Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜನವರಿಯಲ್ಲಿ ನೀ ನಿಲ್ಲದ ಮಳೆ ಬಿಡುಗಡೆ
Posted date: 09 Sat, Dec 2017 11:16:51 AM
ಅಮೋಘ್, ವ್ಯಾಲರಿ ಅಭಿನಯದ ನೀ ನಿಲ್ಲದ ಮಳೆ ಚಿತ್ರವು ಬಿಡುಗಡೆಗೆ ಸಿದ್ಧವಾಗಿದ್ದು, ಜನವರಿ ತಿಂಗಳಲ್ಲಿ ರಾಜ್ಯಾದ್ಯಂತ ತೆರೆ ಕಾಣಲಿದೆ. ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆ ಹಾಗೂ ಭಾರತೀಯರ ನಿಗೂಢ ಕಣ್ಮರೆಯಂತಹ ಗಹನವಾದ ವಿಚಾರಗಳ ಸುತ್ತ ನಡೆಯುವಂತಹ ಕುತೂಹಲಕಾರಿ ಕಥಾವಸ್ತುವನ್ನೊಳಗೊಂಡ ಈ ಚಿತ್ರವು ಅರ್ಧಕ್ಕಿಂತಲೂ ಹೆಚ್ಚಿನ ಭಾಗದ ಚಿತ್ರೀಕರಣ ಅಮೆರಿಕಾದಲ್ಲಿ ನಡೆದಿದೆ. ಮಾಸ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಡಾ.  ಶೈಲೇಂದ್ರ ಕೆ. ಬೆಲ್ ದಾಳ್,  ದೇವರಾಜ್ ಶಿಡ್ಲಘಟ್ಟ ಹಾಗೂ ಜನಾರ್ಧನ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ನೀ ನಿಲ್ಲದ ಮಳೆ ಚಿತ್ರಕ್ಕೆ ಅಮೋಘ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 
ಚಿತ್ರಕ್ಕೆ ಇಂದ್ರಸೇನಾ  ಸಂಗೀತ ಮತ್ತು  ಸಂಭಾಷಣೆ, ವಿಷಲ್ ಛಾಯಾಗ್ರಹಣ,  ಕವಿರಾಜ್ ಸಾಹಿತ್ಯ, ವಿಜಯ್ ಚಂಡೂರ್, ಶ್ರೀಕಾಂತ್  ಕಥೆ, ರವಿವರ್ಮ ಸಾಹಸ, ಮದನ್ ಹರಿಣೆ ಹಾಗೂ ರಾಮುರವರ ನೃತ್ಯ ನಿರ್ದೇಶನವಿದೆ. ಅಮೋಘ್ ವ್ಯಾಲರಿ (ಅಮೆರಿಕ), ಗಿರೀಶ್ ಕಾರ್ನಾಡ್, ತಬಲಾ ನಾಣಿ, ಭವ್ಯ, ಮನ್‌ದೀಪ್ ರಾಯ್, ಲಕ್ಕಿ ಶಂಕರ್, ರಾಕ್ ಲೈನ್ ಸುಧಾಕರ್, ಲಕ್ಷ್ಮಣ್, ಇತಿಯಾಚಾರ್ಯ, ಕುನಂಸೂತ್, ಸಮೋನಿಕಾ, ಮೋನಿಷಾ, ಜಂಗ್ಲಿ ಪ್ರಸನ್ನ ಮುಂತಾದವರ ತಾರಾ ಬಳಗವಿದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜನವರಿಯಲ್ಲಿ ನೀ ನಿಲ್ಲದ ಮಳೆ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.