Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೊತೆಯಾಗಿ ಹಿತವಾಗಿ ಹೈಲೈಟ್ ನಟಿ ತಾರಾ
Posted date: 28/June/2010

ಸಿನಿಮಾ ಮಂಜು ಮಂಜಿನ ವಾತಾವರಣದಲ್ಲೇ ಶುರುವಾಗಿ, ಮಂಜು ಕರಗಿದಂತೇ ಎರಡೂವರೆ ತಾಸಿನಲ್ಲಿ ಕರಗಿಬಿಡುತ್ತದೆ. ಕಣ್ಣ ಮುಂದೆ ತಾಯಿ ಹಾಗೂ ಮಗನ ಆಕೃತಿ ಮಾತ್ರ ಉಳಿದುಕೊಳ್ಳುತ್ತದೆ!
ತಾಯಿಗೆ ಮಗನೇ ಆಸರೆ, ಅವನನ್ನು ಬಿಟ್ಟು ಇವಳಿಲ್ಲ. ಇವಳಿಗೆ ಮಗನೇ ಎಲ್ಲ. ಹೀಗಿರುವಾಗ ಅಲ್ಲೊಂದು ಬಿರುಗಾಳಿ ಬೀಸುತ್ತದೆ. ಇದ್ದಕ್ಕಿದ್ದಂತೆ ತಾಯಿಯ ಕೊಲೆಯಾಗುತ್ತದೆ. ಅದಕ್ಕೂ ಮುನ್ನ ಆ ತಾಯಿಯ ಮಗನನ್ನು ಪಕ್ಕದ ಮನೆಯ ಹುಡುಗಿಯೊಬ್ಬಳು ಪ್ರೀತಿ ಮಾಡಿರುತ್ತಾಳೆ. ಅವಳ ಅಪ್ಪನ ಹೆಣ ಇವನ ತಾಯಿಯ ಪಕ್ಕ ಬಿದ್ದಿರುತ್ತದೆ. ಹಾಗಾದರೆ ಆಕೆಗೂ ಆ ಹುಡುಗಿಯ ಅಪ್ಪನಿಗೂ ಸಂಬಂಧವೇನು?
ಗೊತ್ತಿಲ್ಲ ಎನ್ನುವಂತಿಲ್ಲ. ಇಲ್ಲಿಯೇ ಎಲ್ಲವನ್ನೂ ಹೇಳುವಂತಿಲ್ಲ. ಹಾಗೇನಾದರೂ ಮಾಡಿದರೆ ನಿರ್ದೇಶಕರು ಮುನಿಸಿಕೊಳ್ಳುತ್ತಾರೆ. ನಿರ್ಮಾಪಕರು ರೇಗುತ್ತಾರೆ!
ನಿರ್ದೇಶಕ ಶ್ರೀನಿವಾಸ್ ಅವರಿಗೆ ಕತೆಯ ಬಗ್ಗೆ ತುಂಬಾ ಕಾನ್‌ಫಿಡೆನ್ಸ್ ಇದ್ದ ಹಾಗೆ ಕಾಣುತ್ತದೆ. ಆದರೆ, ನಟರಿಗೆ ಪಾತ್ರವನ್ನು ಸರಿಯಾಗಿ ನಿಬಾಯಿಸಿಕೊಂಡು ಹೋಗಲು ಬಂದಿಲ್ಲ. ಪಾಪ, ನಾಯಕ ನವೀನ್ ನಟಿಸಲು ಸಿಕ್ಕಾಪಟ್ಟೆ ಒದ್ದಾಡಿದ್ದಾನೆ. ಪರ ಪರ ಪರದಾಡಿದ್ದಾನೆ. ನಗುವಾಗಲಂತೂ ಭಯೋತ್ಪಾದನೆ ಮಾಡುತ್ತಾನೆ. ರೇಗುತ್ತಾನೆ, ಕೂಗುತ್ತಾನೆ, ಅಳುತ್ತಾನೆ, ಬುಳು ಬುಳು ಓಡಾಡುತ್ತಾನೆ. ಧ್ವಿತಿಯಾರ್ಧದ ನಂತರ ಬರುವ ವಿಲನ್ ಒಬ್ಬ ಅಪಹಾಸ್ಯ ಮಾಡುತ್ತಾ ಕಿರುಚುತ್ತಾನೆ. ಪರಚುತ್ತಾನೆ. ಮೈಮೇಲೆ ಮೈಕಲ್ ಜಾಕ್ಸನ್ ಬಂದಂತೆ ಆಡುತ್ತಾನೆ.
ಇಡೀ ಚಿತ್ರದ ಹೈಲೈಟ್ ನಟಿ ತಾರಾ. ಈಗಾಗಲೇ ಅವರು ಅದ್ಭುತ ನಟಿ ಎನ್ನುವುದು ಪ್ರೂವ್ ಆಗಿದೆ. ಅದೇ ನಟನೆಯ ವೇಗವನ್ನು ಅವರು ಇಲ್ಲಿಯೂ ಕಾಯ್ದುಕೊಂಡಿದ್ದಾರೆ. ಮುಗ್ಧ ತಾಯಿಯಾಗಿ ಇಡೀ ಪರದೆ ತುಂಬಿಕೊಳ್ಳುತ್ತಾರೆ. ಅಳುತ್ತಾ ಅಳುತ್ತಾ ಕಾವ್ಯವಾಗುತ್ತಾರೆ. ಕಣ್ಣಲ್ಲೇ ಎಲ್ಲವನ್ನೂ ಹೇಳುತ್ತಾರೆ.
ನಿರ್ದೇಶಕರು ನಿಜಕ್ಕೂ ಹೊಸ ಪ್ರಯತ್ನ ಮಾಡಿದ್ದಾರೆ. ಅಲ್ಲಿ ಕಣ್ಣಿಗೆ ಕಟ್ಟಿಕೊಡುವ ಮಲೆನಾಡಿನ ದೃಶ್ಯಗಳು, ದೇವಾ ಸಂಗೀತದ ಸುಮಧುರ ಹಾಡುಗಳು, ಅದಕ್ಕೆ ತಕ್ಕ ಶಾಟ್‌ಗಳು... ಹೀಗೆ ಪ್ರತೀ ಹಂತದಲ್ಲೂ ನಿರ್ದೇಶಕರ ಶ್ರಮ ಕಾಣುತ್ತದೆ. ಜೈಜಗದೀಶ್, ರಾಮಕೃಷ್ಣ, ನೀನಾಸಂ ಅಶ್ವತ್ಥ್ ಮೊದಲಾದವರು ಮನೋಜ್ಞವಾಗಿ ನಟಿಸಿದ್ದಾರೆ. ವಿಶಾಲ ಭಾವದಿಂದ ಅಭಿನಯಿಸಿ, ಕತೆಗೆ ನ್ಯಾಯ ಒದಗಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೊತೆಯಾಗಿ ಹಿತವಾಗಿ ಹೈಲೈಟ್ ನಟಿ ತಾರಾ - Chitratara.com
Copyright 2009 chitratara.com Reproduction is forbidden unless authorized. All rights reserved.