Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಜ್ಜ ಕೊನೇ ಹಂತದ ಚಿತ್ರೀಕರಣ
Posted date: 09 Wed, Aug 2017 09:03:26 AM
ಮಾದೇಶ್ವರ್ ಆರ್ಟ್ ಲಾಂಛನದಲ್ಲಿ, ಮೈಸೂರಿನ ಕೆ ಪಿ ಚಿದಾನಂದ್  ನಿರ್ಮಾಣದಲ್ಲಿ, ಶಿಸ್ತಿನ ನಿರ್ದೇಶಕ ಎಂದೇ ಹೆಸರಾದ ವೇಮಗಲ್ ಜಗನ್ನಾಥರಾವ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರ ‘ಅಜ್ಜ’. ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ೧೮ ದಿವಸಗಳಲ್ಲಿ ಮಡಿಕೇರಿ ಸುತ್ತ ಮುತ್ತ ಸಂಪೂರ್ಣಗೊಳಿಸಿ ಈಗ ಅಂತಿಮ ಹಂತದ ೧೦ ದಿವಸಗಳ ಚಿತ್ರೀಕರಣಕ್ಕೆ ಸಿದ್ದವಾಗಿದ್ದಾರೆ. ಕುಮಟಾ, ಬಸರೂರು ಹಾಗೂ ಇತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಿದ್ದಾರೆ.
 
ಎರಡು ಭಾರಿ ಅತ್ಯುತ್ತಮ ಪೋಷಕ ಕಲಾವಿದ ಎಂದು ರಾಷ್ಟ್ರ ಪ್ರಶಸ್ತಿ ಪಡೆದಿರುವ ದತ್ತಣ್ಣ ‘ಅಜ್ಜ’ನಾಗಿ ವೈವಿಧ್ಯಮಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೀರ್ಷಿಕೆಗೆ ‘ಆನ್ ಟೋಲ್ಡ್ ರಿಯಲ್ ಮಿಸ್ಟರಿ’ ಎಂದು ಉಪ ಶೀರ್ಷಿಕೆ ಇಟ್ಟುಕೊಂಡಿದ್ದಾರೆ. ಇದು ಕುತೂಹಲ ತುಂಬಿರುವ ಕಥಾವಸ್ತು. ಅಂದರೆ ಈ ‘ಅಜ್ಜ’ನ ಬಗ್ಗೆ ತಿಳಿದುಕೊಳ್ಳಬೇಕು. ಈತ ಮಹಾನ್ ಬುದ್ದಿಜೀವಿ, ಟೆಲಿಪತಿ ಕೂಡಾ ಗೊತ್ತು, ಚಿತ್ರ ಬಿಡುಸುವುದರಲ್ಲಿಯೂ ನಿಸ್ಸೀಮ. ಈ ‘ಅಜ್ಜ’ ಇರುವ ಮನೆಗೆ ನಾಲ್ಕು ಜನ ವೈದಕೀಯ ವಿಧ್ಯಾರ್ಥಿಗಳ ತಂಡ ಬರುವುದು. ಹಳ್ಳಿಯ ಗುಡ್ಡಗಾಡು ಪ್ರದೇಶದಲ್ಲಿ ಉಚಿತ ವೈದ್ಯಕೀಯ ಸೌಲಭ್ಯ ನೀಡುವ ಈ ತಂಡ ಹೇಗೆ ಸಿಕ್ಕಿಹಾಕಿಕೊಂಡು ಹೋರಾಟ ನಡೆಸುವ ಸಂದರ್ಭ ಎಂಬುದು ಚಿತ್ರದ ಕಥಾ ಹಂದರ.
 
ದತ್ತಣ್ಣ ಅವರ ಜೊತೆ ಬೇಬಿ ಕೃತಿಶ್ರೀ, ದೀಪಕ್ ರಾಜ್, ರಾಜ್ ನವೀನ್, ಮಾಧುರಿ, ಆಶಿನಿ, ಲತೀಶ್ ಕೂರ್ಗ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.
ಸಾಯಿ ಕಿರಣ್ ಎರಡು ಹಾಡುಗಳಿಗೆ ರಾಗ ಸಂಯೋಜನೆ ಮಾಡಲಿದ್ದಾರೆ, ರಾಜು ಶಿರಾಳಕೊಪ್ಪ ಚಿತ್ರದ ಛಾಯಾಗ್ರಾಹಕರು. ಶಿವಯಾದವ್ ಸಂಕಲನ ಇದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಜ್ಜ ಕೊನೇ ಹಂತದ ಚಿತ್ರೀಕರಣ - Chitratara.com
Copyright 2009 chitratara.com Reproduction is forbidden unless authorized. All rights reserved.