Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೀ಼ ಕನ್ನಡದ ಮಾಲ್ಗುಡಿ ಡೇಸ್ ನಲ್ಲಿ ಬರಲಿದ್ದಾರೆ ``ಶಂಕ್ರಣ್ಣ``
Posted date: 06 Sat, Jun 2020 – 04:27:43 PM

ಜೀ಼ ಕನ್ನಡ ವಿಶ್ವಾದ್ಯಂತ ಯಶಸ್ವಿಯಾಗಿ 14 ವರ್ಷಗಳನ್ನು ಪೂರೈಸಿದೆ. ``ಬಯಸಿದ ಬಾಗಿಲು ತೆಗೆಯೋಣ`` ಎಂಬ ಘೋಷವಾಕ್ಯದ ಮೂಲಕ ವಿಶ್ವದಾದ್ಯಂತ ಕನ್ನಡಿಗರ ಮನೆ ಮನೆಗೆ ತಲುಪಿದ ಕುಟುಂಬದ ಸಮಗ್ರ ಮನರಂಜನೆಯ ಕನ್ನಡ ವಾಹಿನಿಯಾಗಿದೆ. ಮಹರ್ಷಿವಾಣಿ, ಕನ್ನಡದ ಕಣ್ಮಣಿ, ಉಘೇ ಉಘೇ ಮಾದೇಶ್ವರ, ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿಥ್ ರಮೇಶ್, ಜೊತೆ ಜೊತೆಯಲಿ, ಗಟ್ಟಿಮೇಳ, ಕಮಲಿ, ಪಾರು ಇತ್ಯಾದಿ ಅಸಂಖ್ಯ ಧಾರಾವಾಹಿಗಳು ಮತ್ತು ರಿಯಾಲಿಟಿ ಶೋಗಳು ಜೀ಼  ಕನ್ನಡ ವಾಹಿನಿಯನ್ನು ಕನ್ನಡಿಗರ ಮನೆ ಮನೆ ಮಾತಾಗಿಸಿವೆ. ಜೀ಼  ಕನ್ನಡ ರೂಪಿಸಿದ ಪ್ರತಿ ಕಾರ್ಯಕ್ರಮವೂ ಜನಪ್ರಿಯವಾಗಿರುವುದೇ ಅಲ್ಲದೆ ವೀಕ್ಷಕರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಉಂಟು ಮಾಡಿರುವುದುಹೆಗ್ಗಳಿಕೆ.

ಆರ್.ಕೆ.ನಾರಾಯಣ್ ಅವರ ``ಮಾಲ್ಗುಡಿ ಡೇಸ್ಜೀ಼ ಕನ್ನಡ ವಾಹಿನಿಯಲ್ಲಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು ಅತ್ಯಂತ ಜನಪ್ರಿಯವಾಗಿದೆ. ವೀಕ್ಷಕರಿಗೆ ಈ ಧಾರಾವಾಹಿಯ ವಿಶೇಷ ಕಂತುಗಳು ಪ್ರಸಾರವಾಗಲಿದ್ದು ಈ ಧಾರಾವಾಹಿಯ ನಿರ್ದೇಶಕ ಶಂಕರ್ ನಾಗ್ ಜೂನ್ 8ರಂದು ಸೋಮವಾರ ಮತ್ತು ಜೂನ್ 9ರಂದು ಮಂಗಳವಾರ ಪ್ರಸಾರವಾಗಲಿರುವ ಕಂತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿಯಲ್ಲಿ ಬಂಡೆ ನಾಗ ಎಂಬ ಪಾತ್ರದಲ್ಲಿ ಶಂಕ್ರಣ್ಣ ಕಾಣಿಸಿಕೊಂಡಿದ್ದು ಎರಡು ಕಂತುಗಳಲ್ಲಿ ಮಾತ್ರ ಅವರ ಅಚ್ಚಳಿಯದ ಅಭಿನಯ ನೀಡಿದ್ದಾರೆ.

