Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆಗಸ್ಟ್ 2 ರಂದು `ಅರ್ಜುನ್ ಗೌಡ` ಚಿತ್ರದ ಟೀಸರ್ ಬಿಡುಗಡೆ
Posted date: 01 Thu, Aug 2019 01:01:22 PM

ನಿರ್ಮಾಪಕ ರಾಮು ಅವರು ನಿರ್ಮುಸುತ್ತಿರುವ ‘ಅರ್ಜುನ್ ಗೌಡ‘ ಚಿತ್ರದ ಟೀಸರ್ ಆಗಸ್ಟ್ ೨ರಂದು ಬಿಡುಗಡೆಯಾಗಲಿದೆ. ಪ್ರಜ್ವಲ್ ನಾಯಕಾರಾಗಿ ನಟಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಬೆಂಗಳೂರು,  ಮೈಸೂರು, ಮಂಗಳೂರು, ಕಾರಾವಾರ ಮುಂತಾದ ಕಡೆ ೭೦ಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ನಡೆದಿದೆ. ವಿದೇಶದಲ್ಲಿ ನಡೆಯಬೇಕಿರುವ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ.

ಶಂಕರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಧರ್ಮವಿಶ್ ಅವರ ಸಂಗೀತ ನಿರ್ದೇಶನವಿದೆ. ಜೈಆನಂದ್ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಹಾಗೂ ಮಾಸ್ ಮಾದ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಜ್ವಲ್ ದೇವರಾಜ್, ಪ್ರಿಯಾಂಕ ತಿಮ್ಮೇಶ್, ಸಾಧುಕೋಕಿಲ, ರೇಖ, ಕಡ್ಡಿಪುಡಿ ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಶ್, ಯಮುನ ಶ್ರೀನಿಧಿ, ಭಜರಂಗಿ ಚೇತನ್, ಜೀವ, ಸೂರಜ್, ದಿನೇಶ್ ಮಂಗಳೂರು, ಹನುಮಂತೇಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆಗಸ್ಟ್ 2 ರಂದು `ಅರ್ಜುನ್ ಗೌಡ` ಚಿತ್ರದ ಟೀಸರ್ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.