Chief Editor
Manohar. R (Manu)
Photo Journalist
chitrataramanu@gmail.com
+91 9845549026
ಓಂಪ್ರಕಾಶ್‌ರಾವ್ ನಿರ್ದೇಶನದ ನೂತನ ಚಿತ್ರ ಆರಂಭ
Posted date: 04 Wed, Oct 2017 10:03:01 AM
ದತ್ತ ಫ಼ಿಲಂಸ್ ಲಾಂಛನದಲ್ಲಿ ದತ್ತಾತ್ರೇಯ ಬಚ್ಚೇಗೌಡ ಹಾಗೂ ಭಾನುಶ್ರೀ ದತ್ತ ಅವರು ನಿರ್ಮಿಸುತ್ತಿರುವ, ಎನ್.ಓಂಪ್ರಕಾಶ್‌ರಾವ್ ನಿರ್ದೇಶನದ ನೂತನ ಚಿತ್ರದ ಮುಹೂರ್ತ ಸಮಾರಂಭ ಭಾನುವಾರ ಬಸವನಗುಡಿಯ ದೊಡ್ದ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಮದರಂಗಿ ಕೃಷ್ಣ ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಪ್ರಥಮ ಸನ್ನಿವೇಶಕ್ಕೆ ನಾಯಕ ವಿನೋದ್ ಪ್ರಭಾಕರ್ ಆರಂಭ ಫಲಕ ತೋರಿದರು. ಹಿರಿಯ ನಟ ಶ್ರೀನಿವಾಸಮೂರ್ತಿ ಕ್ಯಾಮೆರಾ ಚಾಲನೆ ಮಾಡಿದರು. ಅಕ್ಟೋಬರ್ ಹದಿನೈದರಿಂದ ಚಿತ್ರಕ್ಕೆ ಬೆಂಗಳೂರು, ಮೈಸೂರು, ಕೊಡಗು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. 
 
ಡೆನ್ನಿಸಾ ಪ್ರಕಾಶ್ ಅವರು ಬರೆದಿರುವ ಕಥೆಗೆ ಓಂಪ್ರಕಾಶ್‌ರಾವ್ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಜೆ.ಬಿ ಸಂಗೀತ ನಿರ್ದೇಶನ, ವಿ.ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ಎನ್ ರೆಡ್ಡಿ ಸಂಕಲನ ಹಾಗೂ ಪಳನಿರಾಜ್ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೃಷ್ಣ, ಕೃತಿಕಾ ಲೋಬೊ, ಶ್ರೀನಿವಾಸಮೂರ್ತಿ, ಅವಿನಾಶ್, ಅಚ್ಯುತ ರಾವ್, ಚಿತ್ರಾ ಶೆಣೈ, ಸುಧಾ ಬೆಳವಾಡಿ, ಸಾಧುಕೋಕಿಲ, ನಾಗಶೇಖರ್, ಪ್ರಶಾಂತ್ ಸಿದ್ದಿಕ್ ಮುಂತಾದವರಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಓಂಪ್ರಕಾಶ್‌ರಾವ್ ನಿರ್ದೇಶನದ ನೂತನ ಚಿತ್ರ ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.