Chief Editor
Manohar. R (Manu)
Photo Journalist
chitrataramanu@gmail.com
+91 9845549026
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದವೇರ್ ಈಸ್ ಮೈ ಕನ್ನಡಕಚಿತ್ರಕ್ಕೆ ಚಾಲನೆ
Posted date: 12 Tue, Feb 2019 10:32:03 AM

ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ಅಭಿನಯಿಸುತ್ತಿರುವ ‘ವೇರ್ ಈಸ್ ಮೈ ಕನ್ನಡಕ‘ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಗರದ ಮಹಾಲಕ್ಷ್ಮೀ ಲೇಔಟ್‌ನ ಪಂಚಮುಖಿ ದೇವಸ್ಠಾನದಲ್ಲಿ ನೆರವೇರಿತು.

ಹಿಂದಿ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಪ್ರಸಿದ್ದಿ ಪಡೆದಿರುವ ರಾಜ್ ಹಾಗೂ ಧಾಮಿನಿ ಈ ಚಿತ್ರದ ನಿರ್ದೇಶಕರು. ಗಣೇಶ್ ಅವರೊಂದಿಗೆ ಪತ್ರಲೇಖ ಹಾಗೂ ಅರ್ಬಾಸ್ ಖಾನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಏಪ್ರಿಲ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಕನ್ನಡ ಸಿನಿಮಾ ಮಾರುಕಟ್ಟೆ ವ್ಯಾಪ್ತಿ ವಿಸ್ತಾರ ಆಗಿರುವುದಕ್ಕೆ ಸಂತಸಗೊಂಡಿರುವ ನಿರ್ದೇಶಕ ಜೋಡಿ ರಾಜ್ ಹಾಗೂ ಧಾಮಿನಿ ಅವರು ಈ ಚಿತ್ರದಲ್ಲಿ ಕನ್ನಡ ಹಾಗೂ ಹಿಂದಿ ಕಲಾವಿದರ ಸಂಗಮವಾಗುತ್ತಿದೆ ಎನ್ನುತ್ತಾರೆ. ತಮ್ಮ ಚೊಚ್ಚಲ ಕನ್ನಡ ಚಿತ್ರಕ್ಕೆ ವಿಭಿನ್ನ ಕಥೆ ಹಾಗೂ ಚಿತ್ರಕಥೆ ಸಿದ್ದ ಮಾಡಿಕೊಂಡಿರುವ ನಿರ್ದೇಶಕರು, ಚಿತ್ರದ

ಬಹುತೇಕ ಭಾಗದ ಚಿತ್ರೀಕರಣ ಲಂಡನ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಚಿತ್ರದ ಉಳಿದ ಕಲಾವಿದ ಹಾಗೂ ತಂತ್ರಜ಼್ಞರ ಆಯ್ಕೆ ಪ್ರಗತಿಯಲ್ಲಿದೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದವೇರ್ ಈಸ್ ಮೈ ಕನ್ನಡಕಚಿತ್ರಕ್ಕೆ ಚಾಲನೆ - Chitratara.com
Copyright 2009 chitratara.com Reproduction is forbidden unless authorized. All rights reserved.