Chief Editor
Manohar. R (Manu)
Photo Journalist
chitrataramanu@gmail.com
+91 9845549026
ಎನ್ ಎಂ ಪ್ರಕಾಶ್ ರಾವ್ ಅವರಿಂದ ಎರಡು ಸಿನಿಮಾಗಳ ಸಿದ್ದತೆ
Posted date: 27 Wed, Mar 2019 05:15:58 PM

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಎನ್ ಓಂ ಪ್ರಕಾಶ್ ರಾವ್ ಈಗ ಎರಡು ಸಿನಿಮಾಗಳ ಸಿದ್ದತೆಯಲ್ಲಿದ್ದಾರೆ. ‘ಸಚ್ಚಿದಾನಂದ’ ಮತ್ತು ‘ಹೀರೋ’  ಎಂಬ ಎರಡು ಸಿನಿಮಾಗಳನ್ನು ಓಂ ಪ್ರಕಾಶ್ ರಾವ್ ಆರಂಭಿಸುತ್ತಿದ್ದಾರೆ. ಓಂಪ್ರಕಾಶ್ ರಾವ್ ಅವರ ಹಿಂದಿನ ಸಿನಿಮಾ ‘ಹುಚ್ಚ ೨’ ಬಳಿಕ ಒಂದಿಷ್ಟು ಬ್ರೇಕ್ ತೆಗೆದುಕೊಂಡಿದ್ದರು. ಈಗ ಎರಡು ಸಿನಿಮಾಗಳನ್ನು ಹೊಸ ನಿರ್ಮಾಪಕ, ನಾಯಕ ಹಾಗೂ ನಾಯಕಿಯರ ಪರಿಚಯದೊಂದಿಗೆ ಬರುತ್ತಿದ್ದಾರೆ.
ಸಚ್ಚಿದಾನಂದ
ರುಚಿತ್ ಮತ್ತು ನಿಹಾರಿಕ ಈ ಚಿತ್ರದಿಂದ ನಾಯಕ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ  ಅಚ್ಯುತ್ ಕುಮಾರ್, ಸ್ವಸ್ತಿಕ್ ಶಂಕರ್, ಮಂಜೇಶ್, ಸುಧಾ ಬೆಳವಾಡಿ, ಅರವಿಂದ್, ಭಾಸ್ಕರ್, ಸಾಧು ಕೋಕಿಲ ಹಾಗೂ ಇತರರು ತಾರಗಣದಲ್ಲಿರುವ ಈ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ಅವರೇ ಚಿತ್ರಕಥೆ ಹಾಗೂ ನಿರ್ದೇಶನ ಮಾಡುತ್ತಿದ್ದಾರೆ. ರವಿ ಛಾಯಾಗ್ರಹಣ, ಅರ್ಜುನ ಜನ್ಯ ಸಂಗೀತ, ಎಂ ಎಸ್ ರಮೇಶ್ ಸಂಭಾಷಣೆ, ಫಳಣಿ ರಾಜ್ ಸಾಹಸ, ಲಕ್ಷ್ಮಣ್ ರೆಡ್ಡಿ ಸಂಕಲನ ಇರುತ್ತದೆ.
‘ಸಚ್ಚಿದಾನಂದ’ ಚಿತ್ರವನ್ನು ವಿಕ್ಕಿ ಮಲ್ಹೋತ್ರ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ವಿಕ್ಕಿ ಮಲ್ಹೋತ್ರ ಅವರು ನಿರ್ಮಾಣ ಮಾಡುತ್ತಿದ್ದಾರೆ.
‘ಹೀರೋ’
ಓಂಪ್ರಕಾಶ್ ರಾವ್ ಅವರ ಮತ್ತೊಂದು ಸಿನಿಮಾದ ಹೆಸರು ‘ಹೀರೋ’. ಕಿಣ್ಣಿ ವಿನೋದ್ ಹಾಗೂ ಆರಾಧ್ಯ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಪೋಷಕ ಕಲಾವಿದರಾಗಿ ಶ್ರೀ ಮಂಜುನಾಥ್, ಶ್ರೀನಿವಾಸಮೂರ್ತಿ, ಸ್ವಸ್ತಿಕ್ ಶಂಕರ್, ಅವಿನಾಶ್, ಶರತ್ ಲೋಹಿತಾಶ್ವ, ಭಾಸ್ಕರ್, ಅರವಿಂದ್, ಸಾಧು ಕೋಕಿಲ ಹಾಗೂ ಇತರರು ಇದ್ದಾರೆ.
ಈ ಚಿತ್ರವನ್ನೂ ಸಹ ವಿಕ್ಕಿ ಮಲ್ಹೋತ್ರ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮಾಲೀಕ ವಿಕ್ಕಿ ಮಲ್ಹೋತ್ರ ನಿರ್ಮಾಣ ಮಾಡುತ್ತಿದ್ದಾರೆ. ಈ ‘ಹೀರೋ’ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ, ಚಂದ್ರ ಮೌಳಿ ಸಂಭಾಷಣೆ, ಮನೋಹರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಸಂಕಲನ, ಎಸ್ ವಿಜಯನ್ ಸಾಹಸ ಸಂಯೋಜನೆ ಇರುತ್ತದೆ. ಎನ್ ಓಂ ಪ್ರಕಾಶ್ ರಾವ್ ನಿರ್ದೇಶನದ ಜೊತೆ ಚಿತ್ರಕಥೆ ಸಹ ಬರೆದಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಎನ್ ಎಂ ಪ್ರಕಾಶ್ ರಾವ್ ಅವರಿಂದ ಎರಡು ಸಿನಿಮಾಗಳ ಸಿದ್ದತೆ - Chitratara.com
Copyright 2009 chitratara.com Reproduction is forbidden unless authorized. All rights reserved.