Chief Editor
Manohar. R (Manu)
Photo Journalist
chitrataramanu@gmail.com
+91 9845549026
ಇದೇ ತಿಂಗಳಲ್ಲಿ ವಿನಾಶಿನಿ ತೆರೆಗೆ
Posted date: 04 Wed, Oct 2017 09:53:37 AM
ಸೃಷ್ಟಿ ಮೂವಿ ಮೇಕರ‍್ಸ್ ಲಾಂಛನದಲ್ಲಿ ಎಂ. ಧನಂಜಯ್, ಎಸ್. ನಾಗೇಶ್, ಹರೀಶ್, ಮತ್ತು ಕೃಷ್ಣ ನಿರ್ಮಿಸುತ್ತಿರುವ ವಿನಾಶಿನಿ ಚಿತ್ರದ ಪ್ರಥಮ ಪ್ರತಿ ಸಿದ್ದವಾಗಿದ್ದು, ಲವ್, ಸಸ್ಪೆಸ್ನ್, ಹಾರರ್ ಕಥಾಹಂದರ ಹೊಂದಿರುವ ಈ ಚಿತ್ರವು ಸೆನ್ಸಾರ್ ಮನೆಯಲ್ಲಿದ್ದು, ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಕರು ತಿಳಿಸಿದ್ದಾರೆ. 
 
ಈ ಹಿಂದೆ ನವರಂಗಿ, ಹಳ್ಳಿ ಪಂಚಾಯಿತಿ ಚಿತ್ರವನ್ನು ನಿರ್ದೇಶಿಸಿದ್ದ ಜಿ.ಉಮೇಶ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೆಶಿಸುತ್ತಿರುವ ಈ ಚಿತ್ರಕ್ಕೆ ಎ.ಸಿ.ಮಹೇಂದ್ರನ್ ಛಾಯಾಗ್ರಹಣ, ಹರಿಕಾವ್ಯ ಸಂಗೀತ, ನಾಗೇಶ್ ಕಥೆ, ಎ.ಮೋಹನ್ ಸಂಕಲನ, ಸೂರಿ ನೃತ್ಯ ನಿರ್ದೇಶನವಿದೆ. ಆರ್ಯನ್, ಸುಮಲತ, ಆಶಿಕ್ ಗೌಡ, ಕಿಲ್ಲರ್ ವೆಂಕಟೇಶ್, ಹೊನ್ನವಳ್ಳಿ ಕೃಷ್ಣ, ಶ್ರೀನಿವಾಸ್ ಗೌಡ, ಬೌಬೌ ಜಯರಾಂ, ಜ್ಯೋತಿ ಮುಂತಾದವರ ತಾರಾಬಳಗವಿದೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಇದೇ ತಿಂಗಳಲ್ಲಿ ವಿನಾಶಿನಿ ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.