Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಲರ್ಸ್ ಸೂಪರ್‌ ಚಾನೆಲ್‌ ನಿಂದ ಒಂದು ಲಕ್ಷ ಮೊತ್ತದ ಅತ್ಯಾಕರ್ಷಕ ಸೀರೆ!
Posted date: 22 Tue, Aug 2017 10:14:46 AM
ಕಲರ್ಸ್ ಸೂಪರ್‌ಚಾನೆಲ್‌ನ ನಾನಿನ್ನ ಬಿಡಲಾರೆಧಾರಾವಾಹಿ ತಂಡಗಣೇಶನ ಹಬ್ಬವನ್ನು ಸಂಭ್ರಮದಿಂದಆಚರಿಸುತ್ತಿದೆ. ಗಣೇಶ ನಾ ನಿನ್ನ ಬಿಡಲಾರೆ ಎಂಬ ಕಾರ್ಯಕ್ರಮದ ಮೂಲಕ ಧಾರಾವಾಹಿಯ ಮುಖ್ಯ ಪಾತ್ರಧಾರಿ ನಂದಿನಿ, ಗಣೇಶನ ಭಕ್ತೆ, ತನ್ನಆರಾಧ್ಯದೇವರಾದ ವಿನಾಯಕನಿಗೆ ವಂದನೆ ಸಲ್ಲಿಸುತ್ತಾಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ. ಗಣೇಶ ನಾ ನಿನ್ನ ಬಿಡಲಾರೆಕಾರ್ಯಕ್ರಮವುಗಣಪತಿ ಹಬ್ಬದ ಪ್ರಯುಕ್ತಆಗಸ್ಟ್ ೨೧ ರಿಂದ ೨೯ ರವರೆಗೆ ಸಂಜೆ ೭ ಗಂಟೆಗೆ ಕಲರ್ಸ್ ಸೂಪರ್‌ಚಾನೆಲ್‌ನಲ್ಲಿ ಪ್ರಸಾರವಾಗಲಿದೆ.

ಗಣೇಶ ನಾನಿನ್ನ ಬಿಡಲಾರೆಕಾರ್ಯಕ್ರಮ ಹೊಸದನ್ನುಕಿರುತೆರೆಗೆ ಪರಿಚಯಿಸುತ್ತಿದೆ. ಇಲ್ಲಿಯತನಕ ಕೇಳದ ಅದ್ಧೂರಿ, ಅತ್ಯಾಕರ್ಷಕಉಡುಗೊರೆ, ಒಂದು ಲಕ್ಷ ಮೊತ್ತದ ಸೀರೆ ಪ್ರಪ್ರಥಮಬಾರಿಗೆ ಕಲರ್ಸ್ ಸೂಪರ್‌ಚಾನೆಲ್‌ನಿಂದಕಾರ್ಯಕ್ರಮಕ್ಕೆ ಆಗಮಿಸಿದ ಅದೃಷ್ಟವಂತ ಪ್ರೇಕ್ಷಕನೊಬ್ಬನಿಗೆದೊರೆಯಲಿದೆ! ಉಡುಗೊರೆಜೊತೆಗೆಒಂದಷ್ಟು ಮಜಾ, ಆಟ ಎಲ್ಲವೂಉಚಿತವಾಗಿಯೇ ಸಿಗುತ್ತವೆ.

ಅತೀ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಕಲರ್ಸ್ ಸೂಪರ್‌ಚಾನೆಲ್ ಹೊಸ ಹೊಸ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಲೇಇದೆ. ಈಗ "ಯುಗಳಗೀತೆ" ಎಂಬ ಹೊಚ್ಚ ಹೊಸ ಧಾರಾವಾಹಿಯನ್ನುಆರಂಭಿಸುತ್ತಿದ್ದು, ಈ ಹೊಸ ಧಾರಾವಾಹಿಯಕಲಾವಿದರು ಹಾಗೂ ತಂತ್ರಜ್ಞರನ್ನುಗಣೇಶ ನಾ ನಿನ್ನ ಬಿಡಲಾರೆ ವೇದಿಕೆಯ ಮೇಲೆ ಪರಿಚಯಿಸಲಾಗಿದೆ ಹಾಗೂ ಈ ನೂತನಧಾರಾವಾಹಿಯ ಕಲಾವಿದರುಗಳು ಡಾನ್ಸ್ ಮಾಡಿ ವೇದಿಕೆಗೆ ಮೆರುಗು ನೀಡಿದ್ದಾರೆ.

ಮಜಾಟಾಕೀಸ್‌ತಂಡ ನೆರೆದ ಪ್ರೇಕ್ಷಕರನ್ನು ನಕ್ಕು ನಗಿಸಿದರೆ, ನಾ ನಿನ್ನ ಬಿಡಲಾರೆಧಾರಾವಾಹಿ ಹಾಗೂ "ಯುಗಳಗೀತೆ" ಧಾರಾವಾಹಿಯಕಲಾವಿದರುಡಾನ್ಸ್ ಮಾಡಿ ವೀಕ್ಷಕರನ್ನು ರಂಜಿಸಿದ್ದಾರೆ.

ಒಟ್ಟಿನಲ್ಲಿ ನಾನಿನ್ನ ಬಿಡಲಾರೆಧಾರಾವಾಹಿಯು ೩೦೦ ಸಂಚಿಕೆಗಳನ್ನು ದಾಟಿ ಸಾಗುತ್ತಿರುವ ಸಂತಸವನ್ನು ನಂದಿನಿ, ಕಾಂಚನಾ, ಅಕ್ಷಯಜೊತೆಗೆಇಡೀಕುಟುಂಬ ವಿನಾಯಕನಿಗೆ ಪೂಜೆ ಸಲ್ಲಿಸುವುದರ ಮೂಲಕ ಗಣೇಶ ಹಬ್ಬದಲ್ಲಿಸಂಭ್ರಮಿಸುತ್ತಿದೆ.

ಗಣೇಶ ನಾ ನಿನ್ನ ಬಿಡಲಾರೆಕಾರ್ಯಕ್ರಮದಲ್ಲಿಇನ್ನಷ್ಟು ವಿಶೇಷಗಳನ್ನು ನೋಡಲು ಕಲರ್ಸ್ ಸೂಪರ್‌ಚಾನೆಲ್‌ನಲ್ಲಿಇದೇಸೋಮವಾರದಿಂದತಪ್ಪದೇ ವೀಕ್ಷಿಸಿ ಎಂಜಾಯ್ ಮಾಡಿ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಲರ್ಸ್ ಸೂಪರ್‌ ಚಾನೆಲ್‌ ನಿಂದ ಒಂದು ಲಕ್ಷ ಮೊತ್ತದ ಅತ್ಯಾಕರ್ಷಕ ಸೀರೆ! - Chitratara.com
Copyright 2009 chitratara.com Reproduction is forbidden unless authorized. All rights reserved.