Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೀ಼ ಕನ್ನಡ ಧಾರಾವಾಹಿಗಳಿಗ ಹೊಸ ಸಂಚಿಕೆಗಳಿಗೆ ಅಪಾರ ಮೆಚ್ಚುಗೆ
Posted date: 10 Wed, Jun 2020 – 02:40:32 PM

ಕನ್ನಡದ ಜನಪ್ರಿಯ ವಾಹಿನಿ ಜೀ಼ ಕನ್ನಡದಲ್ಲಿ ಲಾಕ್ ಡೌನ್ ನಂತರ ಮತ್ತೆ ಪ್ರಾರಂಭವಾದ ಧಾರಾವಾಹಿಗಳು ಭಾರಿ ಜನಪ್ರಿಯವಾಗಿವೆ. ಲಾಕ್ ಡೌನ್ ನಂತರ ಧಾರಾವಾಹಿಗಳ ಸಮಯ ಬದಲಾಗಿದ್ದರೂ ಜೊತೆ ಜೊತೆಯಲಿ, ಗಟ್ಟಿಮೇಳ, ಕಮಲಿ, ಪಾರು ಧಾರಾವಾಹಿಗಳು ಅಪಾರ ಜನಪ್ರಿಯತೆ ಪಡೆದಿವೆ. ಬದಲಾದ ಸಮಯದಲ್ಲೂ ವೀಕ್ಷಕರು ಈ ಎಲ್ಲ ಧಾರಾವಾಹಿಗಳನ್ನು ಹಿಂದಿಗಿಂತ ಹೆಚ್ಚು ಪ್ರೀತಿಯಿಂದ ವೀಕ್ಷಿಸುತ್ತಿದ್ದಾರೆ.

ಜೀ಼ ಕನ್ನಡ ವೀಕ್ಷಕರ ಮನಸ್ಸನ್ನು ಅರಿತು ಅದಕ್ಕೆ ತಕ್ಕಂತಹ ಸಾಮಾಜಿಕವಾಗಿ ಪ್ರಸ್ತುತವಾದ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ತರುವುದರಲ್ಲಿ ಮುಂಚೂಣಿಯಲ್ಲಿದೆ.

ಜೊತೆ ಜೊತೆಯಲಿ, ಗಟ್ಟಿಮೇಳ, ಕಮಲಿ, ಪಾರು ಧಾರಾವಾಹಿಗಳಲ್ಲಿರುವ ಮನರಂಜನೆಯ ಅಂಶವೇ ಅಲ್ಲದೆ ಅವುಗಳ ಸಾಮಾಜಿಕ ಸಂದೇಶ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ಜೀ಼ ಕನ್ನಡ ಧಾರಾವಾಹಿಗಳು ಕಥೆಯಲ್ಲ ನಿಜ ಜೀವನದ ಪ್ರತಿಬಿಂಬವಾಗಿದ್ದು ಅವುಗಳನ್ನು ಈ ಧಾರಾವಾಹಿಗಳು ಎತ್ತಿ ತೋರಿಸುತ್ತಿದ್ದು ಜನರ ಮನಸ್ಸಿಗೆ ಬಹಳ ಹತ್ತಿರವಾಗುತ್ತಿವೆ.

ಕೋವಿಡ್-19ರ ಹಿನ್ನೆಲೆಯಲ್ಲಿ ಜೀ಼ ಕನ್ನಡ ಧಾರಾವಾಹಿಗಳ ಚಿತ್ರೀಕರಣಕ್ಕೆ ವಿಶೇಷ ಮುನ್ನೆಚ್ಚರಿಕೆಗಳನ್ನು ವಹಿಸುತ್ತಿದೆ. ಸಾಧ್ಯವಾದಷ್ಟೂ ಕಡಿಮೆ ಕಲಾವಿದರು, ತಂತ್ರಜ್ಞರನ್ನು ಬಳಸಿ ಚಿತ್ರೀಕರಿಸುವುದಷ್ಟೇ ಅಲ್ಲದೆ ಕಡ್ಡಾಯವಾಗಿ ತಂತ್ರಜ್ಞರು ಗ್ಲೋವ್ಸ್, ಸ್ಯಾನಿಟೈಸರ್ ಮತ್ತು ಮಾಸ್ಕ್ ಬಳಸುವಂತೆ ನೋಡಿಕೊಳ್ಳಲಾಗುತ್ತಿದೆ.

ಮರು ಪ್ರಾರಂಭವಾದ ಧಾರಾವಾಹಿಗಳು ವೀಕ್ಷಕರ ಮನ ಸೆಳೆದಿರುವುದು ಜೀ಼ ಕನ್ನಡ ತಂಡಕ್ಕೆ ಹರ್ಷ ತಂದಿದೆ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ ನಿಮ್ಮ ಇಷ್ಟವಾದ  ಧಾರಾವಾಹಿಗಳು ನೋಡಿ ಕುಟುಂಬದ ಜೊತೆ ನೋಡಿ ಆನಂದಿಸಿ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೀ಼ ಕನ್ನಡ ಧಾರಾವಾಹಿಗಳಿಗ ಹೊಸ ಸಂಚಿಕೆಗಳಿಗೆ ಅಪಾರ ಮೆಚ್ಚುಗೆ - Chitratara.com
Copyright 2009 chitratara.com Reproduction is forbidden unless authorized. All rights reserved.