Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ 37 ಲಕ್ಷ ನಿಖಿಲ್ ಕುಮಾರ್ ಕುಮಾರಸ್ವಾಮಿ
Posted date: 28 Sat, Mar 2020 07:41:49 PM

ನಿರ್ಮಾಪಕ ಸಾ.ರಾ.ಗೋವಿಂದು ಅವರ ಮೂಲಕ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ಚೆಕ್ ರವಾನಿಸಿದ ನಿಖಿಲ್ ಕುಮಾರಸ್ವಾಮಿ

 

ಕೊರೋನ ಲಾಕ್ ಡೌನ್ ಇಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಷ್ಟಕ್ಕೆ ನಿಖಿಲ್ ಕುಮಾರಸ್ವಾಮಿ ಸ್ಪಂದಿಸಿದ್ದಾರೆ.. ಸುಮಾರು ೩೭ ಲಕ್ಷ ರೂಪಾಯಿ ಚೆಕ್ ಅನ್ನು ನಿರ್ಮಾಪಕ ಸಾ.ರಾ.ಗೋವಿಂದು ಅವರಿಗೆ ತಲುಪಿಸಿದ್ದಾರೆ.. 

ಇಂದು ಸಾ.ರಾ.ಗೋವಿಂದು ಅವರು ಗಾಂಧಿ ನಗರದಲ್ಲಿರುವ ಕರ್ನಾಟಕ ಚಲನಚಿತ್ರ ಕಾರ್ಮಿಕರ ಸಂಘಕ್ಕೆ ಆಗಮಿಸಿ, ಕಾರ್ಮಿಕರ ಸಂಘದ ಕಾರ್ಯದರ್ಶಿ ರವೀಂದ್ರ ಅವರಿಗೆ  ನಿಖಿಲ್ ಕುಮಾರಸ್ವಾಮಿ ಅವರು ನೀಡಿರುವ ಪರಿಹಾರದ ಚೆಕ್ ರವಾನಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್, ನಿರ್ಮಾಪಕರಾದ ಉಮೇಶ್ ಬಣಕಾರ್, ಕೆ.ಎಂ.ವೀರೇಶ್ ಉಪಸ್ಥಿತರಿದ್ದರು..

ಕಿರುತೆರೆಯಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೂ ನಿಖಿಲ್ ಕುಮಾರಸ್ವಾಮಿ   ಅವರು ಸಹಾಯ ನೀಡಿದ್ದು, ಟಿಲಿವಿಷನ್ ಅಸೋಸಿಯೇಷನ್ ಪರವಾಗಿ ನಟಿ ಅಭಿನಯ ಅವರು ಸಾ.ರಾ.ಗೋವಿಂದು ಅವರಿಂದ ಚೆಕ್ ಪಡೆದರು..

ಕರ್ನಾಟಕ ಚಲನಚಿತ್ರ ಕಾರ್ಮಿಕರಿಗೆ 32 ಲಕ್ಷ ಹಾಗೂ ಕಿರುತೆರೆ ಕಾರ್ಮಿಕರಿಗೆ 5 ಲಕ್ಷ ಒಟ್ಟು 37 ಲಕ್ಷ ರೂಪಾಯಿ ಸಹಾಯವನ್ನು ನಿಖಿಲ್ ಕುಮಾರಸ್ವಾಮಿ ಅವರು ಮಾಡಿದ್ದಾರೆ...

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ 37 ಲಕ್ಷ ನಿಖಿಲ್ ಕುಮಾರ್ ಕುಮಾರಸ್ವಾಮಿ - Chitratara.com
Copyright 2009 chitratara.com Reproduction is forbidden unless authorized. All rights reserved.