂದ್ರ ಅರಸ್ ಮುಂತಾದವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
ಜಯಸಿಂಹ ಮುಸುರಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುರುದತ್ ಮುಸುರಿ ಅವರ ಛಾಯಗ್ರಹಣವಿದೆ.
 ಬುಲೆಟ್ ವಿನು, ಕೃಷ್ಣೇಗೌಡ, ಭಾರತಿ ಹೆಗಡೆ, ಹರ್ಷಿತಾ ಗೌಡ, ರತ್ನಕುಮಾರಿ, ರಂಜಿತಾರಾವ್, ಅಶ್ವಿನಿರಾವ್, ಆರ್ಯನ್ ಸೂರ್ಯ ಮುಂತಾದವರು ಈ ಚಿತ್ರದ ತಾರಾಬಲಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - `ನಿಗರ್ವ` ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.