ಹಾವಾಡಿಗನ ಪಾತ್ರದಲ್ಲಿ ಶಂಕರ್ ನಾಗ್ ಜನರಿಗೆ ಹಾವಿನ ಕಡಿತದ ಔಷಧ ಮಾರುವುದಲ್ಲದೆ, ಹಾವು ಮೊಟ್ಟೆ ಸೇವಿಸುತ್ತದೆ ಎಂದು ಗೃಹಿಣಿಯರಿಗೆ ಪ್ರಾತ್ಯಕ್ಷಿಕೆ ನೀಡಿ ಮೊಟ್ಟೆಗಳನ್ನು ಪಡೆಯುತ್ತಾರೆ. ಅಲ್ಲದೆ ಹಾವಿನ ವಿಷದ ಹಲ್ಲು ಕೀಳುವ ಮೂಲಕ ಅದನ್ನು ನಿರಪಾಯಕಾರಿಯಾಗಿಸಿ ಬಳಸುವ ವಿದ್ಯೆಯನ್ನು ಪ್ರದರ್ಶಿಸುತ್ತಾರೆ. ಬಂಡೆನಾಗನ ಪ್ರೇಮಕಥೆಯೂ ಸಮಾನವಾಗಿ ನಡೆಯುತ್ತಿರುತ್ತದೆ. ಮಾಸ್ಟರ್ ಮಂಜುನಾಥ್ ಬಂಡೆನಾಗನ ಮಗನಾಗಿ ಅಭಿನಯಿಸಿದ್ದಾರೆ.

ರಾಷ್ಟ್ರೀಯ ಚಾನೆಲ್ ನಲ್ಲಿ ಕನ್ನಡಿಗರು ರೂಪಿಸಿದ ಯಶಸ್ವಿ ಧಾರಾವಾಹಿ, ದಿ.ಶಂಕರ್ ನಾಗ್ ನಿರ್ದೇಶನದ `ಮಾಲ್ಗುಡಿ ಡೇಸ್’ಜೀ಼ ಕನ್ನಡ ವಾಹಿನಿಯಲ್ಲಿ ಮೇ  11ರಿಂದ ಕನ್ನಡ ಭಾಷೆಯಲ್ಲಿ ಪ್ರಸಾರವಾಗುತ್ತಿದೆ. ಆರ್ ಕೆ ನಾರಾಯಣ್ ಅವರ ಬರಹಗಳ ಆಧಾರಿತ 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು 1986ರಲ್ಲಿ ಖ್ಯಾತ ನಿರ್ದೇಶಕ, ನಟ ಶಂಕರ್ ನಾಗ್ ದೂರದರ್ಶನಕ್ಕಾಗಿ ನಿರ್ದೇಶಿಸಿದ್ದರು. ಆ ಕಾಲದಲ್ಲಿ ಮಾಲ್ಗುಡಿ ಡೇಸ್ ಅಪಾರ ಜನಮನ್ನಣೆ ಗಳಿಸಿತ್ತು. ಮರು ಪ್ರಸಾರದಲ್ಲಿಯೂ ಕನ್ನಡಿಗರ ಮನ ಗೆದ್ದಿದೆ.

ವಿಷ್ಣುವರ್ಧನ್, ಅನಂತ್ ನಾಗ್, ಗಿರೀಶ್ ಕಾರ್ನಾಡ್, ಮಾಸ್ಟರ್ ಮಂಜುನಾಥ್, ವೈಶಾಲಿ ಕಾಸರವಳ್ಳಿ, ಬಿ.ಜಯಶ್ರೀ, ಶಂಕರ್ ನಾಗ್, ಅರುಂಧತಿ ನಾಗ್ ಮುಂತಾದವರು ನಟಿಸಿದ್ದಾರೆ. ಮಾಲ್ಗುಡಿ ಡೇಸ್ 39 ಕಂತುಗಳಲ್ಲಿ 1986ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಈ ಧಾರಾವಾಹಿಯ ಮಾಲ್ಗುಡಿಯನ್ನು ಶಂಕರ್ ನಾಗ್ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ರೂಪಿಸಿದ್ದರು.

 

ಮಾಲ್ಗುಡಿ ಡೇಸ್ 39 ಕಂತುಗಳಲ್ಲಿ 1986ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ಈ ಧಾರಾವಾಹಿಯ ಮಾಲ್ಗುಡಿಯನ್ನು ಶಂಕರ್ ನಾಗ್ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ರೂಪಿಸಿದ್ದರು. ಎಲ್.ವೈದ್ಯನಾಥನ್ ಸಂಗೀತ, ಆರ್.ಕೆ.ನಾರಾಯಣ್ ಅವರ ಸೋದರ ಆರ್.ಕೆ.ಲಕ್ಷ್ಮಣ್ ಅವರ ಚಿತ್ರಗಳು ಈ ಧಾರಾವಾಹಿಯ ಮಹತ್ವ ಹೆಚ್ಚಿಸಿವೆ. ಈ ಸರಣಿಯನ್ನು ಟಿ.ಎಸ್.ನರಸಿಂಹನ್ ನಿರ್ಮಾಣ ಮಾಡಿದ್ದರು.

ಎಲ್.ವೈದ್ಯನಾಥನ್ ಸಂಗೀತ, ಆರ್.ಕೆ.ನಾರಾಯಣ್ ಅವರ ಸೋದರ ಆರ್.ಕೆ.ಲಕ್ಷ್ಮಣ್ ಅವರ ಚಿತ್ರಗಳು ಈ ಧಾರಾವಾಹಿಯ ಮಹತ್ವ ಹೆಚ್ಚಿಸಿವೆ. ಈ ಸರಣಿಯನ್ನು ಟಿ.ಎಸ್.ನರಸಿಂಹನ್ ನಿರ್ಮಾಣ ಮಾಡಿದ್ದರು. ಈ ಧಾರಾವಾಹಿ ಸ್ವಾಮಿ ಅಂಡ್ ಫ್ರೆಂಡ್ಸ್, ಎ ಹಾರ್ಸ್ ಅಂಡ್ ಟು ಗೋಟ್ಸ್, ಅನ್ ಅಸ್ಟ್ರಾಲಜರ್ಸ್ ಡೇ ಮತ್ತಿತರೆ ಸಣ್ಣ ಕಥೆಗಳು ಹಾಗೂ ಸ್ವಾಮಿ ಅಂಡ್ ಫ್ರೆಂಡ್ಸ್ ಮತ್ತು ದಿ ವೆಂಡರ್ ಆಫ್ ಸ್ವೀಟ್ಸ್ ಕಾದಂಬರಿಯನ್ನು ಆಧರಿಸಿದೆ.

ಈ ಧಾರಾವಾಹಿ ಸ್ವಾಮಿ ಅಂಡ್ ಫ್ರೆಂಡ್ಸ್, ಎ ಹಾರ್ಸ್ ಅಂಡ್ ಟು ಗೋಟ್ಸ್, ಅನ್ ಅಸ್ಟ್ರಾಲಜರ್ಸ್ ಡೇ ಮತ್ತಿತರೆ ಸಣ್ಣ ಕಥೆಗಳು ಹಾಗೂ ಸ್ವಾಮಿ ಅಂಡ್ ಫ್ರೆಂಡ್ಸ್ ಮತ್ತು ದಿ ವೆಂಡರ್ ಆಫ್ ಸ್ವೀಟ್ಸ್ ಕಾದಂಬರಿಯನ್ನು ಆಧರಿಸಿದೆ.ಈ ಧಾರಾವಾಹಿ ಸ್ವಾಮಿ ಅಂಡ್ ಫ್ರೆಂಡ್ಸ್, ಎ ಹಾರ್ಸ್ ಅಂಡ್ ಟು ಗೋಟ್ಸ್, ಅನ್ ಅಸ್ಟ್ರಾಲಜರ್ಸ್ ಡೇ ಮತ್ತಿತರೆ ಸಣ್ಣ ಕಥೆಗಳು ಹಾಗೂ ಸ್ವಾಮಿ ಅಂಡ್ ಫ್ರೆಂಡ್ಸ್ ಮತ್ತು ದಿ ವೆಂಡರ್ ಆಫ್ ಸ್ವೀಟ್ಸ್ ಕಾದಂಬರಿಯನ್ನು ಆಧರಿಸಿದೆ.
ಜೂನ್ 08 2020 ರಂದು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 6.30ಕ್ಕೆ ಪ್ರಸಾರವಾಗಲಿದೆ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ 'ಮಾಲ್ಗುಡಿ ಡೇಸ್' ನೋಡಿ ಕುಟುಂಬದ ಜೊತೆ ನೋಡಿ ಆನಂದಿಸಿ.




Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೀ಼ ಕನ್ನಡದ ಮಾಲ್ಗುಡಿ ಡೇಸ್ ನಲ್ಲಿ ಬರಲಿದ್ದಾರೆ ``ಶಂಕ್ರಣ್ಣ`` - Chitratara.com
Copyright 2009 chitratara.com Reproduction is forbidden unless authorized. All rights reserved.