Chief Editor
Manohar. R (Manu)
Photo Journalist
chitrataramanu@gmail.com
+91 9845549026
ಆರೋಹಣ ಚಿತ್ರೀಕರಣ ಪೂರ್ಣ
Posted date: 18 Thu, Jan 2018 08:50:40 AM
ನಾಗತಿಹಳ್ಳಿ ಚಂದ್ರಶೇಖರ್, ನಾಗಾಭರಣರಂಥ ಹಿರಿಯ ನಿರ್ದೇಶಕರ ಬಳಖಿ ಕೆಲಸ ಮಾಡಿರುವ ಶ್ರೀಧರ್ ಶೆಟ್ಟಿ ಅವರ ನಿರ್ದೇಶನದ ಮೊದಲ ಚಿತ್ರ ಆರೋಹಣ. ಇದೀಗ ಚಿತ್ರೀಕರಣ ಮುಗಿಸಿಕೊಂಡು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹಳ್ಳಿಯಲ್ಲಿ ನಡೆಯುವ ತಂದೆ-ಮಗನ ಕತೆ ಇದಾಗಿದ್ದು ಹಳ್ಳಿ ಪಂಚಾಯ್ತಿ ರಾಜಕೀಯ ಹಾಗೂ ಪ್ರೇಮ ಪ್ರಕರಣದಂಥ ವಿಷಯಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಬೆಂಗಳೂರು ಅಲ್ಲದೆ, ನೈಸ್ ರಸ್ತೆಯಲ್ಲಿನ ಮಂಗನಹಳ್ಳಿ ಸುತ್ತ ಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಶ್ರೀಧರ್ ಶೆಟ್ಟಿ ಅವರೇ ಈ ಚಿತ್ರದ ಕಥೆ, ಚಿತ್ರಕತೆ ಹಾಗೂ ಸಂಭಾಷಣೆಯನ್ನು ಬರೆದಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿವೆ. 
 
ಮಲ್ಲಿಕಾರ್ಜುನ ಪ್ರಡಕ್ಷನ್ಸ್ ಲಾಂಛನದಲ್ಲಿ ಸುಶೀಲ್ ಕುಮಾರ್ ನಿರ್ಮಿಸುತ್ತಿರುವ ಈಚಿತ್ರಕ್ಕೆ ಕೆ ವೈ ಶಿವಪುತ್ರ ಛಾಯಾಗ್ರಹಣ, ಉತ್ತಮ್ ರಾಜ್ ಆರ್ ಎನ್, ರಾಹುಲ್ ರಾಘವನ್ ಸಂಗೀತ, ಕೆ ಕಲ್ಯಾಣ್, ಶ್ರೀಧರ್ ಶೆಟ್ಟಿ ಸಾಹಿತ್ಯತ, ಜಗ್ಗು ನೃತ್ಯ ನಿರ್ದೇಶನ, ವೈಲೆಂಟ್ ವೇಲು ಸಾಹಸ, ದುರ್ಗಾ ಪಿ ಎಸ್ ಸಂಕಲನವಿದೆ. ಸುಶೀಲ್ ಕುಮಾರ್ ರೋಹಿತ್ ಶೆಟ್ಟಿ, ಪ್ರೀತಿ, ಶ್ರೀಧರ್ ಶೆಟ್ಟಿ, ರುದ್ರೇಗೌಡ, ಉಮೇಶ್ ಪುಂಗ, ಧೀಕ್ಷಾ, ಮೈತ್ರಿ, ರವಿ, ಆಶಾ, ಮಣಿ, ಜೂನಿಯರ್ ಸಾಯಿಬಾಬಾ ಮುಂತಾದವರ ತಾರಾಬಳಗವಿದೆ. 

 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಆರೋಹಣ ಚಿತ್ರೀಕರಣ ಪೂರ್ಣ - Chitratara.com
Copyright 2009 chitratara.com Reproduction is forbidden unless authorized. All rights reserved.