Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಲರ್ಸ್ ಸೂಪರ್‌ನಲ್ಲಿ ಮನೆದೇವ್ರು
Posted date: 16 Sat, Sep 2017 08:11:54 AM
ಮನೆದೇವ್ರು ಸೀರಿಯಲ್ ವೀಕ್ಷಕರಿಗೊಂದು ಸಿಹಿ ಸುದ್ದಿ!. ಕಲರ್ಸ್‌ಕನ್ನಡದಲ್ಲಿರಾತ್ರಿ ವೇಳೆ ಪ್ರಸಾರವಾಗುತ್ತಿದ್ದ ಮನೆದೇವ್ರುಧಾರಾವಾಹಿ ಇನ್ನು ಮುಂದೆ ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾಗಲಿದೆ. ಇದೇ ಸೆಪ್ಟೆಂಬರ್ 18ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಾಯಂಕಾಲ 6 ಗಂಟೆಗೆ ನಿಮ್ಮ ಮೆಚ್ಚಿನ ಮನೆದೇವ್ರುಧಾರಾವಾಹಿಯನ್ನು ಆನಂದಿಸಬಹುದು. 

ಮನೆದೇವ್ರುಧಾರಾವಾಹಿ ಈಗಾಗಲೇ ವೀಕ್ಷಕರ ಮನಸೂರೆಗೊಂಡಿದೆ. ಒಂದೊಳ್ಳೆ ಕತೆಯನ್ನು ಮಿಸ್ ಮಾಡೋಕೂ ಆಗ್ದೆ ನಿದ್ದೆಟೈಮ್‌ನಲ್ಲಿ ನೋಡಬೇಕಲ್ಲಾಎಂದು ಪೇಚಾಡುತ್ತಿದ್ದ ವೀಕ್ಷಕರು ಸಂಜೆ ಟಿ.ವಿ. ಹಾಕಿದಕೂಡಲೇ ಮನೆದೇವ್ರು ನೋಡಬಹುದಾಗಿದೆ. ವೀಕ್ಷಕರಒತ್ತಾಸೆಯ ಮೇರೆಗೆ ಹಾಗೂ ಒಂದೊಳ್ಳೆ ಕತೆಯನ್ನು ಪ್ರಸಾರ ಮಾಡುವುದಕ್ಕಾಗಿ ಕಲರ್ಸ್ ಸೂಪರ್ ವಾಹಿನಿಗೆ ಮನೆದೇವ್ರುಧಾರಾವಾಹಿಯನ್ನು ವರ್ಗಾಯಿಸಲಾಗಿದೆ.

ಸ್ತ್ರೀ ಪುರುಷನಅಧೀನಎನ್ನುವ, ಪುರುಷಪ್ರಧಾನ ಕುಟುಂಬದಯಜಮಾನ ಜಯರಾಮನ ಮನೆತನಕ್ಕೆ ಸೊಸೆಯಾಗಿ ಬರುವ ನಾಯಕಿಜಾನಕಿಯ ಸುತ್ತ ಹೆಣೆದಿರುವ ಕತೆ ಮನೆದೇವ್ರು.  ಹೆಣ್ಣಿಗೆ ಸೂಕ್ತ ಸ್ಥಾನಮಾನಗಳು ದೊರೆಯುವಂತೆ ಮಾಡುವುದೇ ಜಾನಕಿಯ ಮುಂದಿರುವ ಸವಾಲು. ಜಯರಾಮನ ಮಗನ ಹೆಂಡತಿಯಿಂದ ತನ್ನ ಯಜಮಾನಿಕೆ, ಹೆಣ್ಣಿನ ಮೇಲಿನ ದಬ್ಬಾಳಿಕೆ ಅಂತ್ಯವಾಗುತ್ತೆಂಬುದು ಭವಿಷ್ಯವಾಣಿ. ಅವನ ಮಗ ಕಥಾನಾಯಕ ಸೂರ್ಯ ಗುಟ್ಟಾಗಿ ಜಾನಕಿಯನ್ನು ಮದುವೆಯಾಗಿರುತ್ತಾನೆ. ಕುಟುಂಬದ ಕಟುಸತ್ಯವನ್ನರಿತ ಜಾನಕಿ ಅಮೇರಿಕಾಕ್ಕೆ ಹೋಗಬೇಕೆನ್ನುವ ತನ್ನ ಕನಸನ್ನೇ ತ್ಯಾಗಮಾಡಿ ಸೀತೆ ಎಂಬ ಹೆಸರಿನಲ್ಲಿ ಸೂರ್ಯನ ಮನೆಗೆ ಕೆಲಸದವಳಾಗಿ ಬಂದು ಸೇರುತ್ತಾಳೆ. ಮನೆಕೆಲಸದವಳಾದರು ಕೆಲವೊಂದು ಪರಿಸ್ಥಿತಿಗಳಲ್ಲಿ ಮನೆಯ ಯಜಮಾನ ಜಯರಾಮ, ಅವನ ತಮ್ಮರಘುರಾಮ ಹಾಗೂ ಮಗ ಸೂರ್ಯ ಅಪಾಯದಲ್ಲಿರುವಾಗ ಪಾರು ಮಾಡಿ ಮನೆಯವರಿಗೆ ಹತ್ತಿರವಾಗಿರುತ್ತಾಳೆ. ಸೂರ್ಯಗುಟ್ಟಾಗಿ ಮದುವೆಯಾಗಿದ್ದಾನೆ ಎಂದು ಮನೆಯವರೆಲ್ಲರಿಗೂ ತಿಳಿದರೂ, ಅವಳು ಯಾರುಎಂದುಕಂಡುಹಿಡಿಯಲಾಗದೆಇದ್ದಾಗಜಯರಾಮ ಸೂರ್ಯನಿಗೆ ಮತ್ತೊಂದು ಮದುವೆ ಮಾಡಿದರೆ, ಅವನಿಗಿರುವ ಕಂಟಕ ದೂರಾಗುತ್ತದೆಂದು ಹೆಣ್ಣು ಹುಡುಕಿ ಮದುವೆ ಮಾಡಲು ಯೋಚಿಸುತ್ತಾನೆ. ಆದರೆ ವಿಧಿಯಾಟವೇ ಬೇರೆ ಸೂರ್ಯನಿಗೆಒಪ್ಪುವಂತಹ ಹುಡುಗಿ ನಮ್ಮ ಸೀತೆ ಎಂದು ಮಗನಿಗೆ ಮನೆ ಕೆಲಸದವಳೊಂದಿಗೆ ಮದುವೆ ಮಾಡುತ್ತಾನೆ. ಮನೆಯವರೆಲ್ಲರ ಮುಂದೆ ಸೂರ್ಯ-ಸೀತೆಯರು ಸಪ್ತಪದಿ ತುಳಿಯುತ್ತಾರೆ. ಇವರ ಮದುವೆಯ ಕೊನೆಯಕ್ಷಣದಲ್ಲಿ ರಘುರಾಮನಿಗೆ ಸೀತೆ ಬೇರೆಯಾರೂಅಲ್ಲ ಸೂರ್ಯನಗುಟ್ಟಾದ ಹೆಂಡತಿ ಜಾನಕಿ ಎಂದು ತಿಳಿಯುತ್ತದೆ. ಈಗ ಸೀತೆಯೇ ಜಾನಕಿ ಎಂಬ ಸತ್ಯಗೊತ್ತಾದರೂ ರಘುರಾಮ ಮುಚ್ಚಿಡುತ್ತಾನೆ. ಕಾರಣ ಅಣ್ಣ ಜಯರಾಮ್‌ ನಿಂದಾಗುವ ಅವಮಾನದ ವಿರುದ್ಧದ್ವೇಷ ತೀರಿಸಿಕೊಳ್ಳಲು ಸತ್ಯ ತಿಳಿದರೂ ಮುಚ್ಚಿಟ್ಟು ಜಾನಕಿಯನ್ನೇ ಹಗೆತನಕ್ಕೆ ಅಸ್ತ್ರವಾಗಿಸಿಕೊಳ್ಳಬೇಕೆಂದು ಯೋಚಿಸುತ್ತಾನೆ.  ಸೀತೆಯಾಗಿ ಮನೆಸೊಸೆಯಾದ ಜಾನಕಿ ಕುಟುಂಬದಲ್ಲಿರುವ ಸವಾಲುಗಳನ್ನು ಭೇದಿಸಬಲ್ಲಳೇ? ಈ ಪಯಣದಲ್ಲಿ ಅವಳು ಯಾವರೀತಿಯ ಸಂಕಷ್ಟಕ್ಕೆ ಸಿಲುಕುತ್ತಾಳೆ? ತನ್ನಕನಸನ್ನೇತ್ಯಾಗಮಾಡಿದಜಾನಕಿ ಮನೆಯ ಪರಿಸ್ಥಿಯನ್ನು ಬದಲಾಯಿಸಬಲ್ಲಳೇ? ಎಂಬುದೇ ಈ ಕತೆ.
ಮನೆದೇವ್ರು ಧಾರಾವಾಹಿಯನ್ನು ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಕಲರ್ಸ್ ಸೂಪರ್ ವಾಹಿನಿಯಲ್ಲಿತಪ್ಪದೇ ವೀಕ್ಷಿಸಿ!

ಕಲರ್ಸ್‌ಸೂಪರ್ ಬಗ್ಗೆ:-
ಕಲರ್ಸ್ ಸೂಪರ್ ಮನೋರಂಜನಾ ವಾಹಿನಿಯುಕುಟುಂಬ ಸಮೇತರಾಗಿಒಟ್ಟಾಗಿ ಕುಳಿತು ನೋಡುವಂತಹ, ಗುಣಾತ್ಮಕ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ನೀಡುತ್ತಿದೆ. ನಾಗಕನ್ನಿಕೆ, ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ, ನಾನಿನ್ನ ಬಿಡಲಾರೆ, ತುಳಸಿದಳ, ಬಿಗ್‌ಬಾಸ್, ಬಿಗ್‌ಬಾಸ್ ನೈಟ್ ಶಿಪ್ಟ್, ಮಜಾಭಾರತ, ಶಾಂತಂ ಪಾಪಂ, s ಸೂಪರ್‌ಟಾಕ್‌ಟೈಮ್ ಮೊದಲಾದ ಕಾರ್ಯಕ್ರಮಗಳನ್ನು ನೀಡುತ್ತಿರುವ ವಾಹಿನಿ ಇದು. 

ವಯಾಕಾಮ್೧೮ ಬಗ್ಗೆ:-
ವಯಾಕಾಮ್ ೧೮ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಮನೋರಂಜನಾ ನೆಟ್‌ವರ್ಕ್. ಇದು ವಯಾಕಾಮ್‌ಇಂಕ್. ಮತ್ತು ನೆಟ್‌ವರ್ಕ್೧೮ ಗುಂಪಿನ ಸಹಭಾಗಿತ್ವದ ಸಂಸ್ಥೆ. ವೈವಿಧ್ಯಮಯ ಕಾರ್ಯಕ್ರಮಗಳು, ಆನ್‌ಲೈನ್, ಶಾಪ್ಸ್ ಮತ್ತು ಸಿನಿಮಾಗಳ ಮೂಲಕ ವಯಾಕಾಮ್೧೮ ಭಾರತದಲ್ಲಿ ಮನೋರಂಜನೆಗೆ ಹೊಸ ರೂಪ ನೀಡಿದ ಸಂಸ್ಥೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಲರ್ಸ್ ಸೂಪರ್‌ನಲ್ಲಿ ಮನೆದೇವ್ರು - Chitratara.com
Copyright 2009 chitratara.com Reproduction is forbidden unless authorized. All rights reserved.