Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕನ್ನಡಕ್ಕೆ ಬರ‍್ತಾಳಾ ಕಣ್ಸನ್ನೆಯ ಹುಡುಗಿ ಪ್ರಿಯಾ ವಾರಿಯರ್?
Posted date: 21 Wed, Feb 2018 07:58:04 PM
ಹುಬ್ಬು ಹಾರಿಸೋ ವೀಡಿಯೋ ಮೂಲಕ ದೇಶಾದಂತ ಪಡ್ಡೆಗಳನ್ನು  ಬಿಸಿಯೇರಿಸುತ್ತಲೇ ಏಕಾ ಏಕಿ ಸ್ಟಾರ್ ಆದವಳು ಪ್ರಿಯಾ ವಾರಿಯರ್. ಒಂದೇ ದಿನದಲ್ಲಿ ಭಾರೀ ಪ್ರಚಾರ ಪಡೆದು ನ್ಯಾಷನಲ್ ಕ್ರಶ್ ಅಂತ ಬಿಂಬಿತಳಾಗಿರೋ ಈ ಹುಡುಗಿಯೀಗ ಬೇರೆ ಬೇರೆ ಭಾಷೆಗಳಲ್ಲಿ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದಾಳೆ. ಇಂಥಾ ಪ್ರಿಯಾ ವಾರಿಯರ್ ಕನ್ನಡ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾಳೆಂಬುದು ಸದ್ಯದ ಹಾಟ್ ನ್ಯೂಸ್!
ಅಂದಹಾಗೆ ಇನ್ನಷ್ಟೇ ಚಿತ್ರೀಕರಣ ಆರಂಭಿಸಬೇಕಿರೋ ಯೋಗಿ ಲವ್ಸ್ ಸುಪ್ರಿಯಾ ಚಿತ್ರದಲ್ಲಿ ನಟಿಸಲು ಪ್ರಿಯಾ ವಾರಿಯರ್ ಒಪ್ಪಿಕೊಂಡಿದ್ದಾಳಂತೆ. ಕನ್ನಡ ಚಿತ್ರರಂಗದಲ್ಲಿ ಈಗ್ಗೆ ಎಂಟು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಯೋಗಿ ನಿರ್ದೇಶನ ಮತ್ತು ಮುಖ್ಯ ಭೂಮಿಕೆಯಲ್ಲಿ ಈ ಚಿತ್ರ ಮೂಡಿ ಬರಲಿದೆ. ಯೋಗಿ ಫೇಸ್‌ಬುಕ್ಕಲ್ಲಿ ಹವಾ ಎಬ್ಬಿಸಿದ ಪ್ರಿಯಾಳನ್ನು ಭೇಟಿ ಮಾಡಿ ತಮ್ಮ ಚಿತ್ರದಲ್ಲಿ ನಟಿಸಲು ಒಪ್ಪಿಸಿದ್ದರ ಹಿಂದೊಂದು ಸಾಹಸಗಾಥೆಯಿದೆ!
ಪ್ರಿಯಾಳ ಹುಬ್ಬು ಹಾರಿಸೋ ವೀಡಿಯೋ ಆರಂಭದಲ್ಲಿಯೇ ಯೋಗಿ ಕಣ್ಣಿಗೆ ಬಿದ್ದಿತ್ತಂತೆ. ಆದರೆ ಅದಾಗಿ ಕ್ಷಣಗಳು ಕಳೆಯುವಷ್ಟರಲ್ಲಿಯೇ ವಾಟ್ಸಾಪ್, ಫೇಸ್‌ಬುಕ್ ತುಂಬೆಲ್ಲಾ ಅದು ವೈರಲ್ ಆಗಿ ಹೋಗಿತ್ತು. ಈ ಹೊತ್ತಿಗೆಲ್ಲಾ ಯೋಗಿ ತಮ್ಮ ಚಿತ್ರಕ್ಕೆ ನಾಯಕಿಯನ್ನು ಹುಡುಕುತ್ತಿದ್ದರಲ್ಲಾ? ಅದಕ್ಕೆ ಈ ಕಣ್ಸನ್ನೆ ಹುಡುಗಿಯೇ ಸೂಟ್ ಆಗುತ್ತಾಳೆಂದುಕೊಂಡವರು ಕೊಚ್ಚಿಯಲ್ಲಿರೋ ತಮ್ಮ ಗೆಳೆಯರಿಗೆ ಫೋನಾಯಿಸಿ ಆ ವೀಡಿಯೋ ಡೀಟೇಲ್ಸ್ ಪಡೆದುಕೊಂಡಿದ್ದರು.
ಆದರೆ ಅದಾಗಲೇ ಕೆಲ ಸಂಘಟನೆಗಳು ಬೆದರಿಕೆ ಹಾಕಿದ್ದರಿಂದಾಗಿ ಪ್ರಿಯಾಳ ಮೊಬೈಲ್ ಸ್ವಿಚಾಫ್ ಆಗಿತ್ತು. ಕಡೆಗೂ ಪ್ರಯತ್ನ ಪಟ್ಟು ಒರು ಅಡಾರ್ ಲವ್ ಚಿತ್ರದ ನಿರ್ದೇಶಕನ ಮೂಲಕ ತಿಶೂರ್‌ಗೆ ತೆರಳಿದ ಯೋಗಿ ಕಡೆಗೂ ಪ್ರಿಯಾಳನ್ನು ಭೇಟಿಯಾಗಿದ್ದಾರೆ. ಕಥೆಯನ್ನು ಹೇಳಿದಾಗ ಆಕೆಯೂ ಖುಷಿಯಾಗಿಯೇ ಒಪ್ಪಿಕೊಂಡಿದ್ದಾಳಂತೆ. ಇನ್ನು ಅಂತಿಮ ಮಾತುಕತೆಯಷ್ಟೇ ಬಾಕಿ ಉಳಿದಿದೆ. ಸದ್ಯ ಭಾರೀ ಬ್ಯುಸಿಯಾಗಿರೋ ಪ್ರಿಯಾ ವಾರಿಯರ್ ಇಷ್ಟರಲ್ಲೇ ಯೋಗಿ ಲವ್ಸ್ ಸುಪ್ರಿಯಾ ಚಿತ್ರೀಕರಣಕ್ಕೆ ಹಾಜರಾಗಲಿದ್ದಾಳಾ ಅನ್ನೋದಷ್ಟೇ ಕಾದು ನೋಡಬೇಕು!
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕನ್ನಡಕ್ಕೆ ಬರ‍್ತಾಳಾ ಕಣ್ಸನ್ನೆಯ ಹುಡುಗಿ ಪ್ರಿಯಾ ವಾರಿಯರ್? - Chitratara.com
Copyright 2009 chitratara.com Reproduction is forbidden unless authorized. All rights reserved.