Chief Editor
Manohar. R (Manu)
Photo Journalist
chitrataramanu@gmail.com
+91 9845549026
ಝೀ ಕನ್ನಡದ ಗಟ್ಟಿಮೇಳದಲ್ಲಿ ನಾಯಕನಟ ವಿಜಯರಾಘವೇಂದ್ರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ
Posted date: 11 Tue, Feb 2020 – 09:09:00 AM

ಜಗತ್ತಿನಾದ್ಯಂತ ಕನ್ನಡದ ವೀಕ್ಷಕರ ಹೃದಯಗಳನ್ನು ಬೆಸೆಯುವ ದೃಢನಿಶ್ಚಯದೊಂದಿಗೆ ತಾಜಾತನ ಮತ್ತು ಹೊಸದಾದ ವಿಚಾರಗಳನ್ನು ತರುತ್ತಿರುವ ಕನ್ನಡದ ಸಾಮಾನ್ಯ ಮನೋರಂಜನಾ ವಾಹಿನಿಯಾದ ಝೀ ಕನ್ನಡವು ಸ್ಯಾಂಡಲ್‌ವುಡ್‌ನ ತಾರೆ ವಿಜಯರಾಘವೇಂದ್ರ ಅವರನ್ನು ಗಟ್ಟಿಮೇಳ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. “ಚಿನ್ನಾರಿ ಮುತ್ತ” ಎಂದು ಜನಪ್ರಿಯವಾಗಿರುವ ವಿಜಯರಾಘವೇಂದ್ರ ಅವರು ಗಟ್ಟಿಮೇಳದ 10 ಮತ್ತು 11 ನೇ ಸಂಚಿಕೆಯಲ್ಲಿ ಫೆಬ್ರವರಿ 2020 ರಂದು ಝೀ ಕನ್ನಡ ಹಾಗೂ ಝೀ ಕನ್ನಡ ಎಚ್‌ಡಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಗಟ್ಟಿಮೇಳಕ್ಕೆ ವಿಜಯರಾಘವೇಂದ್ರ ಅವರು ಹೊಂದಿರುವ ಮೆಚ್ಚುಗೆಯನ್ನು ಬಳಸಿಕೊಂಡು ಝೀವಾಹಿನಿಯು ಸ್ಯಾಂಡಲ್‌ವುಡ್‌ನ ಒಂದು ಬಹುನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾದ ಮಾಲ್‌ಗಾಡಿಯ ಪ್ರಚಾರದ ಉದ್ದೇಶಕ್ಕಾಗಿ ಗಟ್ಟಿಮೇಳದ ಸೆಟ್‌ಗೆ ಆಹ್ವಾನಿಸುವ ಅವಕಾಶವನ್ನು ಪಡೆಯಿತು. ವಿಜಯರಾಘವೇಂದ್ರ ಅವರ ಬಗ್ಗೆ ಅಮೂಲ್ಯ ಅವರಿಗಿರುವ ಪ್ರೀತಿಯನ್ನು ಅರ್ಥಮಾಡಿಕೊಂಡು, ವೇದಾಂತ್ ತನ್ನ ಮನೆಗೆ ವಿಜಯರಾಘವೇಂದ್ರ ಅವರನ್ನು ಕರೆತರುತ್ತಾನೆ. ಇದರಿಂದ ಅಮೂಲ್ಯಳಿಗೆ ಬಹಳ ಸಂತೋಷವಾಗುತ್ತದೆ, ವಿಜಯ್ ವೇದಾಂತ್‌ಗೆ ಅಮೂಲ್ಯ ಬಗೆಗೆ ಆತನಿಗಿರುವ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತಾರೆ.
ಧಾರವಾಹಿಯ ಆರಂಭದಿಂದಲೂ ಅದರ ಅಭಿಮಾನಿಯಾಗಿರುವ ವಿಜಯರಾಘವೇಂದ್ರ ಅವರು ಇದರಲ್ಲಿ ಪಾತ್ರವಹಿಸುತ್ತಿರುವುದು ಝೀ ಕನ್ನಡ ಹಾಗೂ ಗಟ್ಟಿಮೇಳ ತಂಡಕ್ಕೆ ಬಹಳ ಸಂತೋಷವನ್ನು ನೀಡಿದೆ.

ನಿಮ್ಮ ಕಿರುತೆರೆಯಲ್ಲಿ ನಿಮ್ಮ ನೆಚ್ಚಿನ ತಾರೆಯನ್ನು ಫೆಬ್ರವರಿ 10 ಮತ್ತು 11ನೇ ದಿನಾಂಕದಂದು ಕೇವಲ ಝೀ ಕನ್ನಡ ಹಾಗೂ ಝೀ ಕನ್ನಡ ಎಚ್‌ಡಿಯಲ್ಲಿ ಮಾತ್ರ ಆನಂದಿಸಿರಿ.


Kannada Cinema's Latest Wallpapers
Kannada Cinema's Latest Videos
Kannada Movie/Cinema News - ಝೀ ಕನ್ನಡದ ಗಟ್ಟಿಮೇಳದಲ್ಲಿ ನಾಯಕನಟ ವಿಜಯರಾಘವೇಂದ್ರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ - Chitratara.com
Copyright 2009 chitratara.com Reproduction is forbidden unless authorized. All rights reserved.