Chief Editor
Manohar. R (Manu)
Photo Journalist
chitrataramanu@gmail.com
+91 9845549026
ಡ್ರೀಮ್ ಗರ್ಲ್ ಪಡೆಯಿತು ಯು/ಎ ಅರ್ಹತಾ ಪತ್ರ
Posted date: 03 Thu, Aug 2017 08:37:12 AM
ಬರಹಗಾರ ಹಾಗೂ ನಿರ್ಮಾಪಕ ಲಕ್ಷ್ಮಣ್ ನಾಯಕ್ ಅವರ ರಚನೆಯ ‘ಜೀವನ ಸಾತಿ’ ಕಾದಂಬರಿ ಆಧಾರಿತ ಕನ್ನಡ ಸಿನಿಮಾ ‘ಡ್ರೀಮ್ ಗರ್ಲ್’ ಸೆನ್ಸಾರ್ ಮಂಡಳಿ ಇಂದ ‘ಯು/ಎ’ ಅರ್ಹತಾ ಪತ್ರವನ್ನು ಪಡೆದುಕೊಂಡಿದೆ.
 
ಭಾರತೀಯ ಚಿತ್ರ ರಂಗದ ಕನಸಿನ ರಾಣಿ ಡ್ರೀಮ್ ಗರ್ಲ್ ಅಂದರೆ ಹೇಮ ಮಾಲಿನಿ. ಈಗಿನ ಈ ಸಿನಿಮಾದ ಕನಸಿನ ರಾಣಿ ಅಮೃತ ರಾವ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೊಂದು ವಿಭಿನ್ನ ಪ್ರೇಮ ಕಥೆ. ಆಗರ್ಭ ಶ್ರೀಮಂತ ತಂದೆ ತನ್ನ ಮಗಳನ್ನು ಮುದ್ದಾಗಿ ಸಾಕಿರುತ್ತಾನೆ. ಅವಳು ಒಬ್ಬ ಬಡವನನ್ನು ಪ್ರೇಮಿಸಲು ಶುರು ಮಾಡಿದಾಗ ಅಪ್ಪ ಹೂಡುವ ತಂತ್ರ ಮಗಳನ್ನು ಆ ಹುಡುಗನಿಂದ ದೂರ ಇಡುವುದೇ ಚಿತ್ರದ ಬಹು ಮುಖ್ಯ ಅಂಶ.
 
ಎಸ್ ಜಿ ಎಲ್ ಪ್ರೊಡಕ್ಷನ್ ಅಡಿಯಲ್ಲಿ ಲಕ್ಷ್ಮಣ್ ನಾಯಕ್ ಅವರೇ ಕಥೆ, ಚಿತ್ರಕಥೆ, ಗೀತ ರಚನೆ, ಸಹಾಯಕ ನಿರ್ದೇಶಕ ಹಾಗೂ ನಿರ್ಮಾಪಕ ಸಹ ಆಗಿದ್ದಾರೆ. ಸೂರ್ಯ ಸತೀಶ್ ಈ ಚಿತ್ರವನ್ನ ನಿರ್ದೇಶನ ಮಾಡಿರುವರು. ೪೫ ದಿವಸಗಳ ಕಾಲ ಮಂಡ್ಯ, ಮುಳ್ಳಯ್ಯಯನಗಿರಿ ಸುತ್ತ ಮುತ್ತ  ಚಿತ್ರೀಕರಣ ಮಾಡಲಾಗಿದೆ.
 
ವಿ ಮನೋಹರ್ ಅವರ ಸಂಗೀತ, ಗಂಧರ್ವ ಅವರು ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಅಮೃತ ರಾವ್ ಡ್ರೀಮ್ ಗರ್ಲ್ ಆದರೆ ಇವರ ಜೊತೆಗೆ ಅಜಿತ್, ರಘು ಭಟ್, ದೀಪಿಕಾದಾಸ್, ಅವಿನಾಷ್, ತಿಮ್ಮೆ ಗೌಡ, ಅಪೂರ್ವ, ಮಹೇಂದ್ರ ಮುನೋತ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಡ್ರೀಮ್ ಗರ್ಲ್ ಪಡೆಯಿತು ಯು/ಎ ಅರ್ಹತಾ ಪತ್ರ - Chitratara.com
Copyright 2009 chitratara.com Reproduction is forbidden unless authorized. All rights reserved